ಪಿವಿ ವಿಶೇಷ
ಜಮೀನಿನಲ್ಲಿ ಒಂಟಿ ಸಲಗ ಬೆಳೆನಾಶ ರೈತನ ಕಣ್ಣೀರು
ಹನೂರು : ಕಾಡಾನೆ ದಾಳಿಯಿಂದ ಜೋಳದ ಫಸಲು ನಾಶವಾಗಿರುವ ಘಟನೆ ಬಸವೇಗೌಡನ ದೊಡ್ಡಿಯ ಜಮೀನೊಂದರಲ್ಲಿ ಶುಕ್ರವಾರ ತಡರಾತ್ರಿ ಜರುಗಿದೆ.
ಹನೂರು ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ನೆಲ್ಲೂರು ಗ್ರಾಮದ ಹೊರವಲದಲ್ಲಿರುವ ಬಸವೇಗೌಡನ ದೊಡ್ಡಿಯ ರೈತ ಕೃಷ್ಣಮ್ಮ ಹಾಗೂ ವೆಂಕಟಚಲ ಸೇರಿದ ಜೋಳದ ಫಸಲು ಹಾನಿಯಾಗಿದೆ. ಶುಕ್ರವಾರ ತಡರಾತ್ರಿ ಕಾಡಾನೆಯೊಂದು ಜಮೀನಿಗೆ ನುಗ್ಗಿದ ಪರಿಣಾಮ ಜೋಳದ ಫಸಲು ನಾಶ ಆಗಿದೆ.
ಈ ಬಗ್ಗೆ ಅರಣ್ಯ ಇಲಾಖೆಯವರಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರು ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ ಕಾರಣ ಬೆಳೆ ನಾಶ ಮಾಡಿರುವುದರಿಂದ ನಾವು ಸಂಕಷ್ಟಕ್ಕೆ ತುತ್ತಾಗಿವೆ ಹಾಗಾಗಿ ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರವನ್ನು ಒದಗಿಸಬೇಕು ಎಂದು ಮನವಿ ಮಾಡಿದರು