ಪಿವಿ ವಿಶೇಷ

ಆಕಾಶ ಇದ್ದಷ್ಟು ದಿನ ವಿಶ್ವಾಜ್ಞಾನಿ ಡಾ:ಬಿ.ಆರ್. ಅಂಬೇಡ್ಕರ್ ಅವರು ಅಮರರಾಗಿದ್ದಾರೆ. ಅವರ ಬದುಕು ಎಲ್ಲರಿಗೂ ಸ್ಫೂರ್ತಿದಾಯಕ ಎಂದು ನಿವೃತ್ತ ಶಿಕ್ಷಕ ದೊಡ್ಡೇಗೌಡ ಅಭಿಪ್ರಾಯಪಟ್ಟರು.

ಕೆ.ಆರ್.ಪೇಟೆ ತಾಲೂಕಿನ ಕಸಬಾ ಹೋಬಳಿಯ ಮಾಕವಳ್ಳಿ ಗ್ರಾಮದಲ್ಲಿ ಡಾ: ಬಿ. ಆರ್. ಅಂಬೇಡ್ಕರ್ ಯುವ ಬಳಗದಿಂದ ವಿಶ್ವಾಜ್ಞಾನಿ ಸಂವಿಧಾನಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ 137ನೇ ಜಯಂತಿ ಅಂಗವಾಗಿ ಭಾವಚಿತ್ರ ವಿಶೇಷ ಪೂಜೆ ಮತ್ತು ಪುಷ್ಪರ್ಚನೆ ಸಲ್ಲಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮ ಕುರಿತು ಮಾತನಾಡಿ ನಿವೃತ್ತ ಶಿಕ್ಷಕ ಮಾಕವಳ್ಳಿ ದೊಡ್ಡೇಗೌಡ, ನೊಂದ ದಲಿತ ವರ್ಗಕ್ಕೆ ಸಂವಿಧಾನ ಮೂಲಕ ಧ್ವನಿಯಾದ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಆದರ್ಶ ಎಲ್ಲರ ಜೀವನಕ್ಕೆ ಈಗಲೂ ದಾರಿದೀಪವಾಗುತ್ತಿದೆ ಬಾಬಾ ಸಾಹೇಬರ ಚಿಂತನೆಗಳು ಈಗಿನ ಯುವಜನೆತೆಗೆ ಸ್ಪೂರ್ತಿ ಆಗಬೇಕು ಅವರ ಜೀವನ, ತತ್ವಗಳು ನಮ್ಮ ದೇಶದ ಆಸ್ತಿ. ಆದರೇ ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗಸಮಾಜದಲ್ಲಿ ಮೇಲು-ಕೀಳು ಎಂಬ ಜಾತಿ ಕಂದಕಗಳ ನಡುವೆ ಸಿಲುಕಿ ತುಳಿತಕ್ಕೊಳಗಾದವರಿಗೆ ಆಶಾಕಿರಣವಾಗಿ ಈ ಭೂಮಿ ಮೇಲೆ ಅಮರರಾಗಿ ಉಳಿದವರು ಎಂದರೆಡಾ. ಬಿ. ಆರ್.ಅಂಬೇಡ್ಕರ್. ಅವರು ತನ್ನದೇ ವಿಚಾರಧಾರೆಗಳಿಂದ ಆಧುನಿಕ ಮನು ಎಂದು ಕರೆಸಿಕೊಂಡವರು. ಸಮಾಜಕ್ಕೆ ಅಂಟಿದ ಮೇಲು-ಕೀಳಿನ ತಾರತಮ್ಯವನ್ನು ಕತ್ತಿ, ಗುರಾಣಿ ಹಿಡಿದು ಯುದ್ಧ ಮಾಡುವುದರಿಂದ ಹೋಗಲಾಡಿಸಲು ಸಾಧ್ಯವಿಲ್ಲ ಎಂದು ಹರಿತು ಕ್ರಾಂತಿ ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬುದನ್ನು ಜಗತ್ತಿಗೆ ಸಾರಿದವರು ಮಹಾನ್ ವಿಶ್ವಜ್ಞಾನಿ ಡಾ ಬಿ ಆರ್ ಅಂಬೇಡ್ಕರ್ ಎಂದರು. ಬಳಿಕ ಗ್ರಾಮದ ನೂರಾರು ಜನರು ಮೇಲು-ಕೀಳು ಎಂಬುವ ಕತ್ತಲನ್ನು ಹೋಗಲಾಡಿಸಿದ ಸಂವಿಧಾನ ಶಿಲ್ಪಿ ವಿಶ್ವಜ್ಞಾನಿ ಭಾವಚಿತ್ರಕ್ಕೆ ಮೇಣದ ಬತ್ತಿಯ ಮೂಲಕ ವಿಶೇಷ ಗೌರವ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ಮುಖಂಡ ಪಟೇಲ್ ದೇವೇಗೌಡ, ಗ್ರಾ. ಪಂ ಮಾಜಿ ಅಧ್ಯಕ್ಷ ಮಂಜೇಗೌಡ, ಗ್ರಾ. ಪಂ.ಸದಸ್ಯ ಎಂ ಆರ್ ಮಂಜು,ಮಾಜಿ ಅಧ್ಯಕ್ಷ ಬಲರಾಮೇಗೌಡ, ಯುವ ಮುಖಂಡ ಎಂ.ಎಸ್. ಸುನಿಲ್ ಸಣ್ಣಯ್ಯ,ಎಂ ಪಿ ಕುಮಾರಸ್ವಾಮಿ,ಯೋಗ ಮೂರ್ತಿ, ಹಿರಿಯ ಮುಖಂಡ ಜವರಯ್ಯ, ಜಯ ಕೃಷ್ಣಯ್ಯ, ರಮೇಶ್, ಯುವ ಮುಖಂಡರಾದ ನಟೇಶ್, ಎಂ.ಜೆ.ಚೆಲುವರಾಜು, ಮೋಹನ್ (ಚಂದನ್ ), ಚೆಲುವರಾಜು, ರಘು,ಸೇರಿದಂತೆ ಉಪಸ್ಥಿತರಿದ್ದರು.

ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ

Related Articles

Leave a Reply

Your email address will not be published. Required fields are marked *

Back to top button