ವಿಷ ಪ್ರಸಾದ ಸಂತ್ರಸ್ಥರ ಸಮಸ್ಯೆಗೆ ಸಮಗ್ರ ಪರಿಹಾರಕ್ಕೆ ಶಾಸಕ ಮಂಜುನಾಥ್ ಪಣ…!
ಹನೂರು :- ತಾಲೂಕಿನ ಕಿಚ್ಚುಗುತಿ ಮಾರಮ್ಮ ವಿಷ ಪ್ರಸಾದ ಸಂತ್ರಸ್ಥರಿಗೆ ಯಾವುದೇ ಕಾರಣಕ್ಕೂ ತೊಂದರೆ ಆಗದಂತೆ ಅವರ ಭವಿಷ್ಯ ರೂಪಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಜರೂರಾಗಿ ನಿರ್ವಹಿಸಬೇಕೆಂದು ಶಾಸಕ ಎಂ ಆರ್ ಮಂಜುನಾಥ್ ರವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರುಹನೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಕಿಚ್ಚುಗುತಿ ಮಾರಮ್ಮ ವಿಷ ಪ್ರಸಾದ ಸಂತ್ರಸ್ಥರ ಯೋಗ ಕ್ಷೇಮ ಕುರಿತು ಜಿಲ್ಲಾಡಳಿತ ಭವನದಲ್ಲಿ ಸಭೆ ನಡೆಯಿತುಶಾಸಕರು ಮಾತನಾಡಿ ವಿಷ ಪ್ರಸಾದ ಸಂತ್ರಸ್ಥರಿಗೆ ಆರೋಗ್ಯ ಸಮಸ್ಯೆ ಕಾಡುತ್ತಿದೆ ಹಾಗೂ ಅವರಿಗೆ ಸೂಕ್ತ ಪರಿಹಾರ ನೀಡಿಲ್ಲ ಅವರಿಗೆ ಯಾವುದೇ ಸಮಸ್ಯೆ ಹೋಗಬಾರದು ಅವರು ಜೀವನ ರೂಪಿಸಲು ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು ನಂತರ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾನಾಗ್ ಇವರ ಆರೋಗ್ಯ ಬಗೆ ಪ್ರತಿಯೊಬ್ಬರಿಗೂ ವೈಯಕ್ತಿಕ ಪೈಲ್ ಓಪನ್ ಮಾಡುತ್ತೇವೆ ಪ್ರತಿ ಯೊಬ್ಬರ ಆರೋಗ್ಯದ ಬಗ್ಗೆ ನಿಗಾ ವಹಿಸಲು ಆರೋಗ್ಯ ಇಲಾಖೆಗೆ ಸೂಚಿಸುತ್ತೇನೆ ಅದರಲ್ಲಿ ಅವರಿಗೆ ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ ನ್ಯೂಟ್ರಿಷನ್ ಕಿಟ್ ಗಳನ್ನು ನೀಡುತ್ತೇವೆ. ಅವರ ಆಹಾರ ಸಮತೋಲನವನ್ನು ಕಾಪಾಡಿಕೊಳ್ಳಬೇಕು ಪ್ರತಿ ಎರಡು ತಿಂಗಳಿಗೊಮ್ಮೆ ಮೆಡಿಕಲ್ ಕಾಲೇಜುನಿಂದ ವಾಹನವನ್ನು ಕಳುಹಿಸಿ ಅವರ ಪೂರ್ಣ ಆರೋಗ್ಯ ತಪಾಸಣೆ ಮಾಡಿಸುವುದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಜವಾಬ್ದಾರಿ ವಹಿಸುತ್ತೇವೆ. ನಮ್ಮ ಅಧಿಕಾಗಳ ತಂಡ ಪ್ರತಿ ಯೊಬ್ಬರ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳ ಬಗ್ಗೆ ಸೂಕ್ತ ವರದಿಯನ್ನು ಪಡೆದು ಶಾಸಕರ ಬಳಿ ಸೂಕ್ತ ಪರಿಹಾರಕ್ಕೆ ಚರ್ಚಿಸುತ್ತೇವೆ ಅವರ ಪುನರ್ವಸತಿಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇವೆ ಈ ಬಗ್ಗೆ ಸುಳ್ಳಾಡಿ ಕಿಚ್ಚುಗುತ್ತಿ ಮಾರಮ್ಮ ವಿಷ ಪ್ರಸಾದ್ ಸಂತ್ರಸ್ಥರ ಯೋಗ ಕ್ಷೇಮಕ್ಕಾಗಿ ಮಾನ್ಯ ಶಾಸಕರು ಮತ್ತು ಜಿಲ್ಲಾ ಅಧಿಕಾರಿಗಳ ತಂಡ ಪ್ರತಿ ಮೂರು ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನಾ ಸಭೆ ನಡೆಸುವುದು.ಈ ಸಭೆಯಲ್ಲಿ ವಿಷ ಪ್ರಸಾದ ಸಂತ್ರಸ್ಥರ ಪ್ರಮುಖರು ಭಾಗವಹಿಸುವುದು.ನಂತರ ಸಂತ್ರಸ್ಥರು ಮಾತನಾಡಿ ಕೂಲಿ ಕೆಲಸ ಮಾಡಲು ಅಂಗಾಂಗ ವೈಪಾಲ್ಯಗಳು ಕಾಡುತ್ತಿವೆ ಬಿಸಿಲಿನಲ್ಲಿ ಕೆಲಸ ಮಾಡಲು ಆಗುತ್ತಿಲ್ಲ ನಮಗೆ ನೀಡಿದ ಪರಿಹಾರ ಆಸ್ಪತ್ರೆಗಳಿಗೆ ಖರ್ಚು ಬಳಸಿಕೊಂಡಿದ್ದೇವೆ ನಮ್ಮ ಮುಂದಿನ ಭವಿಷ್ಯ ರೂಪಿಸಲು ಪರಿತಪ್ಪಿಸುವಂತೆ ಆಗಿದೆ, ಆದ್ದರಿಂದ ಸರ್ಕಾರ ನಮಗೆ ಮಾಸಿಕ ಪರಿಹಾರ ನೀಡಬೇಕು.ಸರ್ಕಾರಿ ಸಂತ್ರಸ್ಥರಿಗೆ ಕೆಲವರಿಗೆ ಭೂ ನೀಡುತ್ತೇವೆ ಎಂದು ತಿಳಿಸಿದರು ಅದರಲ್ಲಿ ಕೆಲವರಿಗೆ ಭೂಮಿ ನಿಡಿಲ್ಲ ಅದರ ಅನುಸಾರವಾಗಿ ಅದರ ಮೌಲ್ಯದ ಹಣವನ್ನು ನೀಡಿದರೆ ನಮ್ಮ ಭವಿಷ್ಯಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಅಪಾರ ಜಿಲ್ಲಾಧಿಕಾರಿ ಗಿತಾ ಹುಡೇದ್, ಜಿಲ್ಲಾ ಸಮಾಜ ಕಲ್ಯಾಣಧಿಕಾರಿ ಮಲ್ಲಿಕಾರ್ಜುನ.ಜಿಲ್ಲಾ ವೈದ್ಯಾಧಿಕಾರಿ ಚಿದಂಬರಂ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್.ಸಂತ್ರಸ್ಥರು ಪರ ಹೋರಾಟಗಾರರು ಮಣಿ. ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಮಣಿನಾಯಕ. ಗ್ರಾಮ ಪಂಚಾಯಿತಿ ಸದಸ್ಯ ಬಾಲಯ್ಯ ಬಿದರಹಳ್ಳಿ ಮುಖಂಡ ಷಣ್ಮುಗ. ಸಂತಸ್ಥರು ಭಾಗವಹಿಸಿದರು