ಲೋಕಾಯುಕ್ತ ಅಧಿಕಾರಿಗಳ ದಾಳಿ ಹಲವು ದಾಖಲೆಗಳ ವಶ ಪ್ರಕರಣ ದಾಖಲು .
ಶಾರುಕ್ ಖಾನ್ ಹನೂರು
ಹನೂರು : ರಾಜ್ಯದ ಹಲವೆಡೆ ಲೋಕಯುಕ್ತ ದಾಳಿ ನಡೆದಿದ್ದು ಅದರಂತೆ ಹನೂರು ತಾಲೂಕಿನ ಅಜ್ಜೀಪುರ ಗ್ರಾಮದ ಹೊರವಲಯದಲ್ಲಿರುವ ತೋಟದ ಜಮೀನೊಂದರ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರನೆ ಬುಧವಾರ ಬೆಳ್ಳಂ ಬೆಳಗ್ಗೆ ದಾಳಿ ನಡೆಸಿದ್ದರು . ಪ್ರಕರಣದ ಆರೋಪೀಯನ್ನು ಅಜ್ಜೀಪುರ ಗ್ರಾಮದ ಶಿವಶಂಕರ್ ಮೂರ್ತಿ ಎನ್ನಲಾಗಿದ್ದು,ಇವರು ಹಾಲಿ ನಂಜನಗೂಡು ಪಟ್ಟಣದಲ್ಲಿ ಹಿರಿಯ ಉಪನೋಂದಣಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಇಂದು ಹಲವಾರು ಅಧಿಕಾರಿಗಳ ಮೇಲೆ ದಾಳಿ ನಡೆಸಿದ ಹಿನ್ನೆಲೆ ಶಿವಶಂಕರ್ ಮೂರ್ತಿ ಅವರಿಗೆ ಸೇರಿರುವ ಅಜ್ಜೀಪುರ ಗ್ರಾಮದ ತೋಟದ ಮನೆಯ ಮೇಲೂ ದಾಳಿ ನಡೆಸಲಾಗಿದೆ. ಲೋಕಾಯುಕ್ತ ಅಧಿಕಾರಿಗಳ ತಂಡ ಒಂದು ಕಾರಿನಲ್ಲಿ ಆಗಮಿಸಿ ದಾಳಿ ನಡೆಸಿದ್ದು ಇವರಿಗೆ ಸೇರಿದೆ ಎನ್ನಲಾದ, ಐದು ಎಕರೆ ಜಮಿನು, ಒಂದು ಮನೆ ಹಾಗೂ ಆದಾಯಕ್ಕಿಂತ ಒಂದು ಕೋಟಿಗೂ ಹೆಚ್ವುಸಂಪಾದನೆ ಮಾಡಿರುವುದು ಸಾಭಿತಾಗಿದ್ದು ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆಯನ್ನು ಹಿರಿಯ ಅಧಿಕಾರಿಗಳು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ .