ನವೆಂಬರ್ ೯ ರಂದು ಮಂಜಗುಣಿಯಲ್ಲಿ ಹಳ್ಳಿ ಕಡೆ ನಡಿಗೆ; ಭೂಮಿ ಹಕ್ಕು, ಸರ್ವಋತು ರಸ್ತೆ ವಂಚಿತರಾದವರಿAದ- ಹಕ್ಕಿಗಾಗಿ ನಡಿಗೆ.
ನವೆಂಬರ್ ೯ ರಂದು ಮಂಜಗುಣಿಯಲ್ಲಿ ಹಳ್ಳಿ ಕಡೆ ನಡಿಗೆ;
ಭೂಮಿ ಹಕ್ಕು, ಸರ್ವಋತು ರಸ್ತೆ ವಂಚಿತರಾದವರಿAದ- ಹಕ್ಕಿಗಾಗಿ ನಡಿಗೆ.
ಶಿರಸಿ: ಭೂಮಿ ಹಕ್ಕು, ಸರ್ವಋತು ರಸ್ತೆ ಹಾಗೂ ಮೂಲಭೂತ ಸೌಲಭ್ಯದಿಂದ ವಂಚಿತರಾದ ಶಿರಸಿ ತಾಲೂಕ, ಮಂಜಗುಣಿ ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮಸ್ಥರ ಹಕ್ಕಿಗಾಗಿ ನಡಿಗೆ ಕಾರ್ಯಕ್ರಮವನ್ನ ನವೆಂಬರ್ ೯ ರ ಮುಂಜಾನೆ ೯ ಗಂಟೆಗೆ ಕಿರಿಯ ಪ್ರಾರ್ಥಮಿಕ ಶಾಲೆ ಸವಲೆಯಿಂದ ಮಂಜಗುಣಿ ಗ್ರಾಮ ಪಂಚಾಯತ ಕಾರ್ಯಾಲಯದವರೆಗೆ ಹತ್ತು ಕೀ.ಮೀ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆದ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ವತಂತ್ರ ಅಮೃತ ಮಹೋತ್ಸವ ಅಂಗವಾಗಿ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಜಿಲ್ಲೆಯ ೭೫ ಗ್ರಾಮ ಪಂಚಾಯತದಲ್ಲಿ ಭೂಮಿ ಹಕ್ಕು ಮತ್ತು
ಮೂಲಭೂತ ಸೌಕರ್ಯಕ್ಕಾಗಿ ಹಳ್ಳಿ ಕಡೆ ನಡಿಗೆ ಕಾರ್ಯಕ್ರಮದ ಅಂಗವಾಗಿ ೨೭ ನೇ ಕಾರ್ಯಕ್ರಮವನ್ನ ಶಿರಸಿ ತಾಲೂಕಿನ, ಮಂಜಗುಣಿ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದ ವಿವರವನ್ನ ಪ್ರಕಟಿಸುತ್ತಾ ಮೇಲಿನಂತೆ ಹೇಳಿದರು.
ಮಂಜಗುಣಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸುಮಾರು ಎರಡು ಸಾವಿರ ಜನಸಂಖ್ಯೆ ಒಳಗೊಂಡಿರುವ ಸುಮಾರು ೭೦೫ ವಾಸ್ತವ್ಯ ಇಮಾರತ್ತನ್ನು ಒಳಗೊಂಡಿದೆ. ಗ್ರಾಮದಲ್ಲಿ ಅಧೀಕೃತ ನಿವೇಶನ ಹೊಂದಿರದ ಕುಟುಂಬವು ೧೬೫ ಗಳಿದ್ದು, ಅರಣ್ಯ ಅತಿಕ್ರಮಣದಾರರ ಕುಟುಂಬ ಭೂಮಿ ಹಕ್ಕಿನ ನಿರೀಕ್ಷೆಯಲ್ಲಿರುವವರು ೨೫೭ ಕುಟುಂಬಗಳಾಗಿವೆ. ಪ್ರಾರ್ಥಮಿಕ ಶಾಲೆಯ ಕಟ್ಟಡ ಶೀಥಿಲತೆ, ಸ್ವಚ್ಛತೆ, ಶಾಶ್ವತ ಕುಡಿಯುವ ನೀರಿನ ಕೊರತೆ, ಪ್ರಖ್ಯಾತ ದೇವಾಲಯವಾದ ವೆಂಕಟರಮಣ ದೇವಾಲಯ ಪ್ರವಾಸೋಧ್ಯಮ ಅಭಿವೃದ್ಧಿ ಮತ್ತು ಆಕರ್ಷಣೆಗೆ ಪೂರಕ ಕಾರ್ಯ ಯೋಜನೆಗಳ ಕೊರತೆ ಪಂಚಾಯತ ವ್ಯಾಪ್ತಿಯಲ್ಲಿ ಕಂಡು ಬರುತ್ತದೆ ಅಂತ ಅವರು ತಿಳಿಸಿದರು.
ಅಸಮರ್ಪಕ ರಸ್ತೆ:
ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ೩೯ ಮಜರೆಗಳಿದ್ದು, ಅವುಗಳಲ್ಲಿ ಸವಲೆ, ಕಲ್ಲಳ್ಳಿ, ಮೂಡ್ನಗದ್ದೆ, ನೆಕ್ಕರಕಿ, ತೋಟದಲ್ಲಿ, ಉಬಲಗದ್ದೆ, ಹೊಸಗದ್ದೆ, ಶಿಗೆಮನೆ, ತೊಂಡೆಮನೆ ಮುಂತಾದ ಸುಮಾರು ೨೬ ಮಜರೆಗಳಿಗೆ ಡಾಂಭರೀಕರಣ ಅಥವಾ ಕಡೀಕರಣ ಇಲ್ಲದಿರುವ ಗ್ರಾಮಗಳಾಗಿರುವುದು ವಿಶೇಷ. ಮಣ್ಣಿನ ರಸ್ತೆಯಲ್ಲಿ ಮಳೆಗಾಲದಲ್ಲಿ ಗ್ರಾಮಸ್ಥರ ತಿರುಗಾಟ ಕಷ್ಟಕರ. ಕಾಲುಸಂಕವಿಲ್ಲದೇ ಓಡಾಡುವುದು ಹಿರಿಯರ ಮತ್ತು ಶಾಲಾ ವಿದ್ಯಾರ್ಥಿಗಳ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ರವೀಂದ್ರ ನಾಯ್ಕ ಹೇಳಿದರು.