ಪಿವಿ ವಿಶೇಷರಾಜ್ಯ

ಮಂಗಳೂರಿನಲ್ಲಿ ನಿಷೇದಿತ ಪಿಎಫ್ಐ ಮುಖಂಡರ ಮನೆ ಮೇಲೆ ಮತ್ತೆ ಪೊಲೀಸ್ ದಾಳಿ , ಏಳು ಮಂದಿ ವಶಕ್ಕೆ

ಮಂಗಳೂರು, ಅ.13: ಮಂಗಳೂರಿನಲ್ಲಿ PFI ಮತ್ತು SDPI ಮುಖಂಡರ ಮನೆಗಳಿಗೆ ಪೊಲೀಸರು ಬೆಳ್ಳಂಬೆಳಗ್ಗೆ ಮತ್ತೆ ದಾಳಿ ನಡೆಸಿದ್ದಾರೆ. ಪಣಂಬೂರು, ಉಳ್ಳಾಲ, ಬಜಪೆ ಠಾಣೆ ವ್ಯಾಪ್ತಿಯ 9 ಕಡೆ ಪೊಲೀಸ್ ದಾಳಿ ನಡೆದಿದ್ದು ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.ಇಂದು ಬೆಳಗ್ಗೆ ಪೊಲೀಸರು ಪಿಎಫ್ ಐ ಹಾಗೂ ಎಸ್ ಡಿಪಿಐ ಮುಖಂಡರ ಮೇಲೆ ಕಮಿಷನರ್ ಎನ್ ಶಶಿಕುಮಾರ್ ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡಿದ್ದು, ಐವರು ಪಿಎಫ್ ಐ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ. ಎನ್.ಶಶಿಕುಮಾರ್ ನೇತೃತ್ವದಲ್ಲಿ ಪಣಂಬೂರು, ಸುರತ್ಕಲ್ ಹಾಗೂ ಮಂಗಳೂರು ಗ್ರಾಮಾಂತರ ಉಳ್ಳಾಲ ಸೇರಿ ಏಳೆಂಟು ಕಡೆ ಪೊಲೀಸರು ದಾಳಿ ಮಾಡಿದ್ದಾರೆ.

ಸೆ.27ರಂದು ದಾಳಿ ನಡೆಸಿದ್ದ ವೇಳೆ 26 ಮಂದಿಯನ್ನು ವಶಕ್ಕೆ ಪಡೆಯಲು ಪೊಲೀಸರು ಲಿಸ್ಟ್ ಮಾಡಿಕೊಂಡಿದ್ದರು ಎನ್ನಲಾಗಿದೆ.‌ ಆ ಪೈಕಿ 12 ಮಂದಿ ತಪ್ಪಿಸಿಕೊಂಡಿದ್ದು ಅವರಿಗಾಗಿ ಶೋಧ ನಡೆಸಲಾಗಿದೆ. ಪಣಂಬೂರು ಠಾಣೆ ವ್ಯಾಪ್ತಿಯಲ್ಲಿ ಮೊಹಮ್ಮದ್ ರಫೀಕ್ ಯಾನೆ ಶಾರ್ಟ್ ರಫೀಕ್ ಜೋಕಟ್ಟೆ, ಮೊಹಮ್ಮದ್ ಬಿಲಾಲ್, ಕಸಬಾ ಬೆಂಗ್ರೆ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ‌ಉಳ್ಳಾಲ ಠಾಣೆ ಪೊಲೀಸರು ಮೊಹಮ್ಮದ್ ರಫೀಕ್, ಅಬ್ಬಾಸ್ ಕಿನ್ಯಾ ಎಂಬವರನ್ನು ವಶಕ್ಕೆ ಪಡೆದಿದ್ದಾರೆ.‌ ಕಂಕನಾಡಿ ಗ್ರಾಮಾಂತರ ಪೊಲೀಸರು ಅಕ್ಬರ್ ಸಿದ್ದಿಕ್ ನನ್ನು ಅಡ್ಯಾರಿನಿಂದ ವಶಕ್ಕೆ ಪಡೆದ ಮಾಹಿತಿಯಿದೆ.

Related Articles

Leave a Reply

Your email address will not be published. Required fields are marked *

Back to top button