ಪಿವಿ ವಿಶೇಷ

ಶಾಲಾ ಮಕ್ಕಳನ್ನು ಅಕ್ರಮ ದುಡಿಮೆಗೆ ದೂಡಿದ ಶಿಕ್ಷಕರು..! ಕ್ರಮಕ್ಕೆ ಆಗ್ರಹಿಸಿ ಪೋಷಕರಿಂದ ದೂರು..!

ಉಡುಪಿ :- ಪಿಎಂ ಶ್ರೀ ಕುಕ್ಕೆಹಳ್ಳಿ ಶಾಲೆಯ ಮಕ್ಕಳಿಂದ ಗಾರೆ ಕೆಲಸ ಹಾಗೂ ಸಿಮೆಂಟ್ ಕೆಲಸವನ್ನು ಮಾಡಿಸುತ್ತಿರುವ ಬಗ್ಗೆ ಪೋಷಕರಿಂದ ದೂರು ಹಾಗೂ ಅದಕ್ಕೆ ಸಂಬಂಧಿಸಿದ ವಿಡಿಯೋ ತುಣುಕುಗಳು ನೋಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಲೆಯ ದೈಹಿಕ ಶಿಕ್ಷಕ ಹಾಗೂ ಸಹ ಶಿಕ್ಷಕರಾದ,ಗಣೇಶ್, ವಿಶ್ವನಾಥ್ ಎಂಬವರು ಮಕ್ಕಳಿಂದ ಇಂತಹ ಕೆಲಸವನ್ನು ಮಾಡಿಸುವುದಲ್ಲದೆ ಮಳೆ ನೀರು ನಿಂತಲ್ಲಿ ಕಲ್ಲು ಹಾಕಿ ಸಮತಟ್ಟು ಮಾಡಲು ರೋಲರ್ ಎಳೆಸುವ ಕೆಲಸವನ್ನು ಕೂಡ ಮಾಡಿಸುತ್ತಿರುವ ಗಂಭೀರ ಆರೋಪ ಮಾಡಿದ್ದಾರೆ

ಮಕ್ಕಳನ್ನು ವಿದ್ಯೆ ಕಲಿಸಿ ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ಮುತುವರ್ಜಿ ವಹಿಸಬೇಕಾದ ಶಿಕ್ಷಕರು ಬಾಲ ಕಾರ್ಮಿಕ ದಿನದಂದೇ ಕಾರ್ಮಿಕತೆಗೆ ದೂಡುತ್ತಿರುವುದು ವಿಪರ್ಯಾಸವೇ ಸರಿ

ಅದರಿಂದ ಅಧಿಕಾರಿಗಳು ಕೂಡಲೇ ಇವರ ಮೇಲೆ ಶಿಸ್ತು ಕ್ರಮವನ್ನು ಜರಗಿಸಲು ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ) ಯು ಒತ್ತಾಯಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button