ಪಿವಿ ವಿಶೇಷ

ಹಣದ ಮದ : ವಿವಾದಗಳ ಖಾತೆ ತೆರೆದ , ಜನಧ್ವನಿ ವೆಂಕಟೇಶ್ !

ಹನೂರು: ಭಾರತೀಯ ಜನತಾ ಪಕ್ಷಕ್ಕೆ ಯಾರ ಅವಶ್ಯಕತೆಯೂ ಇಲ್ಲ, ಆದರೆ ಜನರಿಗೆ ಭಾರತೀಯ ಜನತಾ ಪಾರ್ಟಿ ಅವಶ್ಯಕತೆಯಿದೆ ಎಂದು ಹೇಳಿರುವ ಮುಖಂಡ ಜನಧ್ವನಿ ವೆಂಕಟೇಶ್ ಅವರ ಹೇಳಿಕೆಯ ವಿರುದ್ಧ ಕರುನಾಡ ವಿಜಯಸೇನೆ ಸಂಘಟನೆಯು ರಾಜ್ಯ ವಕ್ತಾರ ವಿಜಯ್ ಕುಮಾರ್ ಕಿಡಿಕಾರಿದ್ದಾರೆ.ಚಾಮರಾಜನಗರ ಜಿಲ್ಲೆ ಹಾನೂರು ವಿಧಾನಸಭಾ ಕ್ಷೇತ್ರದ ಜನ ಧ್ವನಿ ವೆಂಕಟೇಶ್ ಎಂಬುವರ ಮಾಧ್ಯಮದಲ್ಲಿ ಒಂದು ಹೇಳಿಕೆಯನ್ನು ಕೊಡುತ್ತಾರೆ ಅದು ಏನೆಂದರೆ. ಬಿಜೆಪಿ ಪಕ್ಷಕ್ಕೆ ಜನರ ಅವಶ್ಯಕತೆ ಇಲ್ಲ ಜನರಿಗೆ ಬಿಜೆಪಿ ಪಕ್ಷದ ಅವಶ್ಯಕತೆ ಇದೆ ಎಂಬ ಹೇಳಿಕೆಯನ್ನು ನೀಡುತ್ತಾರೆ.ಹನೂರು ವಿಧಾನಸಭಾ ಕ್ಷೇತ್ರದ ಜನತೆ ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಕ್ಷೇತ್ರಕ್ಕೆ ಯಾವುದೇ ಸಂಬಂಧ ಇಲ್ಲದಂತಹ ವ್ಯಕ್ತಿ ತನ್ನ ಹಣದ ಮದದಿಂದ ಮತದಾರರನ್ನು ಕೊಂಡುಕೊಳ್ಳಬಹುದು ಹಣ ಇದ್ದರೆ ಹನೂರು ಕ್ಷೇತ್ರದ ಜನತೆ ಯಾರಿಗೆ ಬೇಕಾದರೂ ವೋಟು ಮಾಡುತ್ತಾರೆ ಎಂಬ ದುರಹಂಕಾರದಿಂದ ಇಂತಹ ಹೇಳಿಕೆಯನ್ನು ನೀಡಿದ್ದಾರೆ.ಇಂತಹವರನ್ನ ಅನೂರು ವಿಧಾನಸಭಾ ಕ್ಷೇತ್ರದ ಜನತೆ ಕಳೆದ 50 ವರ್ಷಗಳಿಂದ ಸುಮಾರು ಜನರ ನಾಯಕರನ್ನು ನೋಡಿದ್ದಾರೆ. 40- 50 ವರ್ಷಗಳ ರಾಜಕೀಯ ಇತಿಹಾಸವುಳ್ಳ ದಿ.ರಾಜುಗೌಡರು ದಿ.ಹೆಚ್. ನಾಗಪ್ಪ ಅವರು ತದನಂತರ ದಿನಗಳಲ್ಲಿ ಅವರ ಕುಟುಂಬದವರು ರಾಜಕೀಯವನ್ನು ಮಾಡಿದ್ದಾರೆ ಇಂತಹ ಹೇಳಿಕೆಯನ್ನು ಯಾವತ್ತು ಸಹ ಮಾತನಾಡುವುದಿಲ್ಲ.ಆದರೆ ನೆನ್ನೆ ಮೊನ್ನೆ ಬಂದಂತಹ ಜನದ್ವನಿ ವೆಂಕಟೇಶ್ ಎನ್ನುವಂತಹ ವ್ಯಕ್ತಿ ಈತ ತನ್ನ ಹಣದ ದುರಹಂಕಾರದಿಂದ ಹೇಳುತ್ತಾರೆ ಬಿಜೆಪಿ ಪಕ್ಷಕ್ಕೆ ಯಾರ ಅವಶ್ಯಕತೆ ಇಲ್ಲ. ಆದರೆ ಜನರಿಗೆ ಬಿಜೆಪಿ ಪಕ್ಷದ ಅವಶ್ಯಕತೆ ಇದೆ ಎಂಬ ಮಾತನ್ನು ಹೇಳುತ್ತಾರೆ. ಹನೂರು ಜನತೆ ಅಸಮಾನ್ಯರೆಲ್ಲ ಕಿವಿಗೆ ಹೂವು ಇಟ್ಟುಕೊಂಡು ಬಂದಿಲ್ಲ, ಆದರೆ ಬಿಜೆಪಿ ಪಕ್ಷಕ್ಕೆ ನಿಜವಾಗಿಯೂ ನೈತಿಕತೆ ಇದ್ದರೆ ಈತನನ್ನ ಅನುರು ವಿಧಾನಸಭಾ ಕ್ಷೇತ್ರದಿಂದ ಕೂಡಲೇ ಉಚ್ಚಾಟನೆ ಮಾಡಬೇಕು. ವೆಂಕಟೇಶ್ ಎಂಬಂತಹ ವ್ಯಕ್ತಿಗಳಿಂದ ಪಕ್ಷಕ್ಕೆ ಮುಜುಗರವಾಗುತ್ತದೆ. ಕ್ಷೇತ್ರದ ಜನತೆ ಇಂತಹವರಿಗೆ ಬುದ್ಧಿ ಕಲಿಸಬೇಕು ವರನ್ನು ಕ್ಷೇತ್ರದಿಂದ ಹೊರಹಾಕಿ ತಕ್ಕಪಾಠ ಎಂದು ಆರೋಪ ಮಾಡಿದರು.

ಬಿಜೆಪಿ ಪಕ್ಷಕ್ಕೆ ಯಾರ ಅವಶ್ಯಕತೆಯೂ ಇಲ್ಲ, ಆದರೆ ಜನರಿಗೆ ಬಿಜೆಪಿ ಪಕ್ಷ ಅವಶ್ಯಕತೆಯಿದೆ ಎಂಬ ಹೇಳಿಕೆಯನ್ನು ನೀಡಿದ ಜನಧ್ವನಿ ಒಬಿಸಿ ವೆಂಕಟೇಶ್ ಹೇಳಿಕೆ ವಿರುದ್ಧ ಕರುನಾಡ ವಿಜಯಸೇನೆ ರಾಜ್ಯವಕ್ತಾರ ವಿಜಯ್‍ಕುಮಾರ್ ಅವರು ತೀವ್ರ ಆಕೋಶ ವ್ಯಕ್ತಪಡಿಸಿದ್ದಾರೆ.ಹನೂರು ಕ್ಷೇತ್ರದ ಬಿಜೆಪಿ ಪ್ರಬಲ ಆಕಾಂಕ್ಷಿ ಜನಧ್ವನಿ ವೆಂಕಟೇಶ್ ಅವರ ಹನೂರು ಪಟ್ಟಣದ ಕಚೇರಿಯಲ್ಲಿ ದೊಡ್ಡಾಲತ್ತೂರು ಮತ್ತು ಕೆಂಪಯ್ಯನಹಟ್ಟಿ ಗ್ರಾಮಗಳ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ವೇಳೆ ಜನಧ್ವನಿ ವೆಂಕಟೇಶ್ ಮಾತನಾಡಿ ಬಿಜೆಪಿ ಪಕ್ಷಕ್ಕೆ ಯಾರ ಅವಶ್ಯಕತೆಯೂ ಇಲ್ಲ, ಆದರೆ ಜನರಿಗೆ ಬಿಜೆಪಿ ಪಕ್ಷ ಅವಶ್ಯಕತೆಯಿದೆ ಎಂಬ ಹೇಳಿಕೆ ನೀಡಿದ್ದು. ಈ ಹೇಳಿಕೆ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು. ವೆಂಕಟೇಶ್ ಅವರ ಈ ಹೇಳಿಕೆ ಹನೂರು ಕ್ಷೇತ್ರದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ವೆಂಕಟೇಶ್ ಹೇಳಿಕೆಯಿಂದ ಈಗಾಗಲೇ ಕ್ಷೇತ್ರದ ಜನರು ಆಕ್ರೋಶ ವ್ಯಕ್ತಪಡಿಸಿ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button