ಬೀರಿ ಕೋಟೆಕಾರು ಬಳಿ ವೇಶ್ಯಾವಾಟಿಕೆ ದಂದೆ ಆರೋಪ: ಮಹಿಳೆ ಸೇರಿ ನಾಲ್ವರು ವಶಕ್ಕೆ
ಮಂಗಳೂರು ಉಳ್ಳಾಲ, ಡಿ.7 : ಕೋಟೆಕಾರು ಬೀರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯ ಬಾಡಿಗೆ ಮನೆಯೊಂದರಲ್ಲಿ ಯುವತಿಯರನ್ನು ಇಟ್ಟು ವೇಶ್ಯಾವಾಟಿಕೆ ನಡೆಸುತ್ತಿದ್ದುದಲ್ಲದೆ ಮಾಂಸ ಧಂದೆ ನಡೆಸುತ್ತಿದ್ದ ಅಡ್ಡೆಗೆ ಉಳ್ಳಾಲ ಪೊಲೀಸರು ದಾಳಿ ನಡೆಸಿ ದಂಪತಿ ಸಹಿತ ನಾಲ್ವರನ್ನ ಬಂಧಿಸಿದ್ದಾರೆ.
ಬೀರಿ ಬಾಡಿಗೆ ಮನೆ ನಿವಾಸಿ ಮೊಹಮ್ಮದ್ ಇಕ್ಬಾಲ್, ಆತನ ಪತ್ನಿ ಅಲಿಮಮ್ಮ, ಉಳ್ಳಾಲ ನಿವಾಸಿ ಶರ್ಫುದ್ದೀನ್, ಇರ್ಶಾದ್ ಅಡ್ಯನಡ್ಕ ಅವರನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಮೊಹಮ್ಮದ್ ಇಕ್ಬಾಲ್ ಪ್ರಕರಣದ ಮುಖ್ಯ ಆರೋಪಿ ಆಗಿದ್ದು ಈತ ಈ ಹಿಂದೆ ಪಿಲಾರು, ಕಾಪಿಕಾಡು ಪ್ರದೇಶಗಳಲ್ಲೂ ಬಾಡಿಗೆ ಮನೆ ಮಾಡಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಎನ್ನುವ ಆರೋಪಗಳಿವೆ. ಅಲ್ಲದೆ, ನೆರೆ ಹೊರೆಯವರಲ್ಲಿ ತಾನು ಶಾಸಕರೋರ್ವರ ಸಂಬಂಧಿ ಎಂದೂ ಬೋಂಗು ಬಿಡುತ್ತಿದ್ದ. ಇವರಿಗೆ ಶರ್ಫುದ್ದೀನ್ ಎಂಬಾತ ವೇಶ್ಯೆಯರನ್ನು ಸಾಗಾಟ ಮಾಡುತ್ತಿದ್ದ ಎನ್ನಲಾಗಿದೆ. ಇರ್ಶಾದ್ ಅಡ್ಯನಡ್ಕ ಇವರಿಗೆ ಗಿರಾಕಿ ಆಗಿದ್ದು ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಪೊಲೀಸರು ನಿನ್ನೆ ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.