ವನ್ಯಪ್ರಾಣಿ ಬೇಟೆ ವ್ಯಕ್ತಿಯೋರ್ವನ ಬಂಧನ
ಹನೂರು :-
ಮನೆಯೊಂದರಲ್ಲಿ ಅಕ್ರಮವಾಗಿ ಬೇಟೆಯಾಡಿ ಕಡವೆ ಮಾಂಸ ಸಂಗ್ರಹದ ಜಾಲಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ಜರುಗಿದೆ,
ಹನೂರು ತಾಲೂಕಿನ ಹೂಗ್ಯಂ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಲ್ಲಿಪಾಳ್ಯ ಗ್ರಾಮದ ಮನೆಯೊಂದರಲ್ಲಿ ಕಡವೆ ಮಾಂಸ ಮಾರಾಟ ಮಾಡಲು ಮುಂದಾಗಿದ್ದ.
ರಾಜು ಆಲಿಯಾಸ್ ಚಿನ್ನಪ್ಪಯ್ಯ ಬಂಧಿತ ಆರೋಪಿಯಾಗಿದ್ದಾನೆ,
ಘಟನೆ ವಿವರ : ಹನೂರು ತಾಲೂಕಿನ ಹೂಗ್ಯಂ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಲ್ಲಿಪಾಳ್ಯ ಗ್ರಾಮದ ವಾಸದ ಮನೆಯಲ್ಲಿ ವನ್ಯಪ್ರಾಣಿಯ ಕಡವೆ ಮಾಂಸ ಇರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಕಡವೆಯ ಚರ್ಮ, ಎರಡು ಕಾಲುಗಳು, ಎರಡು ಒಂಟಿ ನಳಿಕೆಯ ನಾಡ ಬಂದೂಕುಗಳು, ಮದ್ದು ಗುಂಡುಗಳು ಮತ್ತು ಚೂರಿ ಮಚ್ಚುಗಳನ್ನು ಶನಿವಾರ ರಾತ್ರಿ 10 ಗಂಟೆ ಸಮಯದಲ್ಲಿ ವಶಕ್ಕೆ ಪಡೆದು ಕೊಂಡಿದ್ದಾರೆ.
ಅರಣ್ಯಾಧಿಕಾರಿಗಳಾದ ಗೀರಿಶ್, ಅಮೀನ್ ಸಾಬ ಮಕಾಂದರ, ಮತ್ತು ಕಾಶಿಲಿಂಗ ನರೂಟೆ, ಗಸ್ತು ಅರಣ್ಯಪಾಲಕರು ಸಿಬ್ಬಂದಿಗಳು ಸೇರಿದಂತೆ ಇತರರು ಇದ್ದರು,
ವರದಿ :- ಶಾರುಕ್ ಖಾನ್ ಹನೂರು