ಪಿವಿ ವಿಶೇಷ

ಬಿಜೆಪಿ ಬಡಕಲಾಗಿದೆ. ಜೆಡಿಎಸ್ ಗೆ ಶಕ್ತಿ ಇಲ್ಲ. ಡಿ.ಕೆ ಶಿವಕುಮಾರ್ ವ್ಯಂಗ್ಯ.

ಕೆ.ಆರ್.ಪೇಟೆ ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್ ದೇವರಾಜು ಪರವಾಗಿ ಪ್ರಚಾರ ಹಾಗೂ ಕಾರ್ಯಕರ್ತರ ಬೃಹತ್ ಸಮಾವೇಶಕ್ಕೆ ಪಟ್ಟಣದ ಶ್ರೀರಂಗ ಚಿತ್ರಮಂದಿರದಿಂದ ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಸಾವಿರಾರು ಕಾರ್ಯಕರ್ತರು ಸಮ್ಮುಖದಲ್ಲಿ ತೆರೆದ ಬೃಹತ್ ವಾಹನದ ಮೂಲಕ ಡಿ.ಕೆ ಶಿವಕುಮಾರ್ ಆಗಮಿಸಿದರು. ಬಳಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕ್ಷೇತ್ರದಲ್ಲಿ ರಾಜ್ಯಕ್ಕೆ ಒಂದು ಸಂದೇಶ ಕೊಡುವ ಸಂದರ್ಭ ಕ್ಷೇತ್ರದ ಜನತೆಗೆ ಬಂದಿದೆ ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಸೋತಿದ್ದಾರೆ.

ಪಕ್ಷ ಉಳಿಯಬೇಕಾದರೆ ಹೊಸ ಅಭ್ಯರ್ಥಿಯನ್ನು ಕಣಕ್ಕೆ ತಿಳಿಸಬೇಕು ಎಂಬ ಆಲೋಚನೆ ಇತ್ತು ನಮ್ಮಲ್ಲಿ ಆರು ಜನ ಸಮರ್ಥ ಅಭ್ಯರ್ಥಿಗಳು ಆಕಾಂಕ್ಷಿಯಾಗಿದ್ದರು ಕೂಡ ಜೆಡಿಎಸ್ ಪಕ್ಷದಲ್ಲಿ 40ವರ್ಷ ಪಕ್ಷ ನಿಷ್ಠೆಯಲ್ಲಿದ್ದ ಬಿ.ಎಲ್. ದೇವರಾಜ್ ರವರಿಗೆ ಜೆಡಿಎಸ್ ಮೋಸ ಮಾಡಿದೆ ಆಗಾಗಿ ಅವರನ್ನ ಪರಿಗಣಿಸಿ ನಮ್ಮ ಪಕ್ಷದ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದೇವೆ ಆದರೆ ಬಿ ಎಲ್ ದೇವರಾಜು ಅಭ್ಯರ್ಥಿಯಲ್ಲ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅಭ್ಯರ್ಥಿ ಎಂದು ತಿಳಿದು ಮತ ನೀಡಬೇಕು,ಮುಂದೆ ಬಿಜೆಪಿ ಸರ್ಕಾರ ಬರೋದಿಲ್ಲ ಎಂದು ನಾನು ಹೇಳಬೇಕಾಗಿಲ್ಲಾ ರಾಜ್ಯದ ಜನತೆಗೆ ಈಗಾಗಲೇ ತಿಳಿದಿದೆ ಆರು ಭಾರಿ ಶಾಸಕರಾಗಿ, ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದರು ಇಲ್ಲಿ ಭವಿಷ್ಯ ಇಲ್ಲ ಎಂದು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಜಗದೀಶ್ ಶೆಟ್ಟರ್ . ಲಕ್ಷ್ಮಣ ಸವದಿ, ಬಾಬುರಾವ್ ಚುಂಚನಸೂರು, ಆಯನೂರು ಮಂಜುನಾಥ, ಗೋಪಾಲಕೃಷ್ಣ, ಸೇರಿದಂತೆ ಅನೇಕರು ಕಾಂಗ್ರೆಸ್ ಬಂದಿದ್ದಾರೆ. ಮುಂದೆ ಬಿಜೆಪಿಯವರು ಕಾಂಗ್ರೆಸ್ ಬರುತ್ತಾರೆ, ಬಿಜೆಪಿ ಯವರಿಗೆ ನನ್ನ ಆಹ್ವಾನ ಮುಕ್ತವಾಗಿದೆ. ಮಂಡ್ಯದಲ್ಲಿ ಏಳು ಜನ ಜೆಡಿಎಸ್ ಶಾಸಕರನ್ನು ಆಯ್ಕೆ ಮಾಡಿದ್ದೀರಿ. ಏನಾಯಿತು ಸರ್ಕಾರ ಉಳಿತಾ,ಅಧಿಕಾರ ಇದ್ದಾಗ ನಿಖಿಲ್ ನ ಗೆಲ್ಲಿಸಕ್ಕಾಗಿಲ್ಲ. ಮುಂದೆ ಗೆಲ್ಲಿಸ್ಥಾರ,.

ದೇವರಾಜುಗೆ ಶಕ್ತಿಇದೆ. ಬಿಜೆಪಿ ಬಡಕಲಾಗಿದೆ. ಜೆಡಿಎಸ್ ಶಕ್ತಿಇಲ್ಲ .

ಕಮಲ ಕೆರೆಯಲ್ಲಿದ್ದರೆ ಚೆಂದ, ಜೆಡಿಎಸ್ ತೆನೆ ಹೊಲದಲ್ಲಿದ್ದರೆ ಚೆನ್ನ ಅದೆ ರೀತಿ ಕಾಂಗ್ರೆಸ್ ಕೈ ಮೇಲಿದ್ದರೆ ಚೆನ್ನ ಎಂದು ವ್ಯಂಗ್ಯವಾಗಿ ಟೀಕಿಸಿದರು .ರೈತನಿಗೆ ನಿವೃತ್ತಿ ಇಲ್ಲ, ಸಿಲ್ಕ್ ಮಿಲ್ಕ್ ಇಲ್ಲಾ, ನಂದಿನಿ ಉಳಿಸಬೇಕಾಗಿದೆ,10 ಗಂಟೆ ವಿದ್ಯುತ್ ಎಲ್ಲಿ, ಯುವಕರಿಗೆ ಉದ್ಯೋಗ ಎಲ್ಲಿ ಎಂದು ನಿಷ್ಠಾವಂತ ಮತದಾರರು ಕೇಳಬೇಕು . ಯಡಿಯೂರಪ್ಪ ನವರನ್ನು ಉಳಿಸಿಕೊಳ್ಳುವ ಪ್ರಯತ್ವ ಬಿಜೆಪಿ ಮಾಡುತ್ತಿದ್ದೆ.ಮಾಜಿ ಮುಖ್ಯ ಮಂತ್ರಿ ಕುಮಾರಣ್ಣ ಸಿಎಂ ಆಗುತ್ತಿನೀ ಎಂದು ಕನಸು ಕಾಣುತಿದ್ದಾರೆ ಅದು ಆಗುತ್ತಾ,ಸಿದ್ದರಾಮಯ್ಯ ನವರನ್ನು ಜೆಡಿಎಸ್ ನಲ್ಲಿದ್ದರೆ ಸಿಎಂ ಆಗಲು ಸಾಧ್ಯವಾಗುತ್ತಿತ್ತ ಆದರೆ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿಯನ್ನಾಗಿ ಮಾಡಿತು.

ಬಿಜೆಪಿ ಯವರು ನನ್ನನ್ನು ತಿಹಾರ್ ಜೈಲಿಗೆ ಹಾಕಿದರು.ಈ ಕ್ಷೆತ್ರದಿಂದ ತಾಲ್ಕೂಕಿನ ಜನ ನನ್ನ ಬಿಡುಗಡೆಗೆ ಪ್ರಾರ್ಥಿಸಿದರು ಆ ಮಮಕಾರ ತೀರಿಸಲು ಅಸಾಧ್ಯ, ಹಾಗಾಗಿ ರಾಜ್ಯ ರೈತರ ಅಭಿವೃದ್ಧಿ ಕಾಣಬೇಕಾದರೆ ಮತ್ತು ಗ್ಯಾರಂಟಿ ಕಾರ್ಡ್ ಯೋಜನೆಗಳಾದ 10 ಮೆಗವ್ಯಾಟ್ ನಿಂದ ೩೫ ಮೆ.ವಾ. ವಿದ್ಯುತ್ ಕೊಡುತ್ತಿದ್ದೆ. ಉಚಿತ ವಿದ್ಯುತ್, ಹೆಣ್ಣು ಮಕ್ಕಳಿಗೆ ಕಡಿಮೆದರದಲ್ಲಿ ಗ್ಯಾಸ್ ಸಿಲಿಂಡರ್ ವಿತರಣೆ, 450ರಿಂದ 1150 ಅಡುಗೆ ಎಣ್ಣೆ, ಗೊಬ್ಬರ ಎಲ್ಲಾ ಹೆಚ್ಚು, ಹೆಣ್ಣು ಮಕ್ಕಳಿಗೆ ವಿತರಣೆ, ಸೇರಿದಂತೆ ಅನೇಕ ಯೋಜನೆಗಳು ಅನುಷ್ಠಾನಗೊಳ್ಳಬೇಕೆಂದರೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದರು.ನಂತರ ಮಾತನಾಡಿದ ಕೇಂದ್ರ ಮಾಜಿ ಸಚಿವ ರೆಹಮಾನ್ ಖಾನ್, ತಾಲ್ಲೂಕಿನಲ್ಲಿ ಎಲ್ಲಾ ಏರುಪೇರುಗಳನ್ನು ಖಂಡಿದೆ ಕಾಂಗ್ರೆಸ್ ಸರ್ಕಾರ ಕಳೆದುಕೊಂಡ ಮೇಲೆ, ಕೋವಿಡ್, ಬ್ರಷ್ಟಾಚಾರ, ಇತರೆ ವಿಷಯಗಳನ್ನು ದಿಟ್ಟವಾಗಿ ಕಾಂಗ್ರೆಸ್ ಎದುರಿಸಿ ಕೊಂಡು ಬಂದಿದೆ. ಬಿಜೆಪಿಯಲ್ಲಿ ನಾಯಕತ್ವದ ಕೊರೆತೆ ಇದೆ,ಅದು ನೀವು ಈಗಾಗಲೀ ತಾಲೂಕಿನ ಜನತೆ ನೋಡ್ದಿದೀರಿ ಜೆಡಿಎಸ್ ನಲ್ಲಿ ಮುಗಿಲೆದ್ದ ಬಿನ್ನಮತ ಇದೆ.10 ವರ್ಷದಲ್ಲಿ ಅಭಿವೃದ್ಧಿ ಮಾಡಿರುವುದನ್ನು ನೀವು ನೋಡಿದ್ದೀರಿ.

ಸಿದ್ದರಾಮಯ್ಯ ಕೊಟ್ಟ ಸರ್ಕಾರದ ಯೋಚನೆಗಳನ್ನು ಬಿಜೆಪಿ ಸರ್ಕಾರದ ಸಾಧನೆಯನ್ನು ನೀವು ನೋಡಬಹುದು. ಇತಿಹಾಸದಲ್ಲಿ ಒಂದೇ ಬಾರಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡ ಕೀರ್ತಿ ಕಾಂಗ್ರೆಸ್ ಗೆ ಸಲ್ಲುತ್ತದೆ. ಮಂಡ್ಯದ ಏಳಕ್ಕೆ ಏಳು ಸ್ಥಾನವನ್ನು ಕಾಂಗ್ರೆಸ್ ಗೆ ಗೆಲ್ಲಿಸಬೇಕೆಂದು ನಿಚ್ಚಯ, ಅದರಂತೆ ಕ್ಷೇತ್ರದಲ್ಲಿ ನಮ್ಮ ಪಕ್ಷದ ಆರು ಜನ ಆಕಾಂಕ್ಷಿಗಳು, ನಮ್ಮಅಭ್ಯರ್ಥಿ ಬಿ ಎಲ್ ದೇವರಾಜು ಅವರನ್ನು ಬೆಂಬಲಿಸಿರುವುದು ಖುಷಿ ತಂದಿದೆ ಎಂದರು.ಬಳಿಕ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ದೇವರಾಜು ನಾನು 40 ವರ್ಷದಿಂದ ವಕೀಲನಾಗಿ ಕೆಲಸ ಮಾಡುತ್ತಿದ್ದೇನೆ. ಕಾಂಗ್ರೆಸ್ ನಲ್ಲಿ ನನಗೆ ಕೆಲಸ ಮಾಡಲು ಎಲ್ಲಾ ನಾಯಕರು ವಿಶೇಷ ಪ್ರೀತಿ ಕಾಳಜಿ ತೋರಿಸಿದ್ದರೆ, ಹಿಂದಿನ ಶಾಸಕರು ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಬರೀ ಗುದ್ದಲಿ ಪೂಜೆ ಮಾಡುತ್ತಾ ಬಂದಿದ್ದಾರೆ ಮುಂದಿನ ದಿನಗಳಲ್ಲಿ ಸೋಲಿಸುವ ಮುಖಾಂತರ ತಕ್ಕ ಪಾಠ ಕಲಿಸುತ್ತಾ, ನನ್ನನ್ನು ಗೆಲ್ಲಿಸಿದರೆ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.

ವೇದಿಕೆ ಮೇಲೆ ಸಚಿವ ಕೆ. ಸಿ ನಾರಾಯಣಗೌಡ ಮೊಮ್ಮಗ ಕಾಂಗ್ರೆಸ್ ಸೇರ್ಪಡೆ

ಕಾರ್ಯಕ್ರಮದಲ್ಲಿ ಸಚಿವ ನಾರಾಯಣಗೌಡ ಅಣ್ಣನ ಮೊಮ್ಮಗ ಹತ್ತಿರದ ಸಂಬಂಧಿ ಸಾರಂಗಿ ಮಂಜುನಾಥ್, ಬಿಜೆಪಿ ಪಕ್ಷ ತೊರೆದು ಡಿ. ಕೆ ಶಿವಕುಮಾರ್ ರವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಮಾದರಿಯಲ್ಲೇ ಜಿ. ಪಂ ಮಾಜಿ ಸದಸ್ಯ ಆಘಲಯ ಮಂಜುನಾಥ್, ಅಕ್ಕಿಹೆಬ್ಬಾಳು ಕೃಷಿ ಪತ್ತಿನ ಸಹಕರ ಸಂಘದ ಅಧ್ಯಕ್ಷ ವಕೀಲ ಸಾಕ್ಷಿಬಿಡು ನವೀನ್ ಕುಮಾರ್, ಬಳ್ಳೆಕೆರೆ ಗ್ರಾ. ಪಂ.ಮಾಜಿ ಅಧ್ಯಕ್ಷ ಯೋಗಣ್ಣ, ಸರಿದಂತೆ ಅನೇಕ ಮುಖಂಡರು ವಿವಿಧ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕಾರ್ಯಕ್ರಮದಲ್ಲಿ, ಮಾಜಿ ಸಚಿವ ಚಲುವರಾಯಸ್ವಾಮಿ, ಮಾಜಿ ಶಾಸಕ ಕೆ.ಬಿ ಚಂದ್ರಶೇಖರ್, ಮಾಜಿ ಶಾಸಕ ಬಿ ಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್, ಐಪನಹಳ್ಳಿ ನಾಗೇಂದ್ರ ಕುಮಾರ್, ಮುಖಂಡ ಮನ್ಸೂರ್ ಖಾನ್, ಬೂಕನಕೆರೆ ವಿಜಯ್ ರಾಮೇಗೌಡ,ಎಂ ಡಿ ಕೃಷ್ಣಮೂರ್ತಿ, ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ದೇವರಹಳ್ಳಿ ಮಹೇಂದ್ರ,ಚಿಕ್ಕೋನಹಳ್ಳಿ ಚೇತನ್, ಪುರಸಭಾ ಸದಸ್ಯರಾದ ಕೆ.ಸಿ ಮಂಜುನಾಥ್. ಡಿ ಪ್ರೇಮ್ ಕುಮಾರ್,ಹೊಸಹೊಳಲು ಪ್ರವೀಣ್, ರವೀಂದ್ರಬಾಬು, ಬಿ ಟಿ ವೆಂಕಟೇಶ್ ಬೂಕನಕೆರೆ , ಗಂಜೀಗೆರೆ ಶಶಿಧರ್, ಕಾಂಗ್ರೆಸ್ ಮಹಿಳಾ ತಾಲೂಕು ಅಧ್ಯಕ್ಷೆ ಅಧಿಹಳ್ಳಿ ಮೀನಾಕ್ಷಿ,ಕಾಂಗ್ರೆಸ್ ಮಹಿಳಾ ತಾಲೂಕು ಅಧ್ಯಕ್ಷೆ ಪ್ರತಿಮಾ, ಪುಷ್ಪ,ಲೋಲಾಕ್ಷಿ,ಜಿಲ್ಲಾ ಕಾಂಗ್ರೆಸ್ ವಕ್ತಾರ ಮಾದಾಪುರ ರಾಮಕೃಷ್ಣಗೌಡ, ಕೆ. ಟಿ ಗಂಗಾಧರ್, ಆಘಲಯ ಮಂಜುನಾಥ್, ಅಕ್ಕಿಹೆಬ್ಬಾಳು ದಿವಾಕರ್, ಕೆ ಸಿ ಶ್ರೀಕಾಂತ್, ಬಸ್ತಿ ರಂಗಪ್ಪ, ಎಂ. ಪಿ ಲೋಕೇಶ್, ಅಗ್ರಹಾರಬಾಚಳ್ಳಿ ಕಾಂತರಾಜು,ಮುರುಳಿ, ದಿನೇಶ್, ಸೇರಿದಂತೆ ಉಪಸ್ಥಿತರಿದ್ದರು.

ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ

Related Articles

Leave a Reply

Your email address will not be published. Required fields are marked *

Back to top button