ಪಿವಿ ವಿಶೇಷ

ರೋಗಿಯ ರೋಧನೆ
ಸಹಾಯಕ್ಕೆ ಅಂಗಲಾಚಿದ ಪೋಷಕರು

ವರದಿ ಶಾರೂಕ್ ಖಾನ್ ಹನೂರು

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ದೊಮ್ಮನಗದ್ದೆ ಗ್ರಾಮದ.ವಾಣಿಶ್ರೀ ಅವರ ದಂಪತಿಯ ಪುತ್ರನಾದ ಆದಿತ್ಯ (16) ಯುವಕನಿಗೆ ವಿಚಿತ್ರ ಖಾಯಲೇ ತಗುಲಿದ್ದು ಇದೀಗ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಆಗಿದ್ದಾರೆ. ತಲಸೀಮಿಯ ಮೇಜರ್ ಎಂಬ ಕಾಯಿಲೆಯಿಂದ ಬಳಲುತ್ತಿರುವ ಈತನಿಗೆ ಪ್ರತಿ 15 ದಿನಗಳಿಗೊಮ್ಮೆ ಕೆಂಪು ರಕ್ತ ಕಣಗಳ ಅಭಿವೃದ್ಧಿಗೆ ರಕ್ತ ನೀಡಬೇಕಿದೆ ಎಂದು ತಿಳಿದು ಬಂದಿದೆ. ಈ ಕಾಯಿಲೆಯನ್ನು ಗುಣಪಡಿಸಲು ಆಲೋಜನಿಕ್ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟೇಶನ್ ಮಾಡಿಸಲು ಆಸ್ಪತ್ರೆಯಲ್ಲಿ 14.5 ಲಕ್ಷ ರೂ. ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಸಂಘ ಸಂಸ್ಥೆ ಸೇರಿದಂತೆ ಟ್ರಸ್ಟ್ ನ ಮುಖ್ಯಸ್ಥರು ಹಾಗೂ ದಾನಿಗಳಿಂದ ಆರ್ಥಿಕವಾಗಿ ಸಹಾಯ ಅವಶ್ಯಕೆ ಇದ್ದು ಹೀಗಾಗಿ ಮಾನವೀಯತೆ ನೆಲೆಗಟ್ಟಿನಲ್ಲಿ ಧನ ಸಹಾಯ ಮಾಡಿ ನೆರೆವಾಗಬೇಕು ಎಂದು ರೋಗಿಯ ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಯುವಕರಿನಿಗೆ ಖಾಯಿಲೆ ಇರುವ ಬಗ್ಗೆ ಬೆಂಗಳೂರಿನ ಇಂದಿರಾ ಗಾಂಧಿ ಇನ್ಸ್ಟಾಟ್ ಆಫ್ ಚೈಲ್ಡ್ ಹೆಲ್ತ್ ಆಸ್ಪತ್ರೆಯ ವೈದ್ಯರು ದೃಢೀಕರಣ ಮಾಡಿದ್ದು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಆಸ್ಪತ್ರೆಯ ದಾಖಲೆಗಳಿಂದ ಮಾಹಿತಿ ದೊರೆತಿದೆ.

ದಾನಿಗಳು ಬ್ಯಾಂಕ್ ಖಾತೆ, ಫೋನ್ ಪೇ ಮತ್ತು ಗೂಗಲ್ ಪೇ ಖಾತೆಗೆ ಹಣ ನೀಡಬಹುದಾಗಿದೆ.

Related Articles

Leave a Reply

Your email address will not be published. Required fields are marked *

Back to top button