ಪಿವಿ ವಿಶೇಷ

ಒಂದೇ ದಿನ 23 ಹಲ್ಲನ್ನು ಕಿತ್ತುಹಾಕಿದ ವೈದ್ಯ… ಹೃದಯಾಘಾತದಿಂದ ವ್ಯಕ್ತಿ ಮೃತ್ಯು

ಬೀಜಿಂಗ್: ಹಲ್ಲಿನ ಸಮಸ್ಯೆಗೆಂದು ಆಸ್ಪತ್ರೆಗೆ ಬಂದ ವ್ಯಕ್ತಿಯ 23 ಹಲ್ಲುಗಳನ್ನು ಒಂದೇ ದಿನ ಕಿತ್ತು ಹಾಕಿದ ಆಘಾತಕಾರಿ ಘಟನೆ ಚೀನಾದಲ್ಲಿ ನಡೆದಿದೆ ಅಷ್ಟುಮಾತ್ರವಲ್ಲದೆ 23 ಹಲ್ಲುಗಳ ಬದಲಿಗೆ ಹನ್ನೆರಡು ಹೊಸ ಹಲ್ಲುಗಳನ್ನು ಅದೇ ದಿನ ಇರಿಸಿದ್ದು ಇದೀಗ ರೋಗಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಈ ಘಟನೆ ನಡೆದಿರುವುದು ಚೀನಾದ ಯೋಂಗ್‌ಕಾಂಗ್ ನಗರದಲ್ಲಿ. ಘಟನೆಯ ಕುರಿತು ಮೃತ ವ್ಯಕ್ತಿಯ ಮಗಳೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮಗಳಿಂದ ವಿಚಾರ ಬಹಿರಂಗ:
ಘಟನೆಯ ಕುರಿತು ಮೃತ ವ್ಯಕ್ತಿಯ ಮಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾಳೆ ಇದರಲ್ಲಿ ತನ್ನ ತಂದೆ ಧೀರ್ಘಕಾಲದಿಂದ ಹಲ್ಲುನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು ಹಾಗಾಗಿ ಹಲ್ಲಿನ ಚಿಕಿತ್ಸೆಯಲ್ಲಿ ಪರಿಣತಿ ಹೊಂದಿದ ವೈದ್ಯರ ಬಳಿ ಚಿಕಿತ್ಸೆಗಾಗಿ ಕಳೆದ ತಿಂಗಳು ಆಗಸ್ಟ್ 14 ರಂದು ಯೋಂಗ್‌ಕಾಂಗ್ ನಲ್ಲಿರುವ ದಂತ ಚಿಕಿತ್ಸಾಲಯಕ್ಕೆ ಹೋಗಿದ್ದಾರೆ. ಈ ವೇಳೆ ಪರಿಶೀಲಿಸಿದ ವೈದ್ಯರು ಹಲ್ಲುಗಳನ್ನು ತೆಗೆಯಬೇಕಾಗುತ್ತದೆ ಅದರ ಬದಲಿಗೆ ಹೊಸ ಹಲ್ಲುಗಳನ್ನು ಇಡಬೇಕಾಗುತ್ತದೆ ಎಂದು ಹೇಳಿದ್ದಾರೆ ಎಂಬುದಾಗಿ ಪೋಸ್ಟ್ ಮಾಡಿದ್ದಾಳೆ.

ಒಂದೇ ದಿನದಲ್ಲಿ 23 ಹಲ್ಲುಗಳನ್ನು ತೆಗೆದ ವೈದ್ಯರು:

ಹಲ್ಲುನೋವಿನಿಂದ ಬಳಲುತ್ತಿದ್ದ ವ್ಯಕ್ತಿಯ ಎಲ್ಲಾ ಹಲ್ಲುಗಳನ್ನು ತೆಗೆಯಲು ವೈದ್ಯರು ಸಲಹೆ ನೀಡಿದ್ದಾರೆ ಅದರಂತೆ ವ್ಯಕ್ತಿ ಒಪ್ಪಿಗೆಯನ್ನೂ ನೀಡಿದ್ದಾರೆ ಅದರಂತೆ ಶಸ್ತಚಿಕಿತ್ಸೆಗೆ ತಯಾರಿ ನಡೆಸಿದ ವೈದ್ಯರು ಒಂದಾದ ಮೇಲೆ ಒಂದರಂತೆ ಒಂದೇ ದಿನ ಒಟ್ಟು 23 ಹಲ್ಲುಗಳನ್ನು ಕಿತ್ತು ಹಾಕಿದ್ದಾರೆ ಇದಾದ ಬಳಿಕ ಅದೇ ದಿನ ಹನ್ನೆರಡು ಹೊಸ ಹಲ್ಲುಗಳನ್ನು ಅಳವಡಿಸಿ ಮನೆಗೆ ಕಳುಹಿಸಿ ಕೊಟ್ಟಿದ್ದಾರೆ. ಮೊದಲು ಹಲ್ಲು ನೋವಿನಿಂದ ಬಳಲುತ್ತಿದ್ದ ವ್ಯಕ್ತಿ ಈಗ ಹಲ್ಲು ತೆಗೆದ ನೋವಿನಿಂದ ಹೆಚ್ಚಿನ ನೋವು ಅನುಭವಿಸಬೇಕಾಯಿತು. ಆದರೆ ದಿನದಿಂದ ದಿನಕ್ಕೆ ಅವರ ನೋವು ಹೆಚ್ಚಾಗತೊಡಗಿತು ಚಿಕಿತ್ಸೆ ನಡೆದು ಹದಿಮೂರು ದಿನಕ್ಕೆ ಹೃದಯಾಘಾತಗೊಂಡು ವ್ಯಕ್ತಿ ಮೃತಪಟ್ಟಿದ್ದಾರೆ.

ಮಗಳ ದೂರಿನ ಆಧಾರದ ಮೇಲೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು ವೈದ್ಯರು ತಪ್ಪು ಎಸಗಿರುವುದು ಹೌದು ಎಂದಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button