ಮಾರಲಣಿಯಾಗಿದ್ದ ಅಕ್ರಮ ಗಾಂಜಾದ ಮಾಲನ್ನು ವಶಪಡಿಸಿಕೊಂಡು ಪರಾರಿಯಾದ ಮಾಲೀಕರಿಗೆ ಬಲೆ ಬೀಸಿದ ಅಬ್ಕಾರಿ ಇಲಾಖೆ….!
ಹನೂರು :- ತಾಲೂಕಿನ ಗಡಿ ಭಾಗದ ಮಿಣ್ಯಂ ಗ್ರಾಮದ ಮನೆಯೊಂದರಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿದ್ದ ಒಣ ಗಾಂಜಾವನ್ನು ವಶಕ್ಕೆ ಪಡೆದು ಕೊಳ್ಳುವಲ್ಲಿ ಅಬಕಾರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಾಮರಾಜನಗರ ಅಬಕಾರಿ ಉಪ ಆಯುಕ್ತರಾದ ನಾಗಶಯನರವರ ನಿರ್ದೇಶನದ ಮೇರೆಗೆ,ಮಾನ್ಯ ಅಬಕಾರಿ ಉಪ ಅಧೀಕ್ಷಕರು ಎಂ.ಡಿ.ಮೋಹನ್ ಕುಮಾರ್, ಮಾರ್ಗದರ್ಶನದಲ್ಲಿ ಕೊಳ್ಳೇಗಾಲ ವಲಯದ ಅಬಕಾರಿ ನಿರೀಕ್ಷಕರಾದ ಸುನಿಲ್ ಡಿ ನೇತ್ರತ್ವದಲ್ಲಿ ಅಬಕಾರಿ ಪೋಲಿಸರ ತಂಡ ಮೀಣ್ಯಮ್ ಗ್ರಾಮದ ಜಮೀನಿನೊಂದರ ಮನೆಯೊಂದರಲ್ಲಿ ಆಕ್ರಮವಾಗಿ ಗಾಂಜಾ ಶೇಖರಣೆ ಮಾಡಿರುವ ಖಚಿತ ಮಾಹಿತಿ ಮೇರೆಗೆ ಧಾಳಿ ನೆಡೆಸಿ ಪರಿಶೀಲಿಸಿದಾಗ ಸುಮಾರು ಸುಮಾರು 2 ಲಕ್ಷ ರೂಪಾಯಿ ಮೌಲ್ಯದ 5 ಕೆಜಿ 33 ಗ್ರಾಮ್ ಒಣ ಗಾಂಜಾವನ್ನು ಪಡೆದುಕೊಂಡು ಗಾಜನೂರು ಮೂಲದ ಮುರುಗೆಶ್ ಹಾಗೂ ಗೋವಿಂದರಾಜು ಎಂಬಾತನ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ ಅಲ್ಲದೆ ಆರೋಪಿಗಳು ನಾಪತ್ತೆಯಾಗಿರುವ ಹಿನ್ನಲೆ ಪತ್ತೆಗೆ ಅಬಕಾರಿ ಪೋಲಿಸರು ಬಲೆಬೀಸಿದ್ದಾರೆ.
ಈ ಕಾರ್ಯಚರಣೆಯಲ್ಲಿ ಅಬಕಾರಿ ಉಪನಿರೀಕ್ಷಕರಾದ ಸಿದ್ದಯ್ಯ ಅಬಕಾರಿ ಮುಖ್ಯ ಪೇದೆಗಳಾದ ರಮೇಶ್ , ಪ್ರದೀಪ್ ಕುಮಾರ್, ಸುಂದ್ರಪ್ಪ, ಜಯಪ್ರಕಾಶ್, ರವಿಕುಮಾರ್ ಪೇದೆಗಳಾದ ಸುಜನ್ ರಾಜ್ ದೇವರಾಜ್ ಮತ್ತು ವಾಹನ ಚಾಲಕ ಮಂಜು ಪ್ರಸಾದ್ ಹಾಜರಿದ್ದರು.