ಪಿವಿ ವಿಶೇಷ

ಉಡುಪಿ: ಬಸ್ ಗೆ ಹಿಂಬದಿಯಿಂದ ಎಕ್ಸ್‌ಪ್ರೆಸ್‌ ಬಸ್ ಢಿಕ್ಕಿ: ಚಾಲಕನಿಗೆ ಗಾಯ

ಉಡುಪಿ: ಬಸ್ ಢಿಕ್ಕಿ ಹೊಡೆದು ಚಾಲಕ ಗಾಯಗೊಂಡ ಘಟನೆ ಇಂದ್ರಾಳಿಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.ಉಡುಪಿಯಿಂದ ಮಣಿಪಾಲಕ್ಕೆ ತೆರಳುತ್ತಿದ್ದ ಸಿಟಿ ಬಸ್ ಗೆ ಹಿಂಬದಿಯಲ್ಲಿ ಅತೀ ವೇಗದಿಂದ ಬಂದ ಎಕ್ಸ್‌ಪ್ರೆಸ್‌ ಬಸ್ ಢಿಕ್ಕಿ ಹೊಡೆದ ಪರಿಣಾಮ ಆ ಬಸ್ ನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಒಂದು ಬಸ್ ನ ಹಿಂಭಾಗ ಹಾಗೂ ಮತ್ತೊಂದು ಬಸ್ ನ ಮುಂಭಾಗ ಜಖಂಗೊಂಡಿದೆ. ಮಣಿಪಾಲ ಠಾಣೆಯ ಪೊಲೀಸರು ಆಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Related Articles

Leave a Reply

Your email address will not be published. Required fields are marked *

Back to top button