ಚಿರತೆ ದಾಳಿಯಿಂದ ಚಿಕಿತ್ಸೆ ಪಡೆಯುತ್ತಿರುವ ಬಾಲಕಿ ಆರೋಗ್ಯ ವಿಚಾರಿಸಿದ ಅಧಿಕಾರಿ
ಹನೂರು : ಚಿರತೆ ದಾಳಿಯಿಂದ ಬಾಲಕಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಮೈಸೂರಿನ ಚಲುವಾಂಬ ಆಸ್ಪತ್ರೆಗೆ ಚಾ.ನಗರ ಜಿಲ್ಲೆ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಅಧಿಕಾರಿ ಮಂಜುಳಾರವರು ತಕ್ಷಣ ಭೇಟಿ ನೀಡಿ ಬಾಲಕಿಗೆ ಹೆಚ್ಚಿನ ಚಿಕಿತ್ಸೆಗೆ ಕ್ರಮ ವಹಿಸಿ , ಬಾಲಕಿಯ ಆರೋಗ್ಯ ವಿಚಾರಿಸಿದರು. ಆಸ್ಪತ್ರೆಯ ಅಧಿಕಾರಿ ವರ್ಗವದವರಿಂದ ಚಿಕಿತ್ಸೆಯ ವಿವರ ಮಾಹಿತಿ ಪಡೆದು ಬಾಲಕಿಯ ತಂದೆ ತಾಯಿಗೆ ಧೈರ್ಯ ತುಂಬಿದ್ದಾರೆ. ಮತ್ತು ಸುಶೀಲ ಬೇಗ ಗುಣಮುಖನಾಲಲ್ಲಿ ಎಂದು ಹಾರೈಸಿ ಬಾಲಕಿಯ ವಿಧ್ಯಾಬ್ಯಾಸ ಸೇರಿದಂತೆ ಇನ್ನಿತರ ಸಂಪೂರ್ಣ ಖರ್ಚು ವೆಚ್ಚಗಳನ್ನು ಭರಿಸುವುದಾಗಿ ಭರವಸೆ ನೀಡಿದ್ದಾರೆ. ಬಾಲಕಿ ದಿನದಿಂದ ದಿನಕ್ಕೆ ಚೇತರಿಸಿ ಕೊಳ್ಳುತ್ತಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.ಚಿರತೆಯ ಆತಂಕ : ಇತ್ತ ಚಿರತೆಯನ್ನು ಸೆರೆ ಹಿಡಿಯುವ ಕಾರ್ಯಚರಣೆ ಚುರುಕು ಗೊಂಡಿದ್ದು ಕಳೆದ ಐದಾರು ದಿನಗಳಿಂದ ನಿರಂತರವಾಗಿ ಕಾರ್ಯಾಚರಣೆ ನಡೆಯುತ್ತಿದೆ. ಆದರೂ ಚಿರತೆ ಪತ್ತೆ ಸೆರೆ ಆಗದೆ ಇರುವುದು ಪೋಡಿನ ಜನರಲ್ಲಿ ಹೆಚ್ಚಿನ ಆತಂಕ ಮೂಡಿಸಿದೆ. ಈ ನಡುವೆ ನಿನ್ನೆ ಜಿಲ್ಲಾ ಮಟ್ಟದ ಸೋಲಿಗ ಸಂಘಟನೆಗಳ ಮುಖಂಡರ ನಿಯೋಗ ಚಾಮರಾಜ ನಗರದಲ್ಲಿ ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಯೋಜನೆ ನಿರ್ದೇಶಕರಾದ ದೀಪಾ ಕಾಂಟ್ರಾಕ್ಟ್ ರವರನ್ನು ಭೇಟಿ ಮಾಡಿ ಬಾಲಕಿ ಸುಶೀಲ ಹಾಗೂ ಮತ್ತೊಬ್ಬ ಸೋಲಿಗ ಚಿರತೆ ದಾಳಿಯಿಂದ ಸ್ವಲ್ಪದರಲ್ಲೇ ಪಾರಾಗಿ ಬಂದಿರುವ ಕಂಚಗಳ್ಳಿ ನಂಜಪ್ಪ ಅವರಿಗೆ ಇಲಾಖೆಯಿಂದ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಎಂದು ತಿಳಿದು ಬಂದಿದೆ.ಈ ನಡುವೆ ಬಾಲಕಿ ಮೇಲೆ ಚಿರತೆ ದಾಳಿ ವಿಷಯ ತಿಳಿಯುತ್ತಿದ್ದಂತೆ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ಎರಡು ಬಾರಿ ಬೇಟಿ ನೀಡಿ ಮಗು ಮತ್ತು ಅವರ ತಂತೆ ತಾಯಿ ಯೋಗ ಕ್ಷೇಮ ವಿಚಾರಿಸಿದ್ದೇನೆ. ಆಸ್ಪತ್ರೆ ವೈದ್ಯರೊಡನೆ ಮಗುವಿನ ಚಿಕಿತ್ಸೆ ಬಗ್ಗೆ ನಿರಂತರ ಮಾಹಿತಿ ಪಡೆದು ಕೊಳ್ಳುತ್ತಿದ್ದೇನೆ. ಎಂದು ಪ.ಪಂಗಡ ಕಲ್ಯಾಣ ಇಲಾಖೆ ಅಧಿಕಾರಿ ಮಂಜುಳಾ ರವರು ಪತ್ರಿಕೆಗೆ ತಿಳಿಸಿದ್ದಾರೆ.