ಅಕ್ರಮ ದಾಸ್ತಾನು ಮಾಡಿದ ಖಾಸಗಿ ಗೋಡನ್ ಮೇಲೆ ದಾಳಿ 121 ಅಕ್ಕಿ ಮೂಟೆ ಸೀಜ್…!
ಚಿಕ್ಕಬಳ್ಳಾಪುರ : ಬಾಗೇಪಲ್ಲಿ ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಂಬಂದಿಸಿದಂತೆ ತಹಸೀಲ್ದಾರ್ ಮನಿಷಾ ಪತ್ರಿ ನೇತೃತ್ವದಲ್ಲಿ ಮೆಗಾ ರೈಡ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಭಷ್ಟಾಚಾರ ಬಡ ಮಕ್ಕಳಿಗೆ ಸೇರಬೇಕಾಗಿದ್ದ ಅನ್ನವನ್ನ ಲೂಟಿ ಮಾಡುತ್ತಿರುವ ದಂಧೆ ಕೋರರು ಮಹಿಳಾ ಮತ್ತು ಮಕ್ಕಳ ಕಲ್ಯಾಣಾ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ರವರು ನೋಡಲೇಬೇಕಾದ ಸುದ್ದಿ ಅಂಗನವಾಡಿ ಮಕ್ಕಳಿಗೆ ಸೇರಬೇಕಾದ ನೂರಾರು ಮೂಟೆ ರೇಷನ್ ಅಕ್ರಮ ದಾಸ್ತಾನು.
ಕಾಳ ಸಂತೆಯಲ್ಲಿ ಮಾರಾಟ ಮಾಡಲು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ರೇಷನ್ ಅಕ್ಕಿ ದಾಸ್ತಾನು ಮಾಧ್ಯಮ ಲೋಕದಲ್ಲೆ ಮೆಗಾ ಎಕ್ಸ್ಲೂಸೀವ್ ಕವರೇಜ್ ಅಕ್ಕಿ ಬೇಳೆ ಎಣ್ಣೆ ಸಾಂಬಾರು ಮಸಾಲಪುಡಿ ಉಪ್ಪು ಸೇರಿದಂತೆ ಲಕ್ಷಾಂತರ ರೂಪಾಯಿ ರೇಷನ್ ದಾಸ್ತಾನು ಮಾಡಿದ್ದಾರೆ.ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಪೂಲವಾರಪಲ್ಲಿ ಖಾಸಗಿ ಮನೆಯ ಗೋಡನ್ ಒಂದರಲ್ಲಿ ರೇಷನ್ ದಾಸ್ತಾನು ಪೂಲವಾರಪಲ್ಲಿ ಗ್ರಾಮದ ನಿವಾಸಿ ನಾಗರಾಜು ಎಂಬುವರ ಮನೆಯಲ್ಲಿ ದಾಸ್ತಾನು ಗೋಡಾನ್ ಬಾಗಿಲು ತೆಗೆಯದ ದಂಧೆ ಕೋರರು ಗೋಡಾನ್ ನಲ್ಲಿ ನೂರಾರು ಮೂಟೆ ರೇಷನ್ ದಾಸ್ತಾನು ಮಾಡಿ ಕೂಡಾಕ್ಕಿದ್ದ ಅಕ್ಕಿ ಮತ್ತು ಗೋಧಿ ಮೂಟೆಗಳು.
ಬಾಗೇಪಲ್ಲಿ ತಾಲ್ಲೂಕಿನ ಪೂಲವಾರಪಲ್ಲಿ ಗ್ರಾಮದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಗೋಡನ್ ನಲ್ಲಿ ಗೋಣಿ ಚೀಲದಲ್ಲಿದ್ದ 50 ಮೂಟೆ ಅಕ್ಕಿ ಮತ್ತು ಪ್ಲಾಸ್ಟಿಕ್ ಚೀಲದಲ್ಲಿದ್ದ 49 ಮೂಟೆ ಅಕ್ಕಿ ಹಾಗೂ 1 ಮೂಟೆ ರಾಗಿ, 21 ಮೂಟೆ ಗೋದಿ ಆಹಾರ ಸರಬರಾಜು ಚಿನ್ಹೆ ಹೊಂದಿರುವ ಒಟ್ಟು 121 ಮೂಟೆ ಅಕ್ಕಿ ಮತ್ತು 442 ಹುರಳಿ ಮೂಟೆಗಳು ಇದರ ಜೊತೆಗೆ ಅಂಗನವಾಡಿ ಕೇಂದ್ರಗಳಲ್ಲಿ ವಿತರಣೆ ಮಾಡುವ ಪದಾರ್ಥಗಳ ಪ್ಯಾಕೇಟ್ ಗಳು ಪತ್ತೆಯಾಗಿವೆ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಕಾಶ್ ನಿಟ್ಟಾಲಿ ಭೇಟಿ ನೀಡಿ ಪರಿಶೀಲನೆ ನಡೆಸಿ ಕೂಡಲೇ ಅಕ್ರಮವಾಗಿ ದಸ್ತಾನು ಮಾಡಿರುವ ಎಲ್ಲಾ ಮೂಟೆಗಳು ಮುಟ್ಟಗೋಲು ಹಾಕಿಕೊಂಡು ವ್ಯಾಪಾರಸ್ತ ವ್ಯಕ್ತಿ ವೆಂಕಟೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ವಿಚಾರಣೆ ಮಾಡುವಂತೆ ಸೂಚಿಸಿದ್ದಾರೆ ಎಂದು ತಹಸೀಲ್ದಾರ್ ಮನಿಷಾ ಪತ್ರಿ ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ರಮೇಶ್, ಪೊಲೀಸ್ ಇನ್ಸ್ಪೆಕ್ಟರ್ ಪ್ರಶಾಂತ್ ವರ್ಣಿ,ಸಿ.ಡಿ.ಪಿ.ಓ ರಾಮಚಂದ್ರ,ಆಹಾರ ಇಲಾಖೆ ಎಸ್.ಪುಷ್ಪಾ,ಅಕ್ಷರ ದಾಸೋಹ ನರಸಿಂಹಾರೆಡ್ಡಿ,ಸಮಾಜ ಕಲ್ಯಾಣ ಇಲಾಖೆ ನಾಗರಾಜ್, ಕಂದಾಯ ನಿರೀಕ್ಷಕ ವೇಣುಗೋಪಾಲ್, ಸೇರಿದಂತೆ ಇತರರು ಇದ್ದರು….
ವರದಿ : ವೆಂಕಟಾಚಲಪತಿ ಚಿಕ್ಕಬಳ್ಳಾಪುರ