ಅರುಣಾಚಲ ಪ್ರದೇಶ: ಸೇನಾ ಹೆಲಿಕಾಪ್ಟರ್ ಪತನ.
ಗುವಾಹಟಿ: ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯಲ್ಲಿ ಇಂದು ಶುಕ್ರವಾರ ಐವರನ್ನು ಹೊತ್ತ ಸೇನಾ ಹೆಲಿಕಾಪ್ಟರ್ ಪತನಗೊಂಡಿದೆ. ಪತನಗೊಂಡ ಸ್ಥಳದಿಂದ ಎರಡು ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ. ವರದಿಗಳ ಪ್ರಕಾರ, ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ALH) ಮಿಗ್ಗಿಂಗ್ ಗ್ರಾಮದ ಬಳಿ ಪತನಗೊಂಡಿದೆ. ಅಪಘಾತದ ಸ್ಥಳವು ಯಾವುದೇ ರಸ್ತೆಯಿಂದ ಸಂಪರ್ಕ ಹೊಂದಿಲ್ಲ. ಘಟನೆ ನಡೆದ ಸ್ಥಳಕ್ಕೆ ಮೂರು ರಕ್ಷಣಾ ತಂಡಗಳನ್ನು ಕಳುಹಿಸಲಾಗಿದೆ, ಎಂದು ಸೇನಾ ಮೂಲಗಳು ತಿಳಿಸಿವೆ.
ಸೇನಾ ಸಿಬ್ಬಂದಿಯನ್ನು ಹೊತ್ತ ಹೆಲಿಕಾಪ್ಟರ್ ಇಂದು ಬೆಳಗ್ಗೆ ಲಿಕಾಬಾಲಿಯಿಂದ ಟೇಕಾಫ್ ಆದ ನಂತರ ನಿಯಮಿತ ವಿಹಾರ ನಡೆಸುತ್ತಿತ್ತು. ಬೆಳಗ್ಗೆ 10.43ಕ್ಕೆ ಅಪಘಾತ ಸಂಭವಿಸಿದೆ
ಗ್ರಾಮಕ್ಕೆ ತೆರಳಲು ಯಾವುದೇ ಮೋಟಾರು ರಸ್ತೆಗಳಿಲ್ಲದ ಕಾರಣ, ನೇತಾಡುವ ಸೇತುವೆಯನ್ನು ಹೊರತುಪಡಿಸಿ, ಸೇನೆ ಮತ್ತು ವಾಯುಪಡೆಯ ಎರಡೂ ಜಂಟಿ ತಂಡಗಳು ಒಂದು ಎಂಐ -17 ಮತ್ತು ಎರಡು ಧ್ರುವ್ ಹೆಲಿಕಾಪ್ಟರ್ಗಳೊಂದಿಗೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಸ್ಥಳೀಯ ಗ್ರಾಮಸ್ಥರೂ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.