ಪಿವಿ ವಿಶೇಷ

ಚಿಕ್ಕಬಳ್ಳಾಪುರ: ಸರ್ಕಾರಿ ಆಂಬ್ಯುಲೆನ್ಸ್ ನಲ್ಲಿ ಗಿಡ ಸಾಗಾಟ – ವೈದ್ಯಾಧಿಕಾರಿ ಸಂತೋಷ್ ನೇತೃತ್ವದಲ್ಲೆ ಆಂಬ್ಯುಲೆನ್ಸ್ ದುರ್ಬಳಕೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಯ ಆಂಬ್ಯುಲೆನ್ಸ್ ಇರುವುದು ರೋಗಿಗಳಗೆ ಹಾಗೂ ಗರ್ಭಿಣಿ ಹಾಗೂ ಬಾಣಂತಿಯರನ್ನು, ಸಾಗಿಸಲು ಇರುವ ಪವಿತ್ರವಾದ ವಾಹನದಲ್ಲಿ ಗಿಡಗಳನ್ನು ಸಾಗಿಸಿದ ದುರ್ಘಟನೆ ‌ಚಿಂತಾಮಣಿಯಲ್ಲಿ ಕಂಡುಬಂದಿದೆ.

ನಗರದ ಬೆಂಗಳೂರು ರಸ್ತೆಯಲ್ಲಿ ಇರುವ ಯೋಗಿನಾರಾಯಣ ನರ್ಸರಿಯಲ್ಲಿ ನಗರದ ಸಾರ್ವಜನಿಕ ಆಸ್ಪತ್ರೆಯ ಆಂಬ್ಯುಲೆನ್ಸ್ ವಾಹನದಲ್ಲಿ ಪ್ಲಾಸ್ಟಿಕ್ ಪಾಟ್ ಗಳಲ್ಲಿ‌ ಮಣ್ಣು ತುಂಬಿ ಬೆಳೆಸಿರುವ ಗಿಡಗಳನ್ನು ಆಂಬ್ಯುಲೆನ್ಸ್ ವಾಹನದಲ್ಲಿ ಸಾಗಿಸಿದ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ‌ ಕಾರಣವಾಯಿತು.

ತಾಲ್ಲೂಕಿನಲ್ಲಿ ಡೆಂಗಿ ಜ್ವರ ಹೆಚ್ಚುತ್ತಿರುವ ಪ್ರಸ್ತುತ ದಿನಮಾನಗಳಲ್ಲಿ ಡೆಂಗಿ ಜ್ವರ ನಿಯಂತ್ರಣಕ್ಕೆ ಶ್ರಮಿಸಬೇಕಾದ ವೈದ್ಯರೇ‌ ಈ‌ರೀತಿ ಆಂಬ್ಯುಲೆನ್ಸ್ ವಾಹನದಲ್ಲಿ ಈಡೀಸ್ ಸೊಳ್ಳೆ ಉತ್ಪತಿಯಾಗುವ ಪ್ಲಾಸ್ಟಿಕ್ ಪಾಟ್ ಗಳ ಗಿಡಗಳನ್ನು ತುಂಬಿಕೊಂಡು ಹೋಗುವುದರಿಂದ ಈಡಿಸ್ ಸೊಳ್ಳೆಗಳು ಆಸ್ಪತ್ರೆಗೆ ಸೇರುವ ಸಾಧ್ಯತೆಗಳಿದ್ದು ಆಸ್ಪತ್ರೆಯ ರೋಗಿಗಳಿಗೆ ಸಾಂಕ್ರಾಮಿಕ ರೋಗಗಳು ಹರಡುವಂತಾಗಿದೆ.

ಆಡಳಿತ ವೈದ್ಯರ ನೇತೃತ್ವದಲ್ಲೆ ಘಟನೆ:ಇನ್ನು ನಗರದ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಯಾದ ಡಾ.ಸಂತೋಷ್ ರವರು ಸ್ವತಃ ಸ್ಥಳದಲ್ಲೆ‌ ಇದ್ದು ಪ್ಲಾಸ್ಟಿಕ್ ಪಾಟ್ ಗಳ ಗಿಡಗಳನ್ನು ಆಂಬ್ಯುಲೆನ್ಸ್ ವಾಹನದಲ್ಲಿ ಸಾಗಿಸಿದ್ದು ಆಸ್ಪತ್ರೆಯ ಸಿಬ್ಬಂದಿ ತಪ್ಪು ಮಾಡಿದರೆ ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳು ತಪ್ಪು‌ಮಾಡಿದ್ದು ಬೇಲಿ‌ ಎದ್ದು ಬಂದು ಹೊಲ ಮೇಯಿದಂತಾಗಿದ್ದು ಇವರ‌ ವಿರುದ್ದ ಕ್ರಮ ಕೈಗೊಳ್ಳುವರ್ಯಾರು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ವರದಿ:ವೆಂಕಟಾಚಲಪತಿ, ಚಿಕ್ಕಬಳ್ಳಾಪುರ

Related Articles

Leave a Reply

Your email address will not be published. Required fields are marked *

Back to top button