ಜಿಂಕೆ ಬೇಟೆ ಪ್ರಕರಣದಲ್ಲಿ ಒರ್ವನ ಬಂಧನ ಮತ್ತಿಬ್ಬರು ಪರಾರಿ…!
ಹನೂರು :- ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯ ರಾಮಾಪುರ ವನಜೀವಿ ವಲಯದ ಮಹದೇಶ್ವರ ಬೆಟ್ಟರಸ್ತೆಯಲ್ಲಿ ಮೂರು ಜಿಂಕೆಗಳನ್ನು ಬೇಟೆಯಾಡಿದ ಆರೋಪದ ಮೇಲೆ ಓರ್ವನನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಪರಾರಿಯಾಗಿದ್ದಾರೆ.
ಹನೂರು ತಾಲೂಕಿ ಪಳನಿಮೇಡು ಗ್ರಾಮದ ಹರೀಶ್ ಎಂಬಾತನೆ ಬಂಧಿತ ಆರೋಪಿಯಾಗಿದ್ದಾನೆ.
ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯ ಕೌದಳ್ಳಿ ವಲಯ ಅರಣ್ಯಾಧಿಕಾರಿಗಳಾದ ಕಾಂತರಾಜ ಎಸ್ ಚವ್ಹಾಣ, ಕೌದಳ್ಳಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿಗಳಾದ ಆನಂದ ಹಲಸಪ್ಪಗೋಳ ನೇತೃತ್ವದ ತಂಡ ರಾಮಾಪುರ ವನ್ಯ ಜೀವಿ ವಲಯದ ಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯ ಬಳಿ ಆರೋಪಿಗಳಾದ ಗೋವಿಂದ, ಪ್ರಭು ಮತ್ತು ಹರೀಶ್ ಎಂಬಾತರು ನಾಡಬಂದೂಕಿನಿಂದ 03 ಜಿಂಕೆಗಳನ್ನು ಬೇಟೆ ಮಾಡಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಧಾಳಿ ನೆಡೆಸಿದ ಅರಣ್ಯಾಧಿಕಾರಿಗಳ ತಂಡ ಓರ್ವನನ್ನು ಬಂದಿಸಿದ್ದಾರೆ ಅಲ್ಲದೆ ಪರಾರಿಯಾಗಿರುವ ಮತ್ತಿಬ್ಬರ ಪತ್ತೆಗೆ ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಕಾರ್ಯಚರಣೆಯಲ್ಲಿ ಗಸ್ತು ಅರಣ್ಯ ಪಾಲಕರಾದ ರಕ್ಷಿತ್ ಸಿ.ಬಿ. ಕಲ್ವೇಶ್ ತುರಮರಿ, ವೀರೇಶ, ಶಿದ್ದಪ್ಪ ಮಾರುತಿ ಮನೀಕಟ್ಟಿ ಹಾಜರಿದ್ದರು.