ಕಡಿಮೆ ಬೆಲೆಗೆ ಹೆಚ್ಚಿನ ಮೊತ್ತದ ಸೌದಿ ಕರೆನ್ಸಿ : ಖದೀಮರ ಹೆಡೆ ಮುರಿ ಕಟ್ಟಿದ ಮೈಸೂರಿನ ವಿಜಯ ನಗರ ಠಾಣೆಯ ಪೊಲೀಸರು
ಮೈಸೂರು :ಲಷ್ಕರ್ ಮೊಹಲ್ಲ ಅಶೋಕ ರಸ್ತೆಯ ನಿವಾಸಿ ಜಾಕೀರ್ ಹುಸೇನ್ ಎಂಬವರಿಗೆ ಒಬ್ಬ ಅಪರಿಚಿತ ಖದೀಮ ಕಡಿಮೆ ಬೆಲೆಗೆ ಹೆಚ್ಚಿನ ಮೊತ್ತದ ಸೌದಿ ಕರೆನ್ಸಿಯನ್ನು ನೀಡುವುದಾಗಿ ನಂಬಿಸಿದ್ದು, ಈತನ ಮಾತಿಗೆ ಮರುಳಾದ ಜಾಕೀರ್ ಹುಸೇನ್ ಅವರು ದಿನಾಂಕ 18/10/2022ರಂದು ಮೈಸೂರಿನ ವಿಜಯನಗರ ಪೊಲೀಸ್ ಠಾಣ ವ್ಯಾಪ್ತಿಯ ಹಿನಕಲ್ ಆಶ್ರಮ ರಸ್ತೆಗೆ ಬಂದು 185,000/-ರೂ ಹಣವನ್ನು ಆ ಖದೀಮನಿಗೆ ನೀಡಿದ್ದು, ಆತನು ಒಂದು ಟವಲಿನಲ್ಲಿ ಸುತ್ತಿಟ್ಟ ಒಂದು ಬಂಡಲನ್ನು ಬಟ್ಟೆ ಬ್ಯಾಗಿಗೆ ಹಾಕಿ ಅದರಲ್ಲಿ ಒಂದು ಸೌದಿ ಕರೆನ್ಸಿಯನ್ನು ಹಾಕಿ, ಇದರಲ್ಲಿ ಸೌದಿ ಕರೆನ್ಸಿ ಇದೆ ಎಂದು ನಂಬಿಸಿ ಪರಾರಿಯಾಗಿರುತ್ತಾನೆ.
ನಂತರ ಜಾಕೀರ್ ಹುಸೇನ್ ಅವರು ವಿಜಯನಗರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದು, ಈ ಬಗ್ಗೆ ಠಾಣೆಯಲ್ಲಿ ಮೊ. ಸಂ . 166/2022 ಕಲಂ 420, 406 ಸಹಿತ 34 ಐ ಪಿ ಸಿ ರೀತ್ಯ ಕೇಸು ದಾಖಲಿಸಿದ್ದಾರೆ . ಇದಾದ ಮರು ದಿನ ಅಂದರೆ 19/10/2022 ರಂದು ಅದೇ ಖದೀಮರ ತಂಡವು ಅಸ್ಗರ್ ಪಾಷಾ ಎಂಬವರಿಗೂ ಇದೆ ರೀತಿ ಸೌದಿ ಕರೆನ್ಸಿ ಕೊಡವುದಾಗಿ ಹೂಟಗಳ್ಳಿಗೆ ಕರೆಸಿ 1 ಲಕ್ಷ ಪಡೆದು ಪೇಪರ್ ಬಂಡಲನ್ನು ನೀಡಿ ವಂಚಿಸಿರುತ್ತಾರೆ. ಈ ಬಗ್ಗೆಯೂ ಸಹ ವಿಜಯನಗರ ಪೊಲೀಸ್ ಠಾಣೆಯಲ್ಲಿ ಮೊ. ಸಂ. 169/2022 ಕಲಂ 420 ಸಹಿತ 43ಐಪಿಸಿ ರೀತ್ಯ ಪ್ರಕರಣ ದಾಖಲಾಗಿರುತ್ತದೆ .
ನಂತರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ ರವಿಶಂಕರ ಅವರು ಪಿಎಸ್ಐ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ಆರೋಪಿ ಪತ್ತೆಗೆ ಬಲೇ ಬೀಸಿದ್ದರು, ಪಿಎಸ್ಐ ಮತ್ತು ಸಿಬ್ಬಂದಿಗಳು ಚಾಣಾಕ್ಷತನದಿಂದ ದಿನಾಂಕ 29/10/2022ರಂದು ಬೆಳಗ್ಗೆ ಹಿನಕಲ್ ಫ್ಲೈ ಓವರ್ ಬಳಿ ಬೇರೆ ಯಾರಿಗೋ ವಂಚನೆ ಮಾಡಲು ಹೊಂಚು ಹಾಕಿ ಕುಳಿತಿದ್ದರು. ಈ ಖದೀಮರಿಗೆ ಪೊಲೀಸ್ ಎಂದು ತಿಳಿದ ಕೂಡಲೇ ಅಲ್ಲಿಂದ ಪರಾರಿಯಗಳು ಯತ್ನಿಸಿದರು ಪೋಲೀಸರ ಚಾನಕ್ಷತಣದಿಂದ ಸಿನಿಮೀಯ ರೀತಿಯಲ್ಲಿ ಖದೀಮರನ್ನು ಬೆನ್ನಟ್ಟಿ ಹಿಡಿದು ವಿಚಾರ ಮಡಿದಾಗ ಜಾಕೀರ್ ಹುಸೇನ್ ಮತ್ತು ಅಸ್ಗರ್ ಇವರಿಗೆ ವಂಚನೆ ಮಾಡಿದ ಎರಡು ಪ್ರಕರಣದಲ್ಲಿ ಭಾಗಿಯಾಗಿರುದಾಗಿ ಒಪ್ಪಿಕೊಂಡಿರುತ್ತಾರೆ. ಇವರುಗಳಿಂದ ಸೌದಿ ಕರೆನ್ಸಿ ಮತ್ತು ನಗದು ಹಣವನ್ನು ಪೊಲೀಸರು ಪಡೆದಿರುತ್ತಾರೆ.
ಈ ಖದೀಮರಿಗೆ ವಯಸ್ಸಾಗಿರುವ ಮಧ್ಯಮ ವರ್ಗದ ಜನರೇ ಟಾರ್ಗೆಟ್ ಆಗಿದ್ದು, ಅವರಿಗೆ ಕಡಿಮೆ ಬೆಲೆಗೆ ಸೌದಿ ಕರೆನ್ಸಿ ಕೊಡವುದಾಗಿ ನಂಬಿಸಿ, ಮೊದಲಿಗೆ ಒಂದು ಅಸಲಿ ನೋಟನ್ನು ಅವರಿಗೆ ತೋರಿಸಿರುತ್ತಾರೆ. ಸಾರ್ವಜನಿಕರು ಇವರ ಮಾತಿಗೆ ಮರುಳಾಗಿ ಹೆಚ್ಚಿನ ಹಣದ ಆಸೆಗೆ ಅವರು ಹೇಳಿದ ಸ್ಥಳಕ್ಕೆ ಹೋಗಿ ಅವರಿಗೆ ಹಣ ನೀಡುತಿದ್ದಂತೆ ಈ ಖದೀಮರು ಪೇಪರ್ ಮಡಚಿರುವ ಬಂಡಲನ್ನು ನೀಡಿ ಆ ಸ್ಥಳದಿಂದ ಪರಾರಿಯಾಗುತ್ತಾರೆ. ಆದ್ದರಿಂದ ಇನ್ನು ಮುಂದೆ ಸಾರ್ವಜನಿಕರು ಆಸೆಗೆ ಈ ರೀತಿ ವಂಚಕರ ಮಾತಿಗೆ ಮರುಳಾಗದೆ, ಈ ರೀತಿ ಅಸೆ ತೋರಿಸುವವರು ಬಂದಲ್ಲಿ ಕೂಡಲೇ ಪೊಲೀಸ್ ಕಂಟ್ರೋಲ್ ರೂಂ ಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ವಿಜಯಗರದ ಠಾಣೆಯ ಪೊಲೀಸರು ವಿನಂತಿ ಮಾಡಿಕೊಂಡಿದ್ದಾರೆ .
ಈ ಕಾರ್ಯಚರಣೆಯನ್ನು ಶ್ರೀ ಡಾ. ಚಂದ್ರ ಗುಪ್ತ, ಐಪಿಎಸ್ ಪೊಲೀಸ್ ಆಯುಕ್ತರು, ಮೈಸೂರ್ ನಗರ ಶ್ರೀ ಪ್ರದೀಪ್ ಗುಂಟಿ, ಐಪಿಎಸ್ ಉಪ ಪೊಲೀಸ್ ಆಯುಕ್ತರು, ಕಾ &ಸು ವಿಭಾಗ, ಮೈಸೂರು ನಗರ ಮತ್ತು ಶ್ರೀಮತಿ ಗೀತಾ ಪ್ರಸನ್ನ, ಐಪಿಎಸ್ ಉಪ ಪೊಲೀಸ್ ಆಯುಕ್ತರು, ಅಪರಾಧ ವಿಭಾಗ, ಮೈಸೂರ್ ನಗರ ರವರ ಮಾರ್ಗದರ್ಶನದಲ್ಲಿ ಶ್ರೀ ಶಿವ ಶಂಕರ್, ಸಹಾಯಕ ಪೊಲೀಸ್ ಆಯುಕ್ತರು, ನರಸಿಂಹರಾಜ ಉಪ ವಿಭಾಗ, ಮೈಸೂರು ನಗರ ನೇತೃತ್ವದಲ್ಲಿ ವಿಜಯ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀರವಿಶಂಕರ, ಸಾರಥ್ಯದಲ್ಲಿ ವಿಜಯನಗರ ಪಿಎಸ್ಐ ಶ್ರೀ ನಾರಾಯಣ, ಪಿಎಸ್ಐ ಶ್ರೀಮತಿ ಇಂದ್ರಮ್ಮ ಮತ್ತು ಸಿಬ್ಬಂದಿಗಳಾದ ಶಂಕರ, ಲೋಕೇಶ್, ಪ್ರದೀಪ, ಸಂಜಯ್ ಪವಾರ, ಅಣ್ಣಪ್ಪ ದೇವಾಡಿಗ, ಶ್ರೀನಿವಾಸಮೂರ್ತಿ, ಪ್ರಭಾಕರ್, ಕಾಮಣ್ಣ ರವರು ಪತ್ತೆ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ