ಪಿವಿ ವಿಶೇಷ

ತಲಾ 1 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಬಿಬಿಎಂಪಿ ಸಿಬ್ಬಂದಿ, ಬೆಸ್ಕಾಂ ಅಧಿಕಾರಿ ಎಸಿಬಿ ಬಲೆಗೆ

ಬೆಂಗಳೂರು: ಲಂಚ ಸ್ವೀಕರಿಸುತ್ತಿದ್ದ ವೇಳೆ ಬಿಬಿಎಂಪಿ ಸಿಬ್ಬಂದಿ ಬಲೆಗೆ ಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ. 1.10 ಲಕ್ಷ ಲಂಚ ಸ್ವೀಕರಿಸುವ ವೇಳೆ ಜೀವನ್ ಭೀಮಾನಗರದ ಕಚೇರಿ ಸಿಬ್ಬಂದಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ ಕಚೇರಿ ಸಿಬ್ಬಂದಿ ಸಿಕ್ಕಿಬಿದ್ದಿದ್ದಾರೆ. ‘ಎ’ ಖಾತೆಗಾಗಿ ಆನ್​ಲೈನ್​ನಲ್ಲಿ ದೂರುದಾರ ಅರ್ಜಿ ಸಲ್ಲಿಸಿದ್ದರು. 30,000 ರೂ. ಖಾತಾ ಶುಲ್ಕ ಸೇರಿ 1.40 ಲಕ್ಷಕ್ಕೆ ಬೇಡಿಕೆ ಇಡಲಾಗಿತ್ತು. ಬಳಿಕ, ಲಂಚ ಸ್ವೀಕರಿಸುವ ವೇಳೆ ಬಿಬಿಎಂಪಿ ಸಹಾಯಕ ಕಂದಾಯ ಕಚೇರಿ ಎಆರ್​ಒ ಮೂರ್ತಿ, ರೆವಿನ್ಯೂ ಇನ್ಸ್​ಪೆಕ್ಟರ್​ ಮೊಹಮ್ಮದ್ ಇದ್ರೀಶ್​ ಎಸಿಬಿ ಬಲೆಗೆ ಬಿದ್ದಿದ್ದಾರೆ.

1 ಲಕ್ಷ 10 ಸಾವಿರ ರೂ. ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ಮಧ್ಯವರ್ತಿ ಶ್ರೀನಿವಾಸನನ್ನು ದಸ್ತಗಿರಿ ಮಾಡಿ ಲಂಚದ ಹಣ ಜಪ್ತಿ ಮಾಡಲಾಗಿದೆ. ಬಿಬಿಎಂಪಿ 13ನೇ ವಾರ್ಡ್​ ಬಿಲ್ ಕಲೆಕ್ಟರ್ ಆನಂದ್​ ಪರಾರಿ ಆಗಿದ್ದಾರೆ ಎಂದು ತಿಳಿದುಬಂದಿದೆ.

1 ಲಕ್ಷ ಲಂಚಕ್ಕೆ ಬೇಡಿಕೆ: ಬೆಸ್ಕಾಂ ವಿಜಿಲೆನ್ಸ್​ ಎಇಇ ಸೇರಿದಂತೆ ಮೂವರು ಎಸಿಬಿ ಬಲೆಗೆ

ಬೆಸ್ಕಾಂ ವಿಜಿಲೆನ್ಸ್​ ಎಇಇ ಸೇರಿದಂತೆ ಮೂವರು ಎಸಿಬಿ ಬಲೆಗೆ ಬಿದ್ದಿರುವ ಘಟನೆ ನಡೆದಿದೆ. ಬೆಂಗಳೂರಿನ ಮಲ್ಲೇಶ್ವರಂನ ಬೆಸ್ಕಾಂ ಕಚೇರಿಯಲ್ಲಿ ಎಸಿಬಿ ಬಲೆಗೆ ಬಿದ್ದಿದ್ದಾರೆ. 45 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿಗೆ ಸಿಕ್ಕಿಬಿದ್ದಿದ್ದಾರೆ. ಬೆಸ್ಕಾಂ ವಿಜಿಲೆನ್ಸ್ ಎಇಇ ನಾಗೇಶ್, ಹೆಚ್​ಸಿ ಜಗದೀಶ​ ಬಂಧನ ಮಾಡಲಾಗಿದೆ. ಕಾನೂನು ಬಾಹಿರ ವಿದ್ಯುತ್ ಸಂಪರ್ಕ ತೆರವುಗೊಳಿಸುವ ಬೆದರಿಕೆ ಇಟ್ಟು 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎಇಇ ನಾಗೇಶ್​ ಬಂಧಿಸಲಾಗಿದೆ. ಈ ಮೊದಲು 50,000 ರೂ. ಲಂಚ ಪಡೆದಿದ್ದ ಎಇಇ ನಾಗೇಶ್​, ಇಂದು 45 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ಎಇಇ ನಾಗೇಶ್, ಹೆಡ್​ ಕಾನ್ಸ್​ಟೇಬಲ್ ರಾಜೇಶ್​ ಬಂಧನ ಮಾಡಲಾಗಿದೆ. ಆರಿಫ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಸಿಎಂ ಸರ್ಕಾರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಆರೋಪ; ಕ್ರಿಮಿನಲ್ ವಿಚಾರಣೆಗೆ ಅನುಮತಿ‌ ನೀಡುವಂತೆ ಮನವಿ

ಸಿಎಂ ಸರ್ಕಾರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಕ್ರಿಮಿನಲ್ ವಿಚಾರಣೆಗೆ ಅನುಮತಿ‌ ನೀಡುವಂತೆ ಮನವಿ ಸಲ್ಲಿಕೆ ಮಾಡಲಾಗಿದೆ. ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ಕಂಚನಹಳ್ಳಿ ಮನವಿ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್, ಎಂಎಲ್‌ಸಿ ರವಿ, ಪೊಲೀಸ್ ಅಧಿಕಾರಿಗಳಿಬ್ಬರ ವಿರುದ್ಧ ಮನವಿ ಮಾಡಲಾಗಿದೆ.

ಲೋಕಸಭೆ, ವಿಧಾನಸಭೆ ಸ್ಪೀಕರ್‌ಗಳು, ಪರಿಷತ್ ಸಭಾಪತಿ, ಸಿಎಸ್‌, ಗೃಹ ಕಾರ್ಯದರ್ಶಿ, ಡಿಜಿ & ಐಜಿಪಿಗೆ ಮನವಿ ಪತ್ರ ಸಲ್ಲಿಕೆ ಮಾಡಲಾಗಿದೆ. ಐಪಿಸಿ ಸೆಕ್ಷನ್‌ 120(ಬಿ), 143, 353, 506ರಡಿ ವಿಚಾರಣೆ ನಡೆಸುವಂತೆ, ನ್ಯಾಯಾಲಯದಲ್ಲಿ ಕ್ರಿಮಿನಲ್ ವಿಚಾರಣೆಗೆ ಒಳಪಡಿಸಲು ಮನವಿ ಮಾಡಲಾಗಿದೆ. ಸಿಆರ್‌ಪಿಸಿ 197ರಡಿ ಅನುಮತಿ‌ ನೀಡುವಂತೆ ಮನವಿ ಪತ್ರ ಸಲ್ಲಿಸಲಾಗಿದೆ. ರಾಮನಗರದಲ್ಲಿ ಜ.3ರಂದು ನಡೆದ ಕಾರ್ಯಕ್ರಮದಲ್ಲಿ ಗದ್ದಲ ನಡೆದಿತ್ತು.

ಧಾರವಾಡ: ಕಳ್ಳತನ ಮಾಡಿದ್ದ ಐವರ ಬಂಧನ

ಕೇಶವನಗರದ ಮಹೇಂದ್ರಕರ ಎಂಬುವವರ ಮನೆಯಲ್ಲಿ ಕಳವು ಮಾಡಿದ್ದ ಐವರನ್ನು ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. 562 ಗ್ರಾಂ ಚಿನ್ನ, 20 ಸಾವಿರ ನಗದು, 4.5 ಲಕ್ಷ ರೂ. ಮೌಲ್ಯದ 2 ಕಾರು ವಶಕ್ಕೆ ಪಡೆಯಲಾಗಿದೆ. ಕಳವು ಪ್ರಕರಣ ಭೇದಿಸಿದ ವಿದ್ಯಾಗಿರಿ ಠಾಣೆ ಪೊಲೀಸರಿಗೆ 25 ಸಾವಿರ ರೂ. ಬಹುಮಾನ ಘೋಷಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button