ಭಟ್ಕಳ ಸುತ್ತಾ ಮುತ್ತ ಮಟ್ಕಾ ದಂಧೆಗೆ ಸಿಲುಕಿ ಮಟಾಸ್ ಅಗುತ್ತಿರುವ ಕೂಲಿ ಕಾರ್ಮಿಕರು..!ಸಣ್ಣಪುಟ್ಟ ಅಂಗಡಿಗಳಲ್ಲೂ ಮಟ್ಕಾದೇ ದರ್ಬಾರ್ ಸಾಮಾನ್ಯ ಜನ ಬರ್ಬಾತ್..!
ಭಟ್ಕಳ: ಭಟ್ಕಳ ತಾಲೂಕಿನ ನಗರದಲ್ಲಿ ಹೂವಿನ ಪೇಟೆ, ಮಾರಿಕಟ್ಟೆ ಹತ್ತಿರ, ಬೈ ಪಾಸ್, ಭಟ್ಕಳ ಸರ್ಕಲ್, ರಂಗಿನಕಟ್ಟೆ, ತಾಲೂಕ ಪಂಚಾಯತ್ ಕಟ್ಟಡ ಹತ್ತಿರ ಓಸಿ ಮಟ್ಕಾ ದಂಧೆ ಪೋಲಿಸರ ಕಣ್ಣು ತಪ್ಪಿಸಿ ರಾಜ ರೋಷವಾಗಿ ಜೋರಾಗಿಯೇ ನಡೆಯುತ್ತಿದೆ, ಈ ಬಗ್ಗೆ ಭಟ್ಕಳ ಪೋಲಿಸ್ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ. ತಾಲೂಕಿನ ಭಟ್ಕಳ , ಶಿರಾಲಿ, ಮುರುಡೇಶ್ವರ , ಸರ್ಪನಕಟ್ಟೆ , ಬಂದರ್ ಭಾಗದಲ್ಲಿ ಮಟ್ಕಾ ದಂಧೆಯಿಂದ ಬಹಳಷ್ಟು ಜನರು ತಮ್ಮ ಹಣ ಕಳೆದುಕೊಳ್ಳುತ್ತಿದ್ದಾರೆ. ಈ ಭಾಗದಲ್ಲಿ ಬಡ ಜನರು,ಕೂಲಿ ಕಾರ್ಮಿಕರು, ಹಾಗೂ ಕೃಷಿಕರು ಹೆಚ್ಚಿದ್ದು ಹಣದ ಆಸೆಗೆ ದಿನವೂ ಮಟ್ಕಾ ಆಟ ಆಡುತ್ತಿದ್ದಾರೆ. ಓಸಿ ಮಟ್ಕಾ ದಂಧೆಯಿಂದ ಬಡ ಜನರ ಜೀವನ ಹಾಳಾಗುತ್ತಿದ್ದು, ದುಡಿದ ಹಣವೆಲ್ಲಾ ಮಟ್ಕಾ ಆಟಕ್ಕೆ ಹಾಕಿ ಜನರು ಕಂಗಾಲಾಗಿದ್ದಾರೆ.ಇತ್ತ ಎಷ್ಟೋ ಜನರು ಸಾಲ ಮಾಡಿ ಮಟ್ಕಾ ಆಟ ಆಡಿ ತಮ್ಮ ಜಮೀನು ಮನೆ ಮಾರಿದ್ದಾರೆ ಎಂಬುದು ಸತ್ಯ ಸಂಗತಿ. ಈ ಭಾಗದ ಕೆಲ ಗೂಡಂಗಡಿಗಳಲ್ಲಿ ಮಟ್ಕಾ ನಂಬರಗಳನ್ನು ತೆಗೆದುಕೊಳ್ಳಲಾಗುತ್ತದೆ, ಮತ್ತೆ ಕೆಲವು ಎಂಜಟರುಗಳು ಇದ್ದು ಮೊಬೈಲ್ ಮೂಲಕವೇ ನಂಬರ್ ತೆಗೆದುಕೊಳ್ಳುತ್ತಾರೆ, ದಿನವೂ ಸಾವಿರಾರು ರೂಪಾಯಿ ಹಣವನ್ನು ಇಲ್ಲಿನ ಬಡ ಜನರು ಮಟ್ಕಾ ಆಟಕ್ಕೆ ಹಾಳು ಮಾಡುತ್ತಿರುವುದು ಬೇಸರದ ಸಂಗತಿಯಾಗಿದೆ. ಈ ಬಗ್ಗೆ ಭಟ್ಕಳ ನಗರ ಹಾಗೂ ಗ್ರಾಮೀಣ ಪೋಲಿಸ್ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡು ಮಟ್ಕಾ ಆಡುವವರ ಮತ್ತು ಆಡಿಸುವವರ ವಿರುದ್ದ ಕ್ರಮ ಕೈಗೊಳ್ಳಬೇಕಿದೆ.