ಶಾಲಾ ಮಕ್ಕಳ ಅನ್ನಕ್ಕೆ ಕನ್ನ ಹಾಕಲು ಪ್ರಯತ್ನಿಸಿ ಸಿಕ್ಕಿಬಿದ್ದ ಕಳ್ಳರು
ನೆಲಮಂಗಲ : ಸರ್ಕಾರ ಬಡ ಮಕ್ಕಳಿಗೆಂದು ಅನ್ನದಾಸೋಹ ಯೋಜನೆ ಅಡಿಯಲ್ಲಿ ಬಿಸಿಯೂಟ ನೀಡಲು ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುತ್ತಿದೆ.ಆದರೆ ಇಲ್ಲಿ ನಾಲ್ಕು ಜನ, ಆ ಮಕ್ಕಳ ಅನ್ನಕ್ಕೆ ಕನ್ನ ಹಾಕಲು ಯತ್ನಿಸಿ ಸಿಕ್ಕಿಹಾಕಿಕೊಂಡಂತಹ ಘಟನೆ ನೆಲಮಂಗಲ ಹೃದಯ ಭಾಗದಲ್ಲಿರುವ ಇರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ.
ಸೋಮವಾರದಂದು ಅಂದರೆ ನಿನ್ನೆ ಮಧ್ಯಾಹ್ನ ಸರಿಸುಮಾರು 3.20 ಗಂಟೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ನೆಲಮಂಗಲದಲ್ಲಿ ಬಿಸಿಯೂಟ ವ್ಯವಸ್ಥೆಯಲ್ಲಿ ನಿರ್ವಹಣೆ ಮಾಡುವಂತಹ ಸಹ ಶಿಕ್ಷಕರಾದ ಸುದರ್ಶನ್, ದ್ವಿತೀಯ ದರ್ಜೆ ಸಹಾಯಕರಾದ ಸಿದ್ದಲಿಂಗ ಮೂರ್ತಿ ಇವರುಗಳು ಆಹಾರ ಪದಾರ್ಥಗಳನ್ನ ಕದ್ದು ಸಾಗಿಸುವಾಗ ಕರ್ನಾಟಕ ರಣಧೀರರ ವೇದಿಕೆಯ ರಾಜ್ಯಾಧ್ಯಕ್ಷ ಶಂಕರ್ ಗೌಡ್ರು ರವರ ಕಣ್ಣಿಗೆ ಬಿದ್ದಿದ್ದೆ.
ತಕ್ಷಣ ಎಚ್ಚೆತ್ತ ಶಂಕರ್ ಗೌಡ್ರು ಅಕ್ಷರ ದಾಸೋಹ ವಿಭಾಗದ ಸಹ ನಿರ್ದೇಶಕರಿಗೆ ಕರೆ ಮಾಡಿ ದೂರನ್ನ ಹೇಳಿದ್ದು ತಕ್ಷಣವೇ ಸಹ ನಿರ್ದೇಶಕ ಶಿವಕುಮಾರ್ ರವರು ಕದ್ದು ಸಾಗಿಸುತ್ತಿದ್ದ ಪದಾರ್ಥಗಳನ್ನು ಮರಳಿ ಶಾಲೆಗೆ ತರುವಂತೆ ಹೇಳಿರುತ್ತಾರೆ. ಆದರೆ ಇಲ್ಲಿವರೆಗೂ ಆಹಾರ ಪದಾರ್ಥಗಳನ್ನು ಕದ್ದು ಸಾಗಿಸುತ್ತಿದ್ದವರ ಮೇಲೆ ಯಾವುದೇ ಕ್ರಮ ವಹಿಸಿರುವುದಿಲ್ಲ.
ಇಲ್ಲಿ ನಡೆಯುತ್ತಿರುವ ಘಟನೆಗಳನ್ನೆಲ್ಲ ಗಮನಿಸಿದರೆ ಇದರಲ್ಲಿ ಅಕ್ಷರ ದಾಸೋಹ ಸಹ – ನಿರ್ದೇಶಕ ಶಿವಕುಮಾರ್ ಮತ್ತು ಶಾಲೆಯ ಉಪ ಪ್ರಾಂಶುಪಾಲ ಬಿ.ಆರ್ ಲೋಕೇಶ್ ಕೂಡ ಶಾಮಿಲಾಗಿರುವುದು ಮೇಲ್ನೋಟಕ್ಕೆ ಸತ್ಯವೆಂದು ಕಂಡು ಬರುತ್ತಿದೆ .
ಆದ್ದರಿಂದ ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೆಲಮಂಗಲ ಇವರಿಗೆ ದೂರನ್ನು ಸಹ ದಾಖಲಿಸಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮುಂದಿನ ದಿನಗಳಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಿ ಸೂಕ್ತ ಕ್ರಮ ವಹಿಸದೆ ಇದ್ದಲ್ಲಿ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಮಟ್ಟದ ಪ್ರತಿಭಟನೆಯನ್ನು ಮಾಡುತ್ತೇವೆ ಎಂದು ಕರ್ನಾಟಕ ರಣಧೀರರ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಶಂಕರ್ ಗೌಡ್ರು ತಿಳಿಸಿದ್ದಾರೆ.
ಈ ವಿಷಯವವಾಗಿ ತಪ್ಪು ಮಾಡಿದ್ದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಈಗಾಗಲೇ ಬಿ.ಈ.ಓ ಗೆ ಲಿಖಿತ ದೂರು ಸಹ ಸಂಘಟನೆಯಿಂದ ನೀಡಲಾಗಿದೆ.