ಹೋಲಿಕ್ರಾಸ್ ಆಸ್ಪತ್ರೆ ಮುಂದೆ ಗರ್ಭಿಣಿ ಯುವತಿ ಸಾರಿಗೆ ಇಲಾಖೆ ವಾಹನಕ್ಕೆ ಬಲಿ..!
ಕೊಳ್ಳೇಗಾಲ :- ತಾಲೂಕಿನ ಕಾಮಗೆರೆ ಗ್ರಾಮದ ಹೋಲಿಕ್ರಾಸ್ ಆಸ್ಪತ್ರೆ ಮುಂಭಾಗ ಬಸ್ ನಿಲ್ದಾಣದಲ್ಲಿ ಆಸ್ಪತ್ರೆಯಿಂದ ರಸ್ತೆ ದಾಟುತಿದ್ದ ಅಜ್ಜೀಪುರ ಗ್ರಾಮದ 22 ವರ್ಷದ ನಮಿತಾ ಅತಿವೇಗದಿಂದ ಬರುತ್ತಿದ್ದ ಸಾರಿಗೆ ವಾಹನಕ್ಕೆ ಸಿಲುಕಿ ಮೃತ ಪಟ್ಟಿದ್ದಾರೆ.
ನಮಿತಾ ರವರು ಮೂಲತಃ ಪಿಜಿ ಪಾಳ್ಯ ಗ್ರಾಮದವರಾಗಿದ್ದು ಅಜ್ಜೀಪುರ ಗ್ರಾಮಕ್ಕೆ ಮದುವೆಯಾಗಿದ್ದರು ನಮಿತಾ ಅವರು ಎರಡು ತಿಂಗಳ ಗರ್ಭಿಣಿಯಾಗಿದ್ದು ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ವೈದ್ಯಕೀಯ ತಪಾಷಣೆಗಾಗಿ ಬಂದಿದ್ದರು ಎನ್ನಲಾಗಿದೆ. ತಮ್ಮ ಗ್ರಾಮಕ್ಕೆ ತೆರಳಲು ರಸ್ತೆ ದಾಟುವಾಗ ಈ ದಾರುಣ ಘಟನೆ ನಡೆದಿದೆ.
ಈ ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯ ಗ್ರಾಮಸ್ಥರು ಹಾಗು ಮೃತ ಯುವತಿಯ ಸಂಬಧಿಕರು ರಸ್ತೆ ತಡೆ ನಡೆಸಿ ಸಾರಿಗೆ ಇಲಾಖೆ ವಿರುದ್ಧ ಬಾರಿ ಅಕ್ರೋಶ ವ್ಯಕ್ತಪಡಿಸಿ ಸಾರಿಗೆ ಬಸ್ ಚಾಲಕರು ನಿಧಾನವಿಲ್ಲದೆ ಯಾರ್ರ ಬೀರಿ ಗಾಡಿ ಚಲಾಯಿಸುತ್ತಾರೆ. ಕಾಮಗೆರೆ ಗ್ರಾಮದಲ್ಲಿ ಕಳೆದ ನಾಲ್ಕೈದು ತಿಂಗಳಿಂದ ಅಪಘಾತದಿಂದ ಸಾವನಪ್ಪಿರುವುದು ಇದು ಮೂರನೇ ಘಟನೆ ಹಲವಾರು ಸಣ್ಣ ಪುಟ್ಟ ಅಪಘಾತಗಳು ಆಗುತ್ತಿದ್ದೂ ಬ್ಯಾರಿಕೆಡ್ ಅಳವಡಿಸುವಂತೆ ನಾಲ್ಕು ತಿಂಗಳ ಹಿಂದೆ ಪೊಲೀಸ್ ಇಲಾಖೆಗೆ ಹಾಗು ಡಿಪೋ ವ್ಯವಸ್ಥಾಪಕರಿಗೆ ಮನವಿ ಮಾಡಿದ್ದೆವು ಆದರೂ ಕೂಡ ಎಚ್ಚೆತ್ತುಕೊಂಡಿಲ್ಲ ಇಂತಹ ಅಪಘಾತಗಳು ಪುನಹ ಸಂಭವಿಸದೆ ಇರಲಿ ಎಂಬ ಉದ್ದೇಶದಿಂದ ಈ ರಸ್ತೆಯಲ್ಲಿ ರಸ್ತೆ ಡುಬ್ಬ ಅಥವಾ ಬ್ಯಾರಿಕೆಡ್ ಹಾಕುವ ಮೂಲಕ ವಾಹನಗಳಿಗೆ ವೇಗ ನಿಯಂತ್ರಣ ಮಾಡಬೇಕು ಎಂದು ಒತ್ತಾಯಿಸಿ ಸ್ಥಳೀಯ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಇದರಿಂದ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು.
ಸಂಬಂದಿಕರ ಆಕ್ರಂದನವಂತೂ ಮುಗಿಲು ಮುಟ್ಟಿತು ಕೊಳ್ಳೇಗಾಲ ಡಿಪೋ ವ್ಯವಸ್ಥಾಪಕ ಶಂಕರ್ ಘಟನ ಸ್ಥಳಕ್ಕೆ ಆಗಮಿಸಿ ಯುವತಿಯ ಸಾವಿಗೆ ಸಂತಾಪ ಸೂಚಿಸಿ ಪರಿಹಾರದ ಹಣವಾಗಿ 25 ಸಾವಿರ ಅoತ್ಯ ಸಂಸ್ಕಾರದ ಖರ್ಚು ನೀಡುವ ಆದೇಶವಿದೆ ನಂತರ ಚಾರ್ಜ್ ಶೀಟ್ ಆದ ಬಳಿಕ 25 ಸಾವಿರ ನೀಡಲಾಗುವುದು ಅನಂತರ ಕೋರ್ಟ್ ಮೂಲಕ ಕುಟುಂಬಸ್ಥರಿಗೆ ಪರಿಹಾರದ ಹಣ ಒದಗಿಸಿ ಕೊಡಲಾಗುವುದು ಎಂದು ತಿಳಿಸಿದರು.
ಕೊಳ್ಳೇಗಾಲ ಮತ್ತು ಹನೂರು ತಾಲೂಕಿನ ಪೊಲೀಸರು ಸ್ಥಳಕ್ಕೆ ಆಗಮಿಸಿ ರಸ್ತೆ ತಡೆ ಮಾಡುತ್ತಿದ್ದವರ ಮನವೊಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.