ಗುಂಡಾಲ್ ಬಳಿ ಚಿರತೆಯ ಕಾಟ ಬೇಕೆಂದಾಗ ಬಂದು ಹತ್ತಾರು ಮೇಕೆಗಳನ್ನು ಭಕ್ಷಿಸಿ ಹೋಗಿದ್ದರೂ ಚಿರತೆ ಹಿಡಿಯುವ ಕೆಲಸಕ್ಕೆ ಮುಂದಾಗದ ಅರಣ್ಯ ಇಲಾಖೆ..!
ಆತಂಕದಲ್ಲಿ ಆಸು ಪಾಸಿನ ರೈತರು..ಅರಣ್ಯ ಇಲಾಖೆ ವಿರುದ್ದ ಪ್ರತಿಭಟನೆಗೆ ಸಜ್ಜು..!
ಕೊಳ್ಳೇಗಾಲ :- ತಾಲೂಕಿನ ಗುಂಡಾಲ್ ಜಲಾಶಯ ಸಮೀಪದಲ್ಲಿರುವ 517 ಸರ್ವೇ ನಂಬರ್ ನ ಪಕ್ಕದ ಜಮೀನಿನಲ್ಲಿ ಮಹೇಶ್ ಎಂಬುವವರಿಗೆ ಸೇರಿದ ಹತ್ತಕ್ಕೂ ಹೆಚ್ಚು ಕುರಿ ಆಡು ಮರಿಗಳನ್ನು ಕಳೆದ ನಾಲ್ಕು ದಿನಗಳಿಂದ ಚಿರತೆ ಬೇಟೆಯಾಡುತ್ತಿದ್ದೆ.
ಸಂಬಂಧ ಪಟ್ಟ ಅರಣ್ಯ ಇಲಾಖೆಯವರು ಸುಮ್ಮನೆ ಬಂದು ನೋಡಿ ಫೋಟೋ ತೆಗೆದುಕೊಂಡು ಹೋಗುತ್ತಾರೆ ಆದರೆ ಚಿರತೆ ಹಿಡಿದು ಬೇರೆಡೆಗೆ ಬಿಡುವ ಕೆಲಸ ಮಾಡುತ್ತಿಲ್ಲ ನಾವು ಹೈನುಗಾರಿಕೆ ಮಾಡಿ ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದೇವೆ ಇದೆ ರೀತಿ ಆಡು ಕುರಿಗಳನ್ನು ಬಲಿ ಪಡೆಯುತ್ತಿದ್ದಾರೆ ನಾವು ಯಾವ ರೀತಿ ಜೀವನ ನಡೆಸುವುದು.ಎಂದು ರೈತ ಮಹೇಶ್ ಹಾಗು ಸುತ್ತಮುತ್ತಲಿನ ರೈತರು ಮತ್ತು ಮಹಿಳೆಯರು ಅಕ್ರೋಶ ವ್ಯಕ್ತಪಡಿಸಿ ಅರಣ್ಯ ಇಲಾಖೆ ಸಿಬ್ಬಂದಿಗಳ ವಿರುದ್ಧ ಅಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕಳೆದ ವಾರದಿಂದ ಆಡು ಕುರಿಗಳನ್ನು ಬೇಟೆಯಾಡುತ್ತಿರುವ ಚಿರತೆಯನ್ನು ಅರಣ್ಯ ಇಲಾಖೆಯವರು ಹಿಡಿದು ಬೇರೆಡೆಗೆ ಬಿಡಬೇಕೆಂದು ಗ್ರಾಮದ ಮುಖಂಡರು ಸುತ್ತಮುತ್ತಲ ಸಾರ್ವಜನಿಕರು ಒತ್ತಾಯಿಸಿದ್ದಾರೆ.