ಸಾರ್ವಜನಿಕರು ಆತಂಕಕ್ಕೆ ಒಳಗಾಗದೆ ಕೊರೋನಾ ಹರಡದಂತೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜಾಗೃತರಾಗಬೇಕು.
ಗುಂಡ್ಲುಪೇಟೆ : ಕೊರೋನಾ ಮತ್ತೆ ಸದ್ದು ಮಾಡಿ ಜನರಲ್ಲಿ ಆತಂಕ ಮೂಡಿಸುತ್ತಿರುವುದರಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗದೆ ಕೊರೋನಾ ಹರಡದಂತೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜಾಗೃತರಾಗಬೇಕು ಎಂದು ಅರಿವು ಮೂಡಿಸಲಾಯಿತು.ಗುಂಡ್ಲುಪೇಟೆ ತಾಲೂಕಿನ ಸಾರ್ವಜನಿಕ ಸ್ಥಳಗಳಲ್ಲಿ ಕರ್ನಾಟಕ ರಾಜ್ಯ ಮೂಲಭೂತ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ (ರಿ ) ನ ವತಿಯಿಂದ ಕೊರೋನ ಕುರಿತು ಭಯ ಬೇಡವೇ ಬೇಡ ಮೊನ್ನೆಚ್ಚರಿಕೆ ಮರೆಯ ಬೇಡ ಎಂಬ ಪೋಸ್ಟರ್ ಗಳನ್ನು ಬಿಡುಗಡೆ ಮಾಡಿ ಅರಿವು ಮೂಡಿಸಲಾಯಿತು.ಇದೇವೇಳೆ ಮಾತನಾಡಿದ ಸಮಿತಿಯ ರಾಜ್ಯಧ್ಯಕ್ಷೆ ಲಕ್ಷ್ಮಿ ಮಹೇಶ್ ಈ ಕೊರೊನಾ ಕುರಿತು ಜನರಲ್ಲಿ ಪ್ರಾರಂಭದಲ್ಲೇ ಜಾಗೃತಿ ಮೂಡಿಸುವ ಅನಿವಾರ್ಯ ಪರಿಸ್ಥಿತಿ ಇದ್ದು ವಿಷಯ ಕೈಮೀರಿ ಹೋಗಿ ಲಾಕ್ ಡೌನ್ ನಂತಹ ಕಠಿಣ ಪರಿಸ್ಥಿತಿ ಬರಬಾರದು.ಪ್ರಾರಂಭದ ಹಂತದಲ್ಲೇ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಈ ಕೆಲಸವನ್ನ ನಮ್ಮ ತಂಡ ಕೊರೋನ ಮೊದಲನೇ ಅಲೆ ಇಂದಲು ಮಾಡುತ್ತಿದ್ದೂ ಜನರು ಸರ್ಕಾರದ ನಿಯಮ ಗಳನ್ನು ಪಾಲಿಸಿ ಈ ಸೋಂಕು ಹರಡದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಖಜಾಂಚಿ ಕೋಕಿಲಾಶಿವನಂಜಪ್ಪ, ಜಿಲ್ಲಾ ಉಪಾಧ್ಯಕ್ಷ ವಾಸು ಕಿಲಗೆರೆ. ತಾಲ್ಲೂಕು ಸಂಚಾಲಕರು ಬೆಳ್ಳನಾಯ್ಕ ಹಾಗೂ ಸದಸ್ಯರು ಇದ್ದರು.