ಬಿಜೆಪಿ ಪಕ್ಷ ತೊರೆದು : ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ
ಹನೂರು : ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಶಾಸಕ ಎಂ. ಆರ್. ಮಂಜುನಾಥ್ ರವರ ನೇತೃತ್ವದಲ್ಲಿ ತಾಲೂಕಿನ ಲೋಕ್ಕನಹಳ್ಳಿ ಹೋಬಳಿಯ ಪಿ ಜಿ ಪಾಳ್ಯ ಗ್ರಾಮ ಪಂಚಾಯತಿಯ ಸದಸ್ಯರು ಮತ್ತು ಮುಖಂಡರು ತಮ್ಮ ಮೂಲ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ವೇಳೆ ಮಾತನಾಡಿದ ಶಾಸಕ ಎಂ.ಆರ್. ಮಂಜುನಾಥ್ ರವರು ಕುಮಾರಸ್ವಾಮಿ ರವರ ಆಡಳಿತ ವೈಖರಿ ಮತ್ತು ಜನಪರ ಕಾಳಜಿ ಉಳ್ಳ ಯೋಜನೆಗಳನ್ನು ಮೆಚ್ಚಿ, ತಮ್ಮ ಗ್ರಾಮಗಳ ಅಭಿವೃದ್ಧಿ ಮಾಡುವುದಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಇಂದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಬೆಳವಣಿಗೆ ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಜೆಡಿಎಸ್ ಪಕ್ಷಕ್ಕೆ ಅನುಕೂಲಕರವಾಗುತ್ತದೆ. ಎಂದು ತಿಳಿಸಿದರು. ಈ ವೇಳೆ ಪಿ ಜಿ ಪಾಳ್ಯ ಗ್ರಾಮ ಪಂಚಾಯಿತಿ ಸದಸ್ಯರಾದ ದೀಪ ಮತ್ತು ಪವಿತ್ರ, ಬಿಜೆಪಿ ಶಕ್ತಿಕೇಂದ್ರದ ಮುಖಂಡರಾದ ಡಿ.ಸಿ. ಶಿವರಾಜು, ಮಹದೇವಸ್ವಾಮಿ, ಎಸ್ ಶಿವಮಲ್ಲು, ಎಂ ರವಿ ,ಮುಂತಾದವರು ಬಿಜೆಪಿ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಿವಮೂರ್ತಿ, ಎಚ್ ಮಹದೇವಪ್ಪ, ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷರು ಎಂ ಬಸವರಾಜು, ಶಾಗ್ಯ ಬಾಬು, ಉದ್ದನೂರು ಗಿರೀಶ್ ಮುಂತಾದವರು ಹಾಜರಿದ್ದರು.