ಪಿವಿ ವಿಶೇಷ

ಮನೆಯ ಬಾಗಿಲು ಮುರಿದು ಚಿನ್ನಾಭರಣ ದೋಚಿದ್ದ ಆರೋಪಿಯ ಬಂಧನ

ಕೆ.ಆರ್.ಪೇಟೆ ಟೌನ್, ಜಯನಗರ ಬಡಾವಣೆಯಲ್ಲಿನ ರಾಮೇಗೌಡರ ವಾಸದ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯ ಬಾಗಿಲನ್ನು ಮೀಟಿ, ಮನೆಯ ಬೀರುವಿನಲ್ಲಿದ್ದ ಸುಮಾರು ೪ ಲಕ್ಷ ಮೌಲ್ಯದ ಚಿನ್ನದ ಒಡವೆ ಹಣ ಕಳವು ಆಗಿದ್ದು, ಮೊಕದ್ದಮೆ ಸಂಖ್ಯೆ ೮೨/೨೦೨೩ ಕಲಂ: ೪೫೪-೩೮೦ ಐಪಿಸಿ ಅಡಿಯಲ್ಲಿ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. ಈ ಮೇಲ್ಕಂಡ ಕಳವು ಪ್ರಕರಣದ ಬಗ್ಗೆ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು, ಮಂಡ್ಯ ಜಿಲ್ಲೆ, ಮಂಡ್ಯ, ಮತ್ತು ಮಾನ್ಯ ಅಪರ ಜಿಲ್ಲಾ ಪೊಲೀಸ್ ಅಧಿಕಾರಿಗಳು, ಮಂಡ್ಯ ಜಿಲ್ಲೆ, ಮಂಡ್ಯ ಹಾಗೂ ನಾಗಮಂಗಲ ಉಪ-ವಿಭಾಗದ ಮಾನ್ಯ ಆರಕ್ಷಕ ಉಪಾಧೀಕ್ಷಕರಾದ ಹೆಚ್ ಲಕ್ಷ್ಮೀನಾರಾಯಣಪ್ರಸಾದ್ ರವರ ಮಾರ್ಗದರ್ಶನದಲಿ ಕೆ.ಆರ್.ಪೇಟೆ ಟೌನ್, ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆನಂದಕುಮಾರ್ ರವರು ತನಿಖೆ ಮಾಡಿ ಕಳವು ಮಾಡಿ ತಲೆಮರೆಸಿಕೊಂಡಿದ ಆರೋಪಿತನನ್ನು ಪತ್ತೆ ಮಾಡಿ, ಸದರಿ ಆರೋಪಿತನಿಂದ ಕೆ.ಆರ್ ಪೇಟೆ ಟೇಪ್ ಮೊ.ಸಂ-೮೨/೨೦೨೩ ಹಾಗೂ ನಾಗಮಂಗಲ ದಿನ್ ತಾಣೆ ಮೊಕದ್ದಮೆ ಸಂಖ್ಯೆ ೪೨/೨೦೨೩ ಕಲಂ: ೧೫೪-೩೮೦ ಐಪಿಸಿ ಪ್ರಕರಣಗಳಲ್ಲಿ ಸುಮಾರು ೧೦೪ ಗ್ರಾಂ ತೂಕದ ಚಿನ್ನದ ಒಡವೆಗಳು, ಹಾಗೂ ೫೦೦೦/-ರೂಪಾಯಿ ನಗದು ಹಣ ಆಂದಾಜು ೫,೫೦,೦೦೦/- ರೂ. ಮೌಲ್ಯದ ಒಡವೆಗಳನ್ನು ಪತ್ತೆ ಮಾಡಿ, ತನಿಖೆ ಮಾಡಿ ಆರೋಪಿತನನ್ನು ಕೆ.ಆರ್.ಪೇಟೆ ಸಿಜೆ ಮತ್ತು ಜೆ ಎಂ ಎಫ್ ಸಿ [ಕಿ.೩] ನ್ಯಾಯಾಲಯದ ಮುಂದೆ ಹಾಜರಡಿಸಿರುತ್ತೆ. ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಆಸಾಮಿಗಳು ತಲೆಮರೆಸಿಕೊಂಡಿದ್ದಾರೆ. ಈ ಕೇಸಿನ ಪತ್ತೆ ಕಾರ್ಯದಲ್ಲಿ ಶ್ರಮಿಸಿದ ಟೌನ್ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಎಸ್.ಪಿ.ಸುನಿಲ್, ಕೆ.ಆರ್ ಪೇಟೆ ಟೌನ್ ಪೊಲೀಸ್ ಠಾಣೆ, ಶ್ರೀ. ಬಸವರಾಜ್ ಚುಂಚೋಳಿ, ಕೆ.ಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ, ಎಎಸ್‌ಐ, ಬಿ.ಎಸ್. ಚಂದ್ರಶೇಖರ್ , ಹೆಚ್ ಸಿ-೧೮೧, ಹಾಳೇಗೌಡ, ಹೆಚ್ ಸಿ, ಜಯವರ್ಧನ್ , ಪಿಸಿ-೨೦೦ ಮಂಜು, ಪಿಸಿ-೧೭ ಆರು ಪಿಸಿ-೨೩, ಶಶಿಕುಮಾರ, ಪಿಸಿ-೩೬೨ ಸುನೀಲ್, ಪಿ ೨೨೪ ಪ್ರದೀಪ್, ಪ್ರಕಾಶ್ ಪಾಟೀಲ್ ಪಿಸಿ ೨೭, ಅವಿನಾಶ್ ಸಿಪಿಸಿ-೩೪೯ ಹಾಗೂ ಜಿಲ್ಲಾ ತಾಂತ್ರಿಕ ವಿಭಾಗದ ಲೋಕೇಶ್, ಮತ್ತು ರವಿಕಿರಣ್ ರವರುಗಳನ್ನು ಮಾನ್ಯ ಜಿಲ್ಲಾ ಪೊಲೀಸ್ ಪರಿಷ್ಠಾಧಿಕಾರಿ ಯತೀಶ್ ರವರು ಅಭಿನಂದಿಸಿದ್ದಾರೆ.

ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ

Related Articles

Leave a Reply

Your email address will not be published. Required fields are marked *

Back to top button