ಪಿವಿ ವಿಶೇಷ

ಚಿರತೆ ದಾಳಿಗೆ ಬಾಲಕಿ ಗಂಭೀರ ಗಾಯ

ಹನೂರು: ಲೊಕ್ಕನಹಳ್ಳಿ ಹೋಬಳಿಯ ಚಿಕ್ಕಮಾಲಪುರ ಗ್ರಾಮ ಪಂಚಾಯ್ತಿಯ ಕಗ್ಗಳಿ ಗುಂದ್ಧಿ ಆದಿವಾಸಿಗಳ ಗ್ರಾಮದಲ್ಲಿ ಸೋಮವಾರ ರಾತ್ರಿ 8:30 ರ ಸಮಯದಲ್ಲಿ ಅದೇ ಗ್ರಾಮದ ರಾಮ ಲಲಿತಾ ದಂಪತಿಯ ಎರಡನೇ ಪುತ್ರಿ ಸುಶೀಲ ಎಂಬ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 6ವರ್ಷದ ಬಾಲಕಿಯು ತನ್ನ ಮನೆಯ ಮುಂದೆ ಇರುವ ಚಕೋತ ಹಣ್ಣಿನ ಮರದ ಹತ್ತಿರ ಆಟ ಆಡುತ್ತಿದ ಸಂದರ್ಭದಲ್ಲಿ ಕಾಡಿನಿಂದ ಬಂಧ್ಹ ಚಿರತೆಯೊಂದು ಮಗುವನ್ನು ಕಚ್ಚಿಕೊಂಡು ಕಾಡಿನ ಕಡೆ ಎಳೆದು ಕೊಂಡು ಹೋಗುವ ಸಂದರ್ಭದಲ್ಲಿ ,ಆಟ ಆಡುತಿದ ಮಗಳು ಇಲ್ಲ ಎಂದು ನೋಡಿದಾಗ ಅ ಸ್ಥಳದಲ್ಲಿ ಸುರಿದಿದ್ದ ರಕ್ತದ ಕಲೆಗಳ ನು ನೋಡಿ ಶಬ್ಧ ಮಾಡಿ ಗ್ರಾಮದ ಎಲ್ಲರೂ ಜೋರಾಗಿ ಕೂಗಿ ಕೊಂಡಾಗ ಕಾಡಿಗು ಗ್ರಾಮಕೂ ಮಧ್ಯ ತೊಡಲಾಗಿದ್ದ ಆನೆಯ ಗುಂಡಿಯೊಳಗೆ ಮಗುವನ್ನು ಬಿಟ್ಟು ಚಿರತೆ ಕಾಡಿನ ಒಳಗೆ ಓಡಿಹೋಗಿದೆ,ನಂತರ ಗ್ರಾಮದವರೆಲ್ಲ ಸೇರಿ ಆಂಬುಲೆನ್ಸ್ ಮೂಲಕ ಸಮೀಪದ ಕಾಮಗೆರೆಯ ಹೋಲಿ ಕ್ರಾಸ್ ಹಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ,ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ .ಈ ಸಂಬಂಧ ಅರಣ್ಯ ಇಲಾಖೆಯವರು ಸೂಕ್ತ ಪರಿಹಾರ ನೀಡಲು ಹಾಗೂ ಚಿರತೆಯನ್ನು ಹಿಡಿಯಲು ಗ್ರಾಮಸ್ಥರು ಹಾಗೂ ಸುತ್ತ ಮುತ್ತಲಿನ ಗ್ರಾಮದವರು ಒತ್ತಾಯಿಸಿದಾರೆ.

Related Articles

Leave a Reply

Your email address will not be published. Required fields are marked *

Back to top button