ಪಿವಿ ವಿಶೇಷ

ಜಲ ಸಂಜೀವಿನಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಟಾನ ಗೊಳಿಸಿ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀನಿವಾಸ್ ಅಭಿಮತ

ವರದಿ ಶಾರೂಕ್ ಖಾನ್ ಹನೂರು

ಹನೂರು :ಸರ್ಕಾರವು ರೈತರಿಗಾಗಿ ಜಲಸಂಜೀವಿನಿ ಕ್ರಿಯಾಯೋಜನೆಯನ್ನು ಜಿಯೋ ಸ್ಪೇಷಿಯಲ್ ತಂತ್ರಜ್ಞಾನ ಬಳಸಿ ಇದರಿಂದ ರೈತರಿಗೆ ಅನುಕೂಲಕರ ವ್ಯವಸ್ಥೆ ಮಾಡಲಾಗಿದೆ ಎಂದು ತಾಲ್ಲೊಕು ಪಂಚಾಯತಿ ಕಾರ್ಯನಿರ್ವಹಣ ಅಧಿಕಾರಿ ಶ್ರೀನಿವಾಸ್ ತಿಳಿಸಿದರು .ಹನೂರು ಸಮೀಪದ ಮಂಗಲ ಗ್ರಾಮದಲ್ಲಿ ರೈತರಿಗಾಗಿ ಸರ್ಕಾರದ ಯೋಜನೆಯನ್ನು ಜಾರಿಗೆ ತಂದಿದೆ ನೀರನ್ನು “ದಿಬ್ಬದಿಂದ ಕಣಿವೆ” ತತ್ವದಡಿ ಹರಿಯುವ ನೀರನ್ನು ತೆವಳುವಂತೆ ಮಾಡಿ, ತೆವಳುವ ನೀರನ್ನು ನಿಲ್ಲುವಂತೆ ಮಾಡಿ, ನಿಲ್ಲುವ ನೀರನ್ನು ಇಂಗುವಂತೆ ಮಾಡುವ ವಿಶಿಷ್ಟ ಪರಿಕಲ್ಪನೆ ಯಾಗಿದ್ದು, ಇದನ್ನು ಸಮರ್ಪಕ ವಾಗಿ ಅನುಷ್ಟಾನ ಗೊಳಿಸಲು ರೈತರು ಕೈ ಜೋಡಿಸಬೇಕು ಎಂದು ರಾಷ್ಟ್ರೀಯ ರೈತ ದಿನದ ಅಂಗವಾಗಿ ಇಂದು ಮಂಗಲ ಗ್ರಾಮ ಪಂಚಾಯಿತಿ ಕಾಳಿಂಗನ ಕೆರೆ ಆವರಣದಲ್ಲಿ ಜಲ ಸಂಜೀವಿನಿ ರೈತ ಸಂವಾದ ನಮ್ಮ ನಡಿಗೆ ಅನ್ನದಾತನ ಕಡೆಗೆ ಎಂಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು .ಇದೇ ಸಮಯದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕನಿಷ್ಟ ಶೇ 65 % ರಷ್ಟು ವೆಚ್ಚವನ್ನು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಆಧಾರಿತ ಕಾಮಗಾರಿಗಳ ಅನುಷ್ಟಾನಕ್ಕೆ ಭರಿಸಬೇಕೆಂಬ ನಿಯಮವಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಕೆರೆಗಳ ಸಮಗ್ರ ಅಭಿವೃದ್ದಿ , ಕಾಲುವೆಗಳ ಪುನಶ್ಚೇತನದಿಂದ ನೀರಿನ ಅಂತರ್ಜಲದ ಮಟ್ಟ ಹೆಚ್ಚಾಗುತ್ತದೆ ಎಂದು ಹೇಳಿದರು. ಗೋಕಟ್ಟೆ ನಿರ್ಮಾಣ, ಕಲ್ಯಾಣಿಗಳ ಪುನಶ್ಚೇತನ, ಚೆಕ್ ಡ್ಯಾಂ ಗಳ ನಿರ್ಮಾಣ, ಕೊಳವೆ ಬಾವಿ ಮರುಪೂರಣ ಘಟಕ, ಕಂದಕ ಬದು, ರಸ್ತೆ ಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಡುವುದು ಮುಂತಾದ ಮಣ್ಣು ಮತ್ತು ನೀರಿನ ಸಂರಕ್ಷಣೆ ಆಧಾರಿತ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಅನುಷ್ಟಾನಗೊಳಿಸ ಬೇಕು. ಎಂದು ತಿಳಿಸಿದರು.ಮಂಗಲ ಗ್ರಾಮದ ಅಧ್ಯಕ್ಷರಾದ ಕನಕರಾಜು ಮಾತನಾಡಿದ ಜಲಸಂಜೀವಿನಿ ಯೋಜನೆಯು ತನ್ನದೇ ಆದ ಮಹತ್ವ ಪಡೆದುಕೊಂಡಿದ್ದು ಜಲಸಂರಕ್ಷಣೆ ಆಧಾರಿತ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಗುರುತಿಸಿ ಅನುಷ್ಟಾನಗೊಳಿಸುವ ಸಲುವಾಗಿ ಕ್ರಿಯಾ ಯೋಜನೆ ತಯಾರಿಕೆಯಲ್ಲಿ ಎಲ್ಲರ ಭಾಗವಹಿಸುವಿಕೆ ಅಗತ್ಯ ಎಂದು ಹೇಳಿದರು.ಪಂಚಾಯತಿ ಅಭಿವೃದ್ಧಿ ಅಧಿಕಾರಿ ದೊರೆ ಅವರು ಮಾತನಾಡಿ ಒಂದು ಜಲಾನಯನ ಪ್ರದೇಶವನ್ನು ಮೇಲುಸ್ಥರ, ಮಧ್ಯಸ್ಥರ, ಕೆಳಸ್ಥರ ಎಂಬುದಾಗಿ ಮೂರು ಬಾಗಗಳನ್ನಾಗಿ ವಿಂಗಡಿಸಿ ಹಂತ ಹಂತವಾಗಿ ಮೂರು. ವರ್ಷದ ಯೋಜನೆಯನ್ನು ರೂಪಿಸಬೇಕು.ಈ ಸಂದರ್ಭದಲ್ಲಿ ರೈತ ಮುಖಂಡರಾದ ಗುರುಸ್ವಾಮಿ, ರೇವಣ್ಣ ಹಾಗೂ ಗ್ರಾಮಸ್ಥರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button