ಪುರಸಭಾ ಮಾಜಿ ಸದಸ್ಯ ಕೆ.ಆರ್.ಹೇಮಂತಕುಮಾರ್, ನೇತೃತ್ವದಲ್ಲಿ ಪಟ್ಟಣದ ನಯನಜಕ್ಷತ್ರಿಯ ಸಮುದಾಯದ ಅನೇಕ ಯುವ ಮುಖಂಡರು ಬಿಜೆಪಿ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು
ಕೆ. ಆರ್. ಪೇಟೆ ಪಟ್ಟಣದಲ್ಲಿರುವ ಜೆಡಿಎಸ್ ಅಭ್ಯರ್ಥಿ ಎಚ್. ಟಿ . ಮಂಜು ನಿವಾಸದಲ್ಲಿ ಬಿಜೆಪಿ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ಸೋಮಶೇಖರ್, ಮಂಜು, ಮೋಹನ,ಜಗದೀಶ್, ದಿನೇಶ್, ರಂಗಸ್ವಾಮಿ, ಮಂಜುನಾಥ್, ಕಿರಣ, ಅನಂತ, ಚೇತನ ಜೆಡಿಎಸ್ ಪಕ್ಷದ ಶಾಲು ಹಾಕುವ ಮುಖಾಂತರ ಪಕ್ಷಕ್ಕೆ ಸ್ವಾಗತಿಸಿ, ಬಳಿಕ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಎಚ್. ಟಿ.ಮಂಜು, ಹಿಂದುಳಿದ ವರ್ಗಗಳ ಸಮುದಾಯಗಳ ಮುಖಂಡರುಗಳಿಗೆ ನಮ್ಮ ನಾಯಕರಾದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ರಾಜ್ಯದಲ್ಲೆಡೆ ಸೂಕ್ತ ಸ್ಥಾನಮಾನ ನೀಡಿ ಗುರುತಿಸುವ ಮೂಲಕ ಜೆಡಿಎಸ್ ಪಕ್ಷ ಸರ್ವ ಸಮುದಾಯಗಳ ಶಾಂತಿಯ ತೋಟ ಎನ್ನುವ ಮಾದರಿಯಲ್ಲೇ, ರಾಜ್ಯದಲ್ಲಿ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ಬಿಜೆಪಿ ಪಕ್ಷ ತೊರೆದು ಗ್ರಾಮೀಣ ಭಾಗದ ಜನರ ಬದುಕು ಹಸನಾಗಿಸುವ ಜನ ಸ್ನೇಹಿ ಪಂಚರತ್ನ ಯೋಜನೆ ಹಾಗೂ ಜೆಡಿಎಸ್ ಪರ್ವ ಮೆಚ್ಚಿ ನಮ್ಮ ಜೆಡಿಎಸ್ ಕುಟುಂಬಕ್ಕೆ ಸೇರ್ಪಡೆಗೊಳ್ಳುತ್ತಿರುವ ಪಟ್ಟಣದ ನಯನಜಕ್ಷತ್ರಿಯ ಸಮಾಜದ ಯುವ ಮುಖಂಡರುಗಳಿಂದ ನಮ್ಮ ಪಕ್ಷಕ್ಕೆ ಮತ್ತಷ್ಟು ಆನೆ ಬಲಬಂದಂತಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎ. ಎನ್. ಜಾನಕಿರಾಮ್,ಪುರಸಭಾ ಮಾಜಿ ಸದಸ್ಯ ಕೆ. ಆರ್. ಹೇಮಂತ್ ಕುಮಾರ್, ಎಂ ಡಿ ಸಿ ಸಿ ಬ್ಯಾಂಕ್ ಉಪಾಧ್ಯಕ್ಷ ಹೊಸಹೊಳಲು ಅಶೋಕ್,ಗಿರೀಶ್, ವಿಶ್ವನಾಥ್, ಪ್ರತಾಪ್ ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ