ಪಿವಿ ವಿಶೇಷ

ಚಿರತೆ ದಾಳಿಗೆ : ಕುರಿಗಳು ಬಲಿ…!

ಹನೂರು :- ತಾಲೂಕಿನ ಗಂಗನದೊಡ್ಡಿ ಗ್ರಾಮದಲ್ಲಿ ನಿನ್ನೆ ತಡ ರಾತ್ರಿ ಚಿರತೆ ದಾಳಿ ನಡೆಸಿ ಎರಡು ಕುರಿಗಳು ಬಲಿಯಾಗಿರುವ ಘಟನೆ ಜರುಗಿದೆ.

ತಾಲೂಕಿನ ಸೂಳೇರಿಪಾಳ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಂಗನದೊಡ್ಡಿ ಗ್ರಾಮದ ಗಂಗನದೊಡ್ಡಿ ಸರ್ವೆ ನಂಬರ್ 20/1ರಲ್ಲಿ ಪುಟ್ಟಸ್ವಾಮಿ ಬಿನ್ ಮಾದೇಗೌಡ ಬಸಪ್ಪನ ದೊಡ್ಡಿ ಗ್ರಾಮ ಎಂಬುವವರ ಜಮೀನಿನಲ್ಲಿ ರಮೇಶ್ s/o ಚೆಲುಂಬೆ ಗೌಡ ಬಸಪ್ಪನ ದೊಡ್ಡಿ ಇವರು ಕುರಿ ಮಂದೆಯನ್ನು ಕೂಡಿ ಹಾಕಿದ್ದರು ಬುಧವಾರ ರಾತ್ರಿ 2:00 ಸಮಯದಲ್ಲಿ ಎರಡು ಕುರಿಗಳು ಚಿರತೆ ದಾಳಿಗೆ ಬಲಿಯಾಗಿದೆ. ಚಿರತೆ ಹಾವಳಿಯಿಂದ ಈ ಭಾಗದ ಜನರು ಭಯಭೀತರಾಗಿ ಇಲ್ಲಿನ ಜನರ ನಿದ್ದೆಗೆಡಿಸಿದೆ.

ಇತ್ತೀಚಿನ ದಿನಗಳಲ್ಲಿ ತಾಲೂಕಿನ ಕೆಲ ಭಾಗಗಳಲ್ಲಿ ಚಿರತೆ ಪದೇ ಪದೆ ಕಾಣಿಸಿ ಕೊಳುತ್ತಿದ್ದು ಸಾಕು ಪ್ರಾಣಿಗಳನ್ನು ಬಲಿ ಪಡೆಯುತ್ತಿದೆ. ಇದರಿಂದ ರೈತರು ಜಮೀನುಗಳಿಗೆ ತೆರಳಲು ಭಯ ಪಡುವಂತಾಗಿದೆ.

ಆದ್ದರಿಂದ ಅರಣ್ಯ ಇಲಾಖೆಯವರು ಚಿರತೆಯನ್ನು ಶೀಘ್ರದಲ್ಲೇ ಸೆರೆ ಮಾಡಬೇಕೆಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button