ಏಕವಚನದಲ್ಲಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಡಿಕೆ ಶಿವಕುಮಾರ್
ರಾಮನಗರ: ಬಿಜೆಪಿ- ಜೆಡಿಎಸ್ ನಡೆಸಲು ಉದ್ದೇಶಿಸಿರುವ ಪಾದಯಾತ್ರೆ ವಿಚಾರದಲ್ಲಿ ಕಿಡಿಕಾರಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ದ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಬಿಡದಿಯ ಜನಾಂದೋಲನ ಸಭೆಯಲ್ಲಿ ಶುಕ್ರವಾರ (ಆ.2) ಮಾತನಾಡಿದ ಡಿಕೆ ಶಿವಕುಮಾರ್, ಇದು ಭ್ರಷ್ಟಾಚಾರಿಗಳಿಂದ ಭ್ರಷ್ಟಾಚಾರಕ್ಕೋಸ್ಕರ ಹಮ್ಮಿಕೊಂಡಿರುವ ಪಾದಯಾತ್ರೆ ಎಂದು ಟಾಂಗ್ ನೀಡಿದರು.
ಕುಮಾರಣ್ಣ ನಿಮ್ಮ ತಂದೆ ಭೂಮಿಗೆ ಬಂದಾಗ ನಿಮ್ಮ ಜಮೀನು ಎಷ್ಟಿತ್ತು. ನೀವು ಎಷ್ಟು ಪಡೆದುಕೊಂಡಿರಿ.., ಈಗ ಎಷ್ಟು ಎಕರೆ ಇದೆ? ಯಾರ ಹೆಸರಿನಲ್ಲಿ ಇತ್ತು, ಯಾರ ಹೆಸರಿಗೆ ಬಂತು, ನಿಮ್ಮ ಹೆಸರಿಗೆ ಯಾರಿಂದ ಬಂತು..? ಇದಕ್ಕೆಲ್ಲಾ ನಿಮ್ಮ ಬಳಿ ದಾಖಲೆ ಇದೆಯಾ ಎಂದು ಪ್ರಶ್ನಿಸಿದರು.
ದೊಡ್ಡಗುಬ್ಬಿ ಚಿಕ್ಕ ಗುಬ್ಬಿ, ಬೆಂಗಳೂರು ಉತ್ತರ, ಯಲಹಂಕ, ಉತ್ತರಹಳ್ಳಿ, ಹಾಸನದಲ್ಲಿ ಜಮೀನು ಎಷ್ಟಿದೆ.. ಅದರ ಬೆಲೆ ಎಷ್ಟು? ಬಾಲಕೃಷ್ಣೇಗೌಡ ಆಪೀಸರ್, ನಿಮ್ಮ ತಂದೆ ಗುತ್ತಿಗೆದಾರರು, ನೀವು ಸಿನಿಮಾ ತೋರಿಸುತ್ತಿದ್ದಿರಿ. ನಿಮ್ಮ ತಂದೆ ಗ್ರಾಂಟ್ ಮಾಡಿಸಿಕೊಂಡರು ಎಂದು ಡಿಕೆ ಶಿವಕುಮಾರ್ ಟೀಕೆ ಮಾಡಿದ್ದಾರೆ.
ಅದೇನೋ ಸಿನಿಮಾ ತೋರಿಸಿದೆ ಎನ್ನುತ್ತಿದ್ದರಲ್ಲಾ ಅಸೆಂಬ್ಲಿಗೆ ಬನ್ನಿ ಎಂದು ಕರೆದೆ ನೀವು ಪಾರ್ಲಿಮೆಂಟ್‌ಗೆ ಹೋದ್ರಿ.. ಈಗಲೂ ಸಿದ್ದ.. ನಾನು ಬರುತ್ತೇನೆ. ನಾವು ಒಂದಾಗಿದ್ದಾಗ ನಿಮ್ಮ ಅಣ್ಣ ಬಾಳಕೃಷ್ಣೇಗೌಡ ನನ್ನ ತಂಗಿ, ಅಮ್ಮ, ಹೆಂಡತಿ ಮೇಲೆ ಹಾಕಿಸಿದ್ದ ಎಲ್ಲಾ ಕೇಸನ್ನು ಮರೆತಿದ್ದೆ, ಬಾಲಗಂಗಾಧರನಾಥ ಶ್ರೀಗಳ ಮೇಲೆನ ಹಾಕಿಸಿದ್ದ ಕೇಸನ್ನು ಮರೆತಿದ್ದೆ, ಮತ್ತೆ ನೆನಪಿಸಿದ್ದೀರಿ.. ನಿಮ್ಮ ಸೋದರ ಬಾಲಕೃಷ್ಣೇಗೌಡ ಒಬ್ಬ ಸರ್ಕಾರಿ ಅಧಿಕಾರಿ. ಅವರ ಎಷ್ಟು ಸಾವಿರ ಕೋಟಿ ಇದೆ ಎಂಬುದನ್ನು ಬಯಲು ಮಾಡುತ್ತೇನೆ. ನಾನು ಎಲ್ಲವನ್ನೂ ಚರ್ಚಿಸಲು ಸಿದ್ದನಿದ್ದೇನೆ. ಮುಂದಿನ ಪೀಳಿಗೆಗಾದರೂ ಸತ್ಯ ದಾಖಲೆಯಾಗಿ ಇರಲಿ ಎಂದು ಡಿಕೆಶಿ ಸವಾಲೆಸೆದರು.
ಏ ವಿಜಯೇಂದ್ರ….
ಮುಡಾ ಹಗರಣದ ವಿಚಾರವಾಗಿ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ದ ಮಾತನಾಡಿದ ಅವರು, “ಏ ವಿಜಯೇಂದ್ರ ನಿನಗೆ ತಾಕತ್ತಿದ್ದರೆ, ನಿನ್ನ ತಂದೆಗೆ ಧೈರ್ಯವಿದ್ದರೆ, ಯಾರು ಕಾಂಗ್ರೆಸ್ಸಿಗರು ಎಂದು ಬಹಿರಂಗಪಡಿಸು. ನಾನು ನಿನ್ನದನ್ನು ಬಿಚ್ಚಿ ಬಿಚ್ಚಿ ಇಡುತ್ತೇನೆ..” ಎಂದರು.
ಒಂದೇ ಗಂಟೆಯಲ್ಲಿ ಮೇಕೆದಾಟಿಗೆ ಅನುಮತಿ ಕೊಡುತ್ತೇನೆ ಎಂದೆಯಲ್ಲಾ ಕುಮಾರಣ್ಣ, ಯಾಕೆ ನಿನ್ನ ಬಜೆಟ್‌ನಲ್ಲಿ ಮಾತನಾಡಿಲ್ಲ? ಡಿಕೆ.ಸುರೇಶ್ ನಮ್ಮ ಹಕ್ಕು ನಮ್ಮ ತೆರಿಗೆ ಎಂದು ಹೋರಾಟ ಮಾಡಿದರೆಂದು ತಂತ್ರ ಮಾಡಿ ಸೋಲಿಸಿದರು. ಆದರೆ 2028ಕ್ಕೆ ಮತ್ತೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ಮೈಸೂರಿನದ್ದು ಏನೂ ಚಿಂತೆ ಇಲ್ಲ.. ನಾನು ಅಣ್ಣ ಎಂದು ಒಪ್ಪಿಕೊಂಡು ಸಿಎಂ ಮಾಡಿದೆ ಉಪಕಾರ ಸ್ಮರಣೆ ಇಟ್ಟುಕೊಳ್ಳಬೇಕು. ನಿಮ್ಮ ಎಲ್ಲಾ ಆಸ್ತಿಗಳು ಎಲ್ಲಿಂದ ಬಂತು, ಗ್ರಾಂಟ್ ಇದೆಯಾ, ಮೂಲ ದಾಖಲೆಗಳು ಇದೆಯಾ ಎಲ್ಲ ಬಿಚ್ಚಿ ಮಾತನಾಡುತ್ತೇನೆ. ಇದು ಏಳು ದಿನದ ಕಾರ್ಯಕ್ರಮ, ನಾವು ಪಾದಯಾತ್ರೆ ಮಾಡುವುದಿಲ್ಲ. ಸಭೆ ಮಾಡುತ್ತೇವೆ ಬರೀ ಗದ್ದಲ, ಬರೀ ಹಿಟ್‌ಅಂಡ್ ರನ್ ಮಾಡುವುದಲ್ಲ ಎಂದು ಕುಮಾರಸ್ವಾಮಿ ವಿರುದ್ದ ಗುಡುಗಿದರು.