ಸರಳ ಸಜ್ಜನ ರಾಜಕಾರಣಿ ಮಾಜಿ ಸಚಿವರು ಬಿ.ಶಿವರಾಂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ
ಸತತ 5 ವರ್ಷಗಳಿಂದ ಉತ್ತಮ ಜನ ಸೇವೆ ಜನ ಸಂಪರ್ಕ ಜನ ಬೆಂಬಲಕ್ಕೆ ಸಿಕ್ಕ ಪ್ರತಿಫಲ ಕಾರ್ಯಕರ್ತರಲ್ಲಿ ಸಂತಸ
ಬೇಲೂರು : ಬಹಳ ದಿನಗಳಿಂದ ಗೊಂದಲ ಕೆರಳಿಸಿದ್ದ ಬೇಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ವಿಚಾರಕ್ಕೆ ಕಾಂಗ್ರೇಸ್ ಹೈಕಮಾಂಡ್ ಕೊನೆಗೂ ತೆರೆ ಎಳೆದಿದೆ.ಗಂಡಸಿ ವಿಧಾನ ಸಭಾ ಕ್ಷೇತ್ರದಲ್ಲಿ ಸತತ ಮೂರು ಬಾರಿ ಕಾಂಗ್ರೇಸ್ ಬಾವುಟ ಹಾರಿಸಿ ಛಾಪು ಮೂಡಿಸಿ, ಸೊಲಿಲ್ಲದ ಸರದಾರರೆಂದೇ ಖ್ಯಾತಿಗಳಿಸಿದ್ದ ಮಾಜಿ ಶಾಸಕರು ಹಾಲಿ AICC ಸದಸ್ಯರಾಗಿರುವ ಗಂಡಸಿ ಶಿವರಾಂ ಅವರನ್ನು ಈ ಬಾರಿ ಬೇಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಎಂದು ಅಧಿಕೃತವಾಗಿ ಕಾಂಗ್ರೇಸ್ ಹೈಕಮಾಂಡ್ ಫೋಷಣೆ ಮಾಡಲಾಗಿದ್ದು ಪಕ್ಷ ನಿಷ್ಠೆ, ಸರಳ ಸಜ್ಜನಿಕೆ ಹಲವು ದಶಕಗಳಿಂದ ನಿಷ್ಠೆಯಿಂದ ಕಾರ್ಯ ನಿರ್ವಹಿಸಿದ್ದರ ಪ್ರತಿಫಲ ಈ ಭಾರಿ ಟಿಕೆಟ್ ನೀಡಲಾಗಿದೆ ಎಂಬುದು ಮತದಾರರ ಮಾತಾಗಿದೆ.
ರಾಜಕಾರಣದಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿ, ಸರಳ ಸಜ್ಜನ ರಾಜಕಾರಣಿ ಆದ ಬಿ. ಶಿವರಾಂ ಅವರು ಕ್ಷೇತ್ರದಲ್ಲಿ ಲಿಂಗಾಯುತ ಹಾಗೂ ದಲಿತ ಮತಗಳೇ ನಿರ್ಣಾಯಕವಾಗಿರುವ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಭಾರಿ ಗೆಲುವಿನ ನಗೆ ಬೀರುವ ಸಾದ್ಯತೆ ಹೆಚ್ಚಾಗಿದೆ ಎಂಬುದು ಕ್ಷೇತದ ಜನರ ಅಭಿಪ್ರಾಯ.
ಕ್ಷೇತ್ರದಲ್ಲಿ ಸತತವಾಗಿ ಕಳೆದ 5 ವರ್ಷಗಳಿಂದ ನಿರಂತರವಾಗಿ ಜನರ ಕಷ್ಟಕ್ಕೆ ಸ್ಪಂದಿಸುತ್ತಾ ಬಂದಿದ್ದು ಹಾಗೂ ಜನರ ಸಂಪರ್ಕದಲ್ಲಿದು ಅವರದ್ದೆ ಆದಂತಹ ಅಪಾರ ಬೆಂಬಲಿಗರನ್ನು ಹೊಂದಿದ್ದು, ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷರಾದ ಎಂ. ಆರ್. ವೆಂಕಟೇಶ್ ಸೇರಿದಂತೆ ಅನೇಕ ಮುಖಂಡರ ಬೆಂಬಲ ಇವರಿಗೆ ದೂರೆತಿದೆ.ಕ್ಷೇತ್ರದಲ್ಲಿ ಒಂದು ಕಡೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅನೇಕ ವಿಚಾರಗಳಿಗೆ ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಂಡು ಕ್ಷೇತ್ರದ ಮತದಾರರಲ್ಲಿ ಗೊಂದಲ ಸೃಷ್ಠಿ ಮಾಡುತ್ತಿರುವುದೇ ವರದಾನ ಎಂದುಕೊಂಡು ಪ್ರತಿನಿತ್ಯ ಬೆಳಿಗ್ಗೆ ಇಂದ ತಡ ರಾತ್ರಿ ತನಕ ಕ್ಷೇತ್ರದಲ್ಲಿ ಸಂಚರಿಸುತ್ತಾ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ಜನ ಸಾಮಾನ್ಯರ ನಡುವೆ ಬೆರೆತು ಪ್ರಾಮಾಣಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದೇ ಬಿ.ಶಿವರಾಂ ಅವರ ಗೆಲುವಿಗೆ ಕಾರಣವಾಗಬಹುದು ಎಂಬುದು ರಾಜಕೀಯ ವಿಶ್ಲೇಷಕರ ವಿಶ್ಲೇಷಣೆಯಾಗಿದೆ.
ದಶಕಗಳ ರಾಜಕೀಯ ಅನುಭವ ಹೊಂದಿರುವ ಮಾಜಿ ಸಚಿವರು ಆಗಿರವ ಇವರು ಪಕ್ಷದಲ್ಲಿ ನ ಎಲ್ಲಾ ಸಮುದಾಯದ ಹಿರಿಯ ಹಾಗೂ ಕಿರಿಯ ನಾಯಕರನ್ನು ಸಾಮಾನವಾಗಿ ಕಾಣುವ ಜೊತೆಗೆ ಎಲ್ಲರ ಸಲಹೆ ಸೂಚನೆಗಳನ್ನು ಪರಿಗಣಿಸಿ ಪಕ್ಷ ಸಂಘಟನೆ ಮಾಡುತ್ತಿರುವುದು ಕ್ಷೇತ್ರದಲ್ಲಿ ಈ ಭಾರಿ ಮತ್ತೆ ಕಾಂಗ್ರೇಸ್ ಅಧಿಕಾರಕ್ಕೆ ಬರುವ ಎಲ್ಲಾ ಸಾದ್ಯತೆಗಳು ಹೆಚ್ಚಾಗಿದೆ ಎಂಬುದು ಕ್ಷೇತ್ರದಾದ್ಯಂತ ಕೇಳಿ ಬರುತ್ತಿದೆ.
ವರದಿ ಮೋಹನ್ ಆರ್.ಜೆ ರಾಜನ ಶಿರಿಯೂರು