ಲಕ್ಕೂರು ಗ್ರಾಮಕ್ಕೆ ಸಾರಿಗೆ ಬಸ್ ವ್ಯವಸ್ಥೆ: ಗ್ರಾಮಸ್ಥರಿಂದ ಅಭಿನಂದನೆ
ಗುಂಡ್ಲುಪೇಟೆ : ತಾಲೂಕಿನ ಗಡಿ ಗ್ರಾಮ ಲಕ್ಕೂರು ಗ್ರಾಮದಿಂದ ಗುಂಡ್ಲುಪೇಟೆ ಶಾಲಾ ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳ ಸಮಸ್ಯೆ ಸ್ಪಂದಿಸಿದ ಕೆಎಸ್ಆರ್ಟಿಸಿ ಇಲಾಖೆ ಅಧಿಕಾರಿಗಳು ಬಸ್ ವ್ಯವಸ್ಥೆ ಕಲ್ಪಿಸುವ ಮೂಲಕ ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ.ಲಕ್ಕೂರು ಗ್ರಾಮದಿಂದ ಸುಮಾರು 1 ಕಿ.ಲೋ ಮೀಟರ್ ನಡೆದುಕೊಂಡು ಚಾಮರಾಜನಗರ ಗುಂಡ್ಲುಪೇಟೆ ಮೈನ್ ರೋಡ್ ಗೆ ಬಂದು ಅಲ್ಲಿಂದ ಬಸ್ ಹತ್ತಿ ನಗರ – ಗುಂಡ್ಲುಪೇಟೆಗೆ ಕಡಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಮಸ್ಯೆಗೆ ಸ್ಪಂದಿಸಿದ ಅಧಿಕಾರಿಗಳಿಗೆ ಗ್ರಾಮಸ್ಥರು ಅಭಿನಂದನೆ ತಿಳಿಸಿದ್ದಾರೆ.ನಮ್ಮ ಮನವಿಗೆ ಸ್ಪಂದಿಸಿದ ಕೆಎಸ್ ಆರ್ ಟಿಸಿ ಅಧಿಕಾರಿಗಳು ಬಸ್ ಸೌಲಭ್ಯ ನೀಡಿರುವುದರಿಂದ ಕೂಲಿ ಕಾರ್ಮಿಕರು.ಶಾಲೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಮಹಿಳೆಯರಿಗೆ ತುಂಬಾ ಅನುಕೂಲವಾಗಿದೆ. ಮಳೆ ಬಿಸಿಲು ಸಂದರ್ಭದಲ್ಲೂ ಒಂದು ಕಿ.ಮೀ ನಡೆದುಕೊಂಡು ಬರಬೇಕ್ಕಾಗಿತ್ತು ಇದೆತರ ದಿನನಿತ್ಯವು ಬಸ್ಸ ಸೌಲಭ್ಯ ಬರಬೇಕು ಆಗೆ ಸಂಜೆ ಟೈಮ್ ನಲ್ಲಿ ಬಸ್ಸ ಬಂದರೆ ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಆರ್ ಲಕ್ಕೂರು. ಗವಿ.ಮಹದೇವಸ್ವಾಮಿ.(ಚಿಕ್ಕ).ಸೂರಪ್ಪ.ಗುರು.ರವಿ ಹಾಗೂ ವಿದ್ಯಾರ್ಥಿಗಳು ಗ್ರಾಮಸ್ಥರು ಸೇರಿ ಕೆಎಸ್ ಆರ್ ಟಿಸಿ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು.