ಮಕ್ಕಳೊಂದಿಗೆ ಸಾಮಾಜಿಕ ಕಾರ್ಯಕ್ರಮ ಒಂದರಲ್ಲಿ ಭಾಗಿ | ಅವರ ಕೆಲಸವನ್ನು ಶ್ಲಾಘಿಸಿದ : ಮಹೇಶ್ ವಿ, ಆರಕ್ಷಕ ಉಪ ನೀರಿಕ್ಷಕರು
ಮಹೇಶ್ ರವರು ಮಾತನಾಡಿ ಕ್ಲಬ್ ನ ವತಿಯಿಂದ ಈ ಒಂದು ಸಾಮಾಜಿಕ ಕಾರ್ಯಕ್ರಮ ಮಾಡುತ್ತಿರೋದಕ್ಕೆ ಸಂತಸ ವ್ಯಕ್ತಪಡಿಸಿದರು. ಹುಟ್ಟುವಾಗ ಏನನ್ನು ತಕೊಂಡು ಬರ್ಲಿಲ್ಲ..ಹೋಗುವಾಗಲೂ ಎನ್ನನ್ನು ತಕೊಂಡು ಹೋಗೋದಿಲ್ಲ…ಹಾಗಾಗಿ ಇರುವ ನಾಲ್ಕು ದಿನ ಅಹಂ ನ್ನು ಬಿಟ್ಟು ಸಮಾಜದಲ್ಲಿ ನೊಂದವರಿಗೆ ತಮ್ಮ ಕೈಯಲ್ಲಿ ಆಗುವಷ್ಟು ಸಹಾಯ ಮಾಡಿದ್ರೆ ನಮಗೂ ನಮ್ಮ ಮಕ್ಕಳಿಗೂ ಎಲ್ಲೊ ಒಂದು ಕಡೆ ಒಳ್ಳೇದು ಆಗುತ್ತೆ ಅಂತ ಅಭಿಪ್ರಾಯ ಪಟ್ಟರು…ಕ್ಯಾನ್ಸರ್ ಅಂತ ಗೊತ್ತಾದ್ರೆ ಬದುಕೇ ಬೇಡ ಅಂತ ಖಿನ್ನತೆ ಗೆ ಹೋಗಿ ಬಿಡುತ್ತಾರೆ…ಹೇಗೋ ಉಷಾರು ಆಗಿ ಮತ್ತೆ ಮರುಜೀವದ ಜೊತೆಗೆ ತಲೆ ಕಿರೀಟವನ್ನು ಕೊಟ್ಟಾಗ ಮೊದಲಿನ ಉಷತುಕತೆ ಬರ್ತೆ. ಹಾಗಾಗಿ ಈ ಕ್ಲಬ್ ನ ಈ ಕಾರ್ಯಕ್ರಮ ಉತ್ತಮವಾಗಿದೆ.
ಮತ್ತೆ ಇಲಾಖೆಗೆ ಸಂಬಂಧ ಪಟ್ಟಂತೆ ನಾಲ್ಕು ಹಿತ ನುಡಿಗಳನ್ನು ತಿಳಿಸಿದರು..ನಾವುಗಳು ಡಿಜಿಟಲ್ ಯುಗದಲ್ಲಿ ಇದ್ದಿವಿ…ಸಾರ್ವಜನಿಕರಿಗೆ ಯುವುದೇ ತೊಂದ್ರೆ ಆಗಿ ಪೊಲೀಸ್ ಸಹಾಯ ಬೇಕು ಅಂದ್ರೆ ಒಂದು ದೇಶ ಒಂದು ತುರ್ತು ಸಂಖ್ಯೆ ಯಾದ ಡಯಲ್ 112 ಕ್ಕೆ 24/7 ಕರೆ ಮಾಡಿದ್ರೆ ಪೊಲೀಸ್ ರು ನೀವು ಇರುವ ಜಾಗಕ್ಕೆ ಬರ್ತಾರೆ,
ಆನ್ಲೈನ್ ನಲ್ಲಿ ಆಗುತಿರುವ ಮೋಸದ ಬಗ್ಗೆ ತಿಳಿಸಿದರು. ಫೇಸ್ಬುಕ್ ಫೇಕ್ ಅಕೌಂಟ್, ಬ್ಯಾಂಕ್ ಮ್ಯಾನೇಜರ್ ಹೆಸರು ಹೇಳಿ ಕರೆಗಳು, ಆನ್ಲೈನ್ ನಲ್ಲಿ ಜಾಬ್ ಹುಡುಕುವಾಗ ಮೋಸ ಗೆ ತಿಳಿಸಿದರು.
ಕೊನೆಯದಾಗಿ ಸಾರ್ವಜನಿಕರಿಗೆ ಆನ್ಲೈನ್ ನಲ್ಲಿ ಕಂಪ್ಲೇಂಟ್ ಮಾಡುವುದರ ಕುರಿತು KSP ಬಗ್ಗೆ ಹೇಳಿದ್ದರು…
ಮಹೇಶ್ ವಿ ಆರಕ್ಷಕ ಉಪ ನೀರಿಕ್ಷಕರು, ಮೈಸೂರು ಜಿಲ್ಲಾ ನಿಯಂತ್ರಣ ಕೊಠಡಿ
ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ಗೋಲ್ಡ್ ಮತ್ತು ಮೈಸೂರು ಬ್ಯೂಟಿಷಿಯನ್ ವೆಲ್ ಫೇರ್ ಅಸೋಸಿಯೇಷನ್ ವತಿಯಿಂದ ಕ್ಯಾನ್ಸರ್ ರೋಗಿಗಳಿಗೆ ಕೇಶದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮೈಸೂರಿನ ಖಾಸಗೀ ಹೋಟೆಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಎಸ್ ಐ ಮಹೇಶ್ ,ತನ್ವೀ ರಾವ್ ನಟಿ
,ಪಾಲಿಕೆ ಸದ ಸ್ಯೆ ಭಾಗ್ಯ ಮಾದೇಶ್, ಚಾಲನೆ ನೀಡಿದರು.
25 ಮಂದಿ ಕೇಶದಾನ ಮಾಡಿದರು.ಅದಲ್ಲದೇ ಮುಂಚಿತವಾಗಿಯೇ ಸುಮಾರು 75ಜನ ಒಟ್ಟು ನೂರು ಜನ ತಮ್ಮ ತಲೆ ಕೂದಲು ದಾನ ಮಾಡಿದ್ದಾರೆ.ಇಲ್ಲಿ ಶೇಖರಣೆಯಾದ ತಲೆ ಕೂದಲನ್ನು ವಿಗ್ ಮಾಡಿಸಿ ನಾವೇ ಸ್ವತಃ ಕ್ಯಾನ್ಸರ್ ರೋಗಿಗಳಿಗೆ ವಿಗ್ ದಾನ ಮಾಡಲಿದ್ದೇವೆ.ಇದೇ ಸಂದರ್ಭದಲ್ಲಿ ಕ್ಲಬ್ ವತಿಇಂದ ಅಧ್ಯಕ್ಷರ ತಂದೆ ತಾಯಿ ಕಡೆಇಂದ ಎರಡು ವೀಲ್ ಚೇರ್ ವಿತರಿಸಿದ್ದಾರೆ.
ಮೈಸೂರು ಬ್ಯೂಟಿಷಿಯನ್ ವೆಲ್ ಫೇರ್ ಅಸೋಸಿಯೇಷನ್
ಅದ್ಯಕ್ಷೆ ವೇದಾರೈ ,ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ಗೋಲ್ಡ್ ಅಧ್ಯಕ್ಷೆ ಪ್ರತಿಭಾ ,ಕಾರ್ಯದರ್ಶಿ ಪ್ರೇಮಾರವಿ ಸೇರಿದಂತೆ ಕ್ಲಬ್ ನ ಸದಸ್ಯರು ಭಾಗಿಯಾಗಿದ್ದರು.