ಚಿಂತಾಮಣಿ: Police Varthe
ಕಾಲೇಜು ಪ್ರಾರಂಭವಾಗಿ ವರ್ಷಗಳು ಕಳೆದರೂ ಇಲ್ಲದ ಗ್ರೂಪ್ ಡಿ ನೌಕರರು
ಚಿಂತಾಮಣಿ :ವಿದ್ಯಾಲಯ ವೆಂದರೆ ಜ್ಞಾನದ ದೇಗುಲ ಎನ್ನುತ್ತಾರೆ ಆದರೆ ಚಿಂತಾಮಣಿಯ ಸರ್ಕಾರಿ ಐಟಿಐ ಕಾಲೇಜಿನ ಪ್ರಾಂಶುಪಾಲ ಹಾಗೂ ನಿರ್ವಾಹಕರ ನಿರ್ಲಕ್ಷ್ಯದಿಂದ ಕಾಲೇಜಿನ ತುಂಬ ಕಸಕಡ್ಡಿ ತುಂಬಿ ಸ್ವಚ್ಚತೆಯೆ ಮರೀಚಿಕೆಯಾಗಿದೆ.
ನೂರಾರು ವಿದ್ಯಾರ್ಥಿಗಳು ಇರುವ ಕಾಲೇಜಿನಲ್ಲಿ ಒಬ್ಬ ಗ್ರೂಪ್ ಡಿ ನೌಕರರು ಸಹ ಇಲ್ಲಾ ಆದರಿಂದ ವಿದ್ಯಾರ್ಥಿಗಳೆ ಎರಡು ಮೂರು ದಿನಗಳಿಗೊಮ್ಮೆ ಕಸ ಕ್ಲೀನ್ ಮಾಡುವ ದುಸ್ಥಿತಿ ಎದುರಾಗಿದೆ.
ಅಷ್ಟೇ ಅಲ್ಲದೆ ಇಲ್ಲಿ ಯಾವ ಮೂಲೆಯಲ್ಲಿ ನೋಡಿದರೂ ಟೀ ಗ್ಲಾಸ್, ಟಿಪನ್ ಪ್ಲೇಟ್ಸ್, ಕಸಕಡ್ಡಿ ತುಂಬಿ ದೂಳು ಏಳುತ್ತಿದ್ದು ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಪಾಠ ಕೇಳುವ ದುಸ್ಥಿತಿ ಎದುರಾಗಿದೆ.
ಕಾಲೇಜಿನಲ್ಲಿ ಸ್ವಚ್ಚತೆ ಇಲ್ಲದಿರುವುದು ಒಂದೆಡೆಯಾದರೆ ವಿದ್ಯಾರ್ಥಿಗಳು ಮೂತ್ರ ವಿಸರ್ಜನೆ ಮಾಡಲು ಸಹ ಶೌಚಾಲಯ ಕೂಡ ಇಲ್ಲವಾಗಿದ್ದು ಕಾಲೇಜಿನ ಹಿಂಬಾಗದಲ್ಲಿ ಕಾಲೇಜಿನ ಗೋಡೆಗೆ ಮೂತ್ರ ಮಾಡುವ ದುಸ್ಥಿತಿ ಎದುರಾಗಿದ್ದು ತರಗತಿಯಲ್ಲಿ ಪಾಠ ಕೇಳುವಾಗ ದುರ್ವಾಸನೆ ಬರುತ್ತಿದೆ ಎಂದು ವಿದ್ಯಾರ್ಥಿಗಳು ತಮ್ಮಸಂಕಟ ವ್ಯಕ್ತಪಡಿಸಿದರು.
ಇದರ ಜೊತೆಗೆ ಈ ಕಾಲೇಜಿನಲ್ಲಿ ನಡೆಯುತ್ತಿದ್ದೆ ದೊಡ್ದ ಅವ್ಯವಹಾರ ಅದು ಏನೆಂದರೆ ವಿದ್ಯಾರ್ಥಿಗಳನ್ನು ಪಾಸು ಮಾಡಲು ಒಬ್ಬೊಬ್ಬರ ಬಳಿ ಐದು ಸಾವಿರ ವರೆಗೂ ವಸೂಲಿ ಮಾಡಿದ್ದಾರೆಂದು ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಪಾಠ ಪ್ರವಚನ ಕೂಡ ಸರಿಯಾಗಿ ಮಾಡಲ್ಲ ೯ ಗಂಟೆಗೆ ಇರುವ ತರಗತಿಗಳಿಗೆ ಉಪನ್ಯಾಸಕರು ೧೦.೩೦ ಗೆ ಬರುತ್ತಾರೆ ಬಂದರೂ ಸಕ್ರಿಯವಾಗಿ ಪಾಠ ಪ್ರವಚನ ಮಾಡಲ್ಲವೆಂದು ವಿದ್ಯಾರ್ಥಿಗಳು ತಮ್ಮ ನೊವು ವ್ಯಕ್ತಪಡಿಸಿದರು.
ವರದಿ:ಕೆ.ಮುತ್ತಕದಹಳ್ಳಿ ವೆಂಕಟಾಚಲಪತಿ