ಗಾಂಜಾ ಗಿಡಗಳನ್ನು ಕೃಷಿ ಹೊಂಡದಲ್ಲಿ ಬೆಳೆದಿದ್ದ ವ್ಯಕ್ತಿಯ ಬಂಧನ….
ವರದಿ ಶಾರುಕ್ ಖಾನ್ ಹನೂರು
ಹನೂರು : ಜಮೀನಿನೊಂದರಲ್ಲಿ ಅಕ್ರಮವಾಗಿ ಗಾಂಜಾ ಗಿಡ ಗಳನ್ನು ಸಂಗ್ರಹಿಸಿಟ್ಟಿದ್ದ ಜಾಲಕ್ಕೆ ಪೊಲೀಸ್ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿರುವ ಘಟನೆ ಜರುಗಿದೆ,
ಹನೂರು ತಾಲೂಕಿನ ಬೈಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಂಡೆ ಕುರುಬನ ದೊಡ್ಡಿ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಯ ಲಾಗಿದೆ, ಗುರುಸ್ವಾಮಿ ಬಿನ್ ಶ್ರೀನಿವಾಸ್ ನಾಯಕ ಜನಾಂಗ (50) ಬಂಧಿತ ಆರೋಪಿಯಾಗಿದ್ದಾನೆ,
ಘಟನೆ ವಿವರ : ಹನೂರು ತಾಲೂಕಿನ ಬೈಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಂಡೆ ಕುರುಬನ ದೊಡ್ಡಿ ಗ್ರಾಮದ ಜಮೀನಿನಲ್ಲಿ ಅಕ್ರಮವಾಗಿ ಇಂಗು ಗುಂಡಿಯಲ್ಲಿ ಗಾಂಜಾ ಗಿಡಗಳನ್ನು ಬೆಳೆದಿರುವ ಖಚಿತ ಮಾಹಿತಿ ಮೆರೆಗೆ ಕೊಳ್ಳೇಗಾಲ ಡಿವೈ ಎಸ್ಪಿ ಸೋಮೇಗೌಡ ಹಾಗೂ ಹನೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶಶಿ ಕುಮಾರ್ ಅವರ ನೇತೃತ್ವದ ತಂಡ ಕಾರ್ಯಾಚರಣೆ ಮಾಡಿ ದಾಳಿ ನಡೆಸಿ ಅಕ್ರಮವಾಗಿ ಬೆಳೆಯಲಾಗಿದ್ದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.
ಇನ್ನೂ ದಾಳಿಯಲ್ಲಿ ಸುಮಾರು 25 ಗಿಡಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಇನ್ನೂ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ,
ದಾಳಿಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಾಘವೇಂದ್ರ ಪ್ರಸಾದ್ ಮುಖ್ಯ ಪೇದೆ ದೊಡ್ಡವಿರ ಶೆಟ್ಟಿ, ಸಿಬ್ಬಂದಿಗಳಾದ ರಾಜು ರಾಘವೇಂದ್ರ, ಶಿವಕುಮಾರ್, ಮಣಿಕಂಠ,ಸಂತೋಷ್, ಮಂಜುನಾಥ್ ಸೇರಿದಂತೆ ಇತರರು ಇದ್ದರು,