ಪಿವಿ ವಿಶೇಷ

ಯಾವ ಪುರುಷರಿಗೂ ಕಮ್ಮಿ ಇಲ್ಲ ಈ ದಿಟ್ಟ ಮಹಿಳೆಲಕ್ಷ್ಮೀ ಮಟ್ಟುರು.

ಮಸ್ಕಿ : ಉದ್ಯೋಗಂ ಪುರುಷ ಲಕ್ಷಣಂ’ ಅನ್ನುವ ಹಳೆಯ ಗಾದೆ ಮಾತು ಈಗ ಅಕ್ಷರಶಃ ಬದಲಾಗಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಆಟೋ, ಬಸ್, ಲಾರಿಗಳ ಚಾಲನೆಯಲ್ಲಿ ಪುರುಷರದ್ದೇ ಪ್ರಾಬಲ್ಯ. ಅಂಥದರಲ್ಲಿ ರ‍್ವ ದಿಟ್ಟ ಮಹಿಳೆ ತನ್ನ ಮಕ್ಕಳ ಭವಿಷ್ಯ, ವಿದ್ಯಾಭ್ಯಾಸ ಹಾಗೂ ಜೀವನ ನರ‍್ವಹಣೆಗೆ ಎಲ್ಲಾ ರೀತಿಯ ವಾಹನ ಗಳಿಗೆ ಪಂಚರ ಹಾಕುವ ವೃತ್ತಿಯನ್ನು ಮಾಡವ ಮೂಲಕ ಪತಿಯೊಂದಿಗೆ ಸುಖ ಸಂಸಾರದ ನೌಕೆಯನ್ನು ಸಾಗಿಸುತ್ತ ಬದುಕನ್ನು ಕಟ್ಟಿಕೊಂಡಿದ್ದಾರೆ.ಹೌದು, ಹೀಗೆ ಕೈಯಲ್ಲಿ ಕಬ್ಬಿಣ ಹಿಡಿದುಕೊಂಡು ಗಾಡಿಗಳಿಗೆ ಪಂಚರ ಹಾಕುವ ಮಹಿಳ ಹೆಸರು ಲಕ್ಷ್ಮೀತಾಲ್ಲೂಕಿನ ಮಟ್ಟರು ಗ್ರಾಮದ ನಿವಾಸಿ. ಲಕ್ಷ್ಮಿ ಕಳೆದ ಹತ್ತು-ಹದಿನೈದು ರ‍್ಷಗಳಿಂದ ಮಟ್ಟುರು ಗ್ರಾಮದಲ್ಲಿ ಪಂಚರು ಹಾಕುತ್ತಾ ಜೀವನ ನಡೆಸುತ್ತಿದ್ದಾರೆ. ಗ್ರಾಮ ಪಂಚಾಯತಿ ವಾಟರ್ ಕೆಲಸವನ್ನು ಮಾಡುತ್ತಿದ್ದಕೆಚ್ವಪ್ಪ ಅವರಿಗೂ ಕೊರೊನಾ ಸಂಕಷ್ಟದಿಂದ ವೃತ್ತಿಗೂ ಕಂಟಕ ಎದುರಾಗಿ ಕೆಲಸವಿಲ್ಲದಂತಾಗಿತ್ತು. ಲಕ್ಷ್ಮಿ ಯವರು ಆಸಮಯದಲ್ಲಿ ಪತಿ ಕೆಚ್ಚಪ್ಪ ಅವರಿಗೆ ಧರ‍್ಯ ತುಂಬಿ, ಪಂಚ್ ರ ಹಾಕುವುದು ಪತಿಯಿಂದಲೇ ಕಲಿತುಸ್ವಾಭಿಮಾನದಿಂದ ಜೀವನ ನಡೆಸುತ್ತಿದ್ದು, ಕುಟುಂಬ ನರ‍್ವಹಣೆಗೆ ಸಾಥ್ ನೀಡುತ್ತಿದ್ದಾರೆ.ಇನ್ನು ವಿಶೇಷ ಅಂದರೆ ಲಕ್ಷ್ಮಿ ಪುರುಷರಂತೆಯೇ ಕೈ ಯಲ್ಲಿ ಕಬ್ಬಿಣ ಹಿಡಿದು ನಿತ್ಯ ಪಂಚರ ಹಾಕುತ್ತಾರೆ ಈ ಕುರಿತು ಅವರನ್ನು ಕೇಳಿದ್ರೆ ಮಹಿಳೆಯರು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದನ್ನು ಈಗಿನ ಮಹಿಳೆಯರು ರ‍್ಥ ಮಾಡಿಕೊಳ್ಳಬೇಕು ನಾನು ಪುರುಷರಂತೆ ಗಾಡಿಗಳಿಗೆಪಂಚರ್ ಹಾಕುವೆ ನಾನು ಶಾಲೆ ಕಲಿತ ಇಲ್ಲ ನಮ್ಮ ಯಾಜಮಾನಕೆಂಚಪ್ಪ ಪಂಚರ್ ಹಾಕುವ ಕೆಲಸಮಾಡುತ್ತಿದ್ದರು.ಅದನ್ನು ನೋಡಿ ನಾನು ಕಲಿತಿನಿ ಎಂದರು.ಒಟ್ಟಿನಲ್ಲಿ ಬಡತನ ಮತ್ತು ಇಡೀ ಕುಟುಂಬದ ಹೊಣೆಗಾರಿಕೆಯನ್ನು ಮಹಿಳೆಯೂ ಸಹ ಸರ‍್ಥವಾಗಿ ಎದುರಿಸಬಲ್ಲಳು ಎಂಬುದಕ್ಕೆ ಲಕ್ಷ್ಮಿ ಯವರು ಉದಾಹರಣೆಯಾಗಿದ್ದಾರೆ.ಹಳ್ಳಿ ಗಳಲ್ಲಿ ಕೆಲಸ ಇಲ್ಲ ಎಂದು ದುಡಿಯಲು ಬೆಂಗಳೂರು ನಂತಹಾ ನಗರಕ್ಕೆ ದುಡಿಯಲು ಹೋಗುವ ಜನರು ಮಟ್ಟುರು ಗ್ರಾಮದ ಲಕ್ಷ್ಮಿ ಎಂಬ ದಿಟ್ಟ ಮಹಿಳೆ ಕೆಲಸ ನೆನಪಿಗೆ ಬಂದರೆ ಸಾಕು ಎಂದು ಬುದ್ಧಿಜೀವಿಗಳು ಮಾತು ಆಗಿದೆ.

Related Articles

Leave a Reply

Your email address will not be published. Required fields are marked *

Back to top button