ರಾಜ್ಯಪಾಲರ ವಿರುದ್ಧ ಸಿಡಿದೆದ್ದ ಕಾಂಗ್ರೆಸ್: ಆ.19ರಂದು ರಾಜ್ಯಾದ್ಯಂತ ‘ಪ್ರತಿಭಟನೆ’ಗೆ ಕರೆ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದ ಬಗ್ಗೆ ತನಿಖೆಗೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿಯನ್ನು ನೀಡಿದ್ದಾರೆ. ರಾಜ್ಯಪಾಲರ ಈ ನಿರ್ಧಾರದ ವಿರುದ್ಧ ಕಾಂಗ್ರೆಸ್ ಪಕ್ಷದ ಮುಖಂಡರು ಸಿಡಿದೆದ್ದಿದ್ದು, ರಾಜ್ಯಾಧ್ಯಂತ ಆಗಸ್ಟ್.19ರ ಸೋಮವಾರದಂದು ಪ್ರತಿಭಟನೆಗೆ ಕರೆ ನೀಡಲಾಗಿದೆ.
ಇಂದು ಮುಡಾ ಹಗರಣ ಸಂಬಂಧ ಸಿಎಂ ಸಿದ್ಧರಾಮಯ್ಯ ವಿರುದ್ಧದ ತನಿಖೆಗೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿಯನ್ನು ನೀಡಿದ್ದರು. ಇದು ಕಾನೂನು ಬಾಹಿರವಾಗಿದೆ. ಬಿಜೆಪಿ-ಜೆಡಿಎಸ್ ನಡೆಸಿದಂತ ಷಡ್ಯಂತ್ರವಾಗಿದೆ ಅಂತ ಸಿದ್ಧರಾಮಯ್ಯ ಅವರೇ ಗುಡುಗಿದ್ದರು.
ರಾಜ್ಯಪಾಲರ ನಿರ್ಧಾರವನ್ನು ತೀವ್ರವಾಗೇ ಖಂಡಿಸಿರುವಂತ ಕಾಂಗ್ರೆಸ್ ಪಕ್ಷವು, ಅವರ ನಿರ್ಧಾರದ ವಿರುದ್ಧ ಸಿಡಿದೆದ್ದಿದೆ. ಹೀಗಾಗಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಕುರುಬರ ಸಂಘದ ಮುಖಂಡರು, ಹಿಂದುಳಿದ ವರ್ಗಗಳ ವೇದಿಕೆಯ ಸದಸ್ಯರು ಸೇರಿದಂತೆ ಕಾಂಗ್ರೆಸ್ ಪಕ್ಷದಿಂದ ಸೋಮವಾರದಂದು ರಾಜ್ಯಾದ್ಯಂತ ಪ್ರತಿಭಟನೆಗೆ ನಿರ್ಧಾರವನ್ನು ಕೈಗೊಳ್ಳಲಾಗಿದೆ.