ಬಹಿರ್ದೆಸೆಗೆ ತೆರಳಿ ನೀರಿಗಾಗಿ ನದಿಗೆ ಹೋಗಿದ್ದ ವ್ಯಕ್ತಿ ಮೇಲೆ ಮೊಸಳೆ ದಾಳಿ ಗಂಭಿರ ಗಾಯ ಆಸ್ಪತ್ರೆಗೆ ದಾಖಲು…!!
ಕೊಳ್ಳೇಗಾಲ :- ತಾಲೂಕಿನ ಸತ್ತೇಗಾಲ ಗ್ರಾಮದ ಬಳಿ ಇರುವ ಎಡಕುರಿಯಾ ನದಿ ದಡದಲ್ಲಿ ಸತ್ತೇಗಾಲ ಗ್ರಾಮದ ನಂಜುಂಡಸ್ವಾಮಿ S/O ಪಾಪಣ್ಣ ಎಂಬ ವ್ಯಕ್ತಿ ಮೇಲೆ ಇಂದು ಬೆಳಗ್ಗೆ 11: 30 ರ ಸಮಯದಲ್ಲಿ ಮೊಸಳೆಯು ದಾಳಿ ಮಾಡಿದ್ದು ಹಲ್ಲೆಗೊಳಗಾದ ವ್ಯಕ್ತಿ ಕೊಳ್ಳೇಗಾಲ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.. ಸತ್ತೇಗಾಲ ಗ್ರಾಮದ ನಂಜುಂಡಸ್ವಾಮಿಯವರು ಇಂದು ಮುಂಜಾನೆ ಕೆಲಸಕ್ಕೆ ತೆರುಳುವ ಸಮಯದಲ್ಲಿ ಬಹಿರ್ದೆಸೆ ಮುಗಿಸಿ ನದಿಯ ಬಳಿ ಹೋದಾಗ ಮೊಸಳೆ ಇದೆ ಎಂಬುದನ್ನು ತಿಳಿಯದೆ ನದಿಯ ಬಳಿ ಹೋಗಿ ನಂಜುಂಡಸ್ವಾಮಿಯವರ ಬಲಗೈಗೆ ತೀರವಾಗಿ ಕಚ್ಚಿ ಮತ್ತು ಮುಖದ ಮೇಲೆ ಮೊಸಳೆ ತುಂಬಾ ಕ್ರೂರವಾಗಿ ಹಲ್ಲೆ ಮಾಡಿದೆ.. ಮೊಸಳೆಯ ದಾಳಿಯಿಂದ ತಪ್ಪಿಸಿಕೊಂಡು ದಡದ ಬಳಿ ಪ್ರಜ್ಞೆ ತಪ್ಪಿ ಬಿದ್ದಿದ್ದರು.. ಇದನ್ನು ಅಲ್ಲಿ ಇದ್ದ ಗ್ರಾಮದವರು ಕಂಡು ಕೂಡಲೇ ಅರಣ್ಯ ಅಧಿಕಾರಿಗಳಿಗೆ ತಿಳಿಸಿ ಮುಂಜಾಗ್ರತೆ ಕ್ರಮ ವಹಿಸಿದ್ದಾರೆ. ನಂಜುಂಡಸ್ವಾಮಿಯವರನ್ನು ಕೊಳ್ಳೇಗಾಲ ಪಟ್ಟಣದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಸೂಕ್ತವಾದ ಪ್ರಥಮ ಚಿಕಿತ್ಸೆಯನ್ನು ನೀಡಿಲಾಗುತ್ತಿದೆ.. ಮತ್ತು ಬಲಗೈನ ಅಂಗೈ ಭಾಗದ ಮೂಳೆಗಳು ಪುಡಿಯಾಗಿರುವುದರಿಂದ ಅದಕ್ಕೆ ಸೂಕ್ತವಾದ ಆಪರೇಷನ್ ನಡೆಸಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಲು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿದೆ..