69 ನೇ ಕನ್ನಡ ರಾಜ್ಯೋತ್ಸವ ಆಚರಣೆ
ಹನೂರು :- ತಾಲೂಕಿನ ಗಡಿ ಗ್ರಾಮವಾದ ಒಡೆಯರ್ ಪಾಳ್ಯ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಬಾವುಟವನ್ನು ಹಾರಿಸುವ ಮೂಲಕ ಆಟೋ ಚಾಲಕರು ಮತ್ತು ಮಾಲೀಕರು ಗ್ರಾಮಸ್ಥರು ಹಾಗೂ ಕರವೇ ಸದಸ್ಯರುಗಳು ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಿದರು. ಬಳಿಕ ಎಲ್ಲರೂ ಒಟ್ಟಿಗೆ ನಾಡಗೀತೆಯನ್ನು ಹಾಡುವ ಮೂಲಕ ನಾಡು, ನುಡಿ, ನೆಲ, ಜಲದ ಸಂರಕ್ಷಣೆಗಾಗಿ ಪಣತೊಟ್ಟರು.
ಈ ವೇಳೆ ಮಾತನಾಡಿದ ಅವರು ಸಮಾಜದಲ್ಲಿ ಕೇವಲ ಸೇವಾ ಚಟುವಟಿಕೆಗಳನ್ನು ಮಾತ್ರ ಮಾಡುವುದಲ್ಲದೆ ಈ ನಾಡು ಮತ್ತು ದೇಶದ ರಾಷ್ಟ್ರೀಯ ಹಬ್ಬಗಳನ್ನು ಗೌರವಿಸಿ ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಲಾಗುವುದು. ನಾವೆಲ್ಲರೂ ಒಟ್ಟಾಗಿ ಈ ನಾಡಿನ ನೆಲ, ಜಲ, ಭಾಷೆಯ ಸಂರಕ್ಷಣೆಗಾಗಿ ಶ್ರಮಿಸಬೇಕಾಗಿದೆ. ಕರುನಾಡು ದೇಶದ ಎಲ್ಲ ರಾಜ್ಯದ ಜನತೆಗೆ ಆಶ್ರಯ ನೀಡುವ ಪುಣ್ಯ ಭೂಮಿಯಾಗಿದ್ದು, ಇಲ್ಲಿನ ವಾತಾವರಣವು ನಿಜಕ್ಕೂ ಸ್ವರ್ಗವಾಗಿದೆ. ಈ ನೆಲದಲ್ಲಿ ಜನ್ಮ ಪಡೆದಿರುವ ನಾವುಗಳು ಧನ್ಯರಾಗಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಒಡೆಯರ್ ಪಾಳ್ಯ ಗ್ರಾಮದ ಆಟೋ ಚಾಲಕರು, ಮಾಲೀಕರು, ಗ್ರಾಮಸ್ಥರು, ಕರವೇ ಸದಸ್ಯರುಗಳು ಸೇರಿ ಮತ್ತಿತರು ಇದ್ದರು