ಬಿರುಗಾಳಿ ಸಹಿತ ಜೋರು ಮಳೆಗೆ ನೆಲಕ್ಕೆ ಬಿದ್ದ ಮರ, ವಿದ್ಯುತ್ ಕಂಬಗಳು..!
ಹನೂರು : ರಾತ್ರಿ ವೇಳೆ ಬೀಸಿದ ಬಿರುಗಾಳಿಗೆ ಬೃಹತ್ ಮರ ವಿದ್ಯುತ್ ಕಂಬ ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಪರಿಣಾಮ ವಾಹನ ಸಂಚಾರಕ್ಕೆ ತೊಡಕುಂಟಾಗಿ ನಂತರ ಬೆಳಗ್ಗೆ ಮರ ಮತ್ತು ವಿದ್ಯುತ್ ಕಂಬವನ್ನು ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.ತಾಲೂಕಿನ ಲೊಕ್ಕನಹಳ್ಳಿ ಒಡೆಯರ ಪಾಳ್ಯ ಮಾರ್ಗದ ಮುಖ್ಯ ರಸ್ತೆ ಬೂದಿಪಡಗ ಕೌಳಿಕಟ್ಟೆ ಹಳ್ಳದ ಹತ್ತಿರ ಮುಖ್ಯ ರಸ್ತೆಗೆ ಅಡ್ಡಲಾಗಿ ಬೃಹತ್ ಮರ ನೆಲಕ್ಕುರುಳಿದ ಪರಿಣಾಮ ಜೊತೆಗೆ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಯಾವುದೇ ಅಫಘಾತ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.ರಾತ್ರಿ ವೇಳೆ ಬಿರುಗಾಳಿಗೆ ಬೃಹತ್ ಮರ ನೆಲಕ್ಕುರುಳಿದ ಪರಿಣಾಮ ವಾಹನ ಸಂಚಾರ ತೊಂದರೆಯಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ನಂತರ ಬೆಳಗ್ಗೆ ಸಂಭಂದ ಪಟ್ಟ ಸಿಬ್ಬಂದಿಗಳು ಸಾರ್ವಜನಿಕರು ಮರವನ್ನು ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಮುರಿದಿರುವ ವಿದ್ಯುತ್ ಕಂಬವನ್ನು ತೆರವು ಮಾಡಿ ಹೊಸ ವಿದ್ಯುತ್ ಕಂಬ ಹಾಕಿ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು.
ರಾತ್ರಿ ವೇಳೆ ಬೀಸಿದ ಬಿರುಗಾಳಿಗೆ ಬೃಹತ್ ತೆಂಗಿನ ಮರ ಮನೆಯ ಮೇಲೆ ಉರುಳಿ ಬಿದ್ದಿರುವುದರ ಪರಿಣಾಮ ಮನೆಯ ಗೋಡೆ ಮೇಲ್ಛಾವಣಿಗೆ ಹಾನಿಯಾಗಿರುವ ಘಟನೆ ಬೂದಿಪಡಗ ಹತ್ತಿರ ನಡೆದಿದೆ. ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೂದಿಪಡಗ ಗ್ರಾಮದ ಪಳನಿ ಸ್ವಾಮಿ ಎಂಬುವರ ಮನೆಯ ಮೇಲೆ ತೆಂಗಿನ ಮರ ಉರುಳಿ ಬಿದ್ದಿವೆ. ಇದರಿಂದಾಗಿ ಮನೆಯ ಹಂಚುಗಳು ಹಾಳಾಗಿದ್ದು. ಗೋಡೆಗೆ ಹಾನಿಯಾಗಿದೆ. ಘಟನೆ ಸಂದರ್ಭದಲ್ಲಿ ಮನೆಯಲ್ಲಿದ್ದವರು ಪ್ರಾಣಾಪಾಯದದ ಪಾರಾಗಿದ್ದಾರೆ.