ಪಿವಿ ವಿಶೇಷ

ಗ್ರಾಮದೇವತೆ ಶ್ರೀ ಲಕ್ಷ್ಮಿದೇವಿ ಅಮ್ಮನವರ ಮಹಾ ರಥೋತ್ಸವ

ಕೆ ಆರ್ ಪೇಟೆ ತಾಲೂಕಿನ ಕಸಬಾ ಹೋಬಳಿಯ ಅಗ್ರಹಾರ ಬಾಚಹಳ್ಳಿಯ ಗ್ರಾಮದೇವತೆ ಶ್ರೀ ಲಕ್ಷ್ಮಿದೇವಿ(ಬಾಚಳ್ಳಮ್ಮ) ಅಮ್ಮನವರ ಮಹಾ ರಥೋತ್ಸವವು ಶನಿವಾರ ವಿಜೃಂಭಣೆಯಿಂದ ನಡೆಯಿತು ರಥೋತ್ಸವದ ಹಿನ್ನೆಲೆ ಶ್ರೀ ಲಕ್ಷ್ಮಿದೇವಿ ಅಮ್ಮನವರಿಗೆ ದೇವರಿಗೆ ಮುಂಜಾನೆಯಿಂದಲೇ ವಿಶೇಷ ಪೂಜೆ, ಪುನಸ್ಕಾರಗಳು, ಹಲವು ರೀತಿಯ ಹೋಮ ಹವನಗಳು ನಡೆಯಿತು.ದೇವರಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ಹಬ್ಬದ ಹಿನ್ನೆಲೆಯಲ್ಲಿ ಗ್ರಾಮವು ತಳಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ನವ ವಧುವಿನಂತೆ ಸಿಂಗಾರಗೊಂಡು ಕಂಗೊಳಿಸುತ್ತಿದೆ. ಬ್ರಾಹ್ಮಣ ಸೇವಾ ಸಮಿತಿ ವತಿಯಿಂದ ದೇವರ ಪಲ್ಲಕ್ಕಿ ಉತ್ಸವವು ನೆರಳು ಚಪ್ಪರದೊಂದಿಗೆ ಶ್ರೀ ಲಕ್ಷ್ಮಿದೇವಿ ಮತ್ತು ಶ್ರೀ ಚನ್ನಕೇಶವ ಸ್ವಾಮಿಯವರ ಪಲ್ಲಕ್ಕಿ ಉತ್ಸವ ನಡೆಯಿತು. ಮಧ್ಯಾಹ್ನ ಸುಮಾರು ೨.೩೦ಗಂಟೆಗೆ ಬಾಚಳ್ಳಮ್ಮ ದೇವಿಯ ಉತ್ಸವ ಮೂರ್ತಿಯನ್ನು ಸರ್ವಾಲಂಕೃತಗೊಂಡ ರಥಕ್ಕೆ ಪ್ರತಿಷ್ಠಾಪಿಸಲಾಯಿತು. ಗ್ರಾಮದ ಹಿರಿಯರು ರಥದ ಚಕ್ರಗಳಿಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.ರಥವು ಗ್ರಾಮದ ಅರಳೀಕಟ್ಟೆ ವೃತ್ತದಿಂದ ಆರಂಭವಾಗಿ ಮಲ್ಲಸಮುದ್ರ ಕೆರೆ ಬೀದಿ, ಶಾಲಾ ಬೀದಿಯಲ್ಲಿ ಸಾಗಿತು. ನಂತರ ಹೊಲಗದ್ದೆಗಳ ಬಯಲಿನಲ್ಲಿ ಸಾಗಿ, ಬ್ರಾಹ್ಮಣರ ಬೀದಿ,ಹೆಬ್ಬಾಗಿಲು ಬೀದಿ ಮೂಲಕ ರಂಗದ ಬೀದಿಯಲ್ಲಿ ಸಾಗಿ ರಂಗಸ್ಥಳದಲ್ಲಿ ಆಸ್ಥಾನಗೊಂಡಿತು.ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸಹಸ್ರಾರು ಭಕ್ತಾಧಿಗಳು ಬಾಚಳ್ಳಮ್ಮ ಉಘೆ… ಉಘೆ… ಲಕ್ಷ್ಮಿದೇವಮ್ಮ ಉಘೇ.. ಉಘೇ.. ಎಂಬ ಜಯಘೋಷಗಳೊಂದಿಗೆ ರಥವನ್ನು ಭಕ್ತಿ ಭಾವದಿಂದ ಎಳೆದರು. ರಥಕ್ಕೆ ಹಣ್ಣು ಜವನವನ್ನು ರಥೆಕ್ಕೆ ಎಸೆದು ದೇವರ ಕೃಫೆಗೆ ಪಾತ್ರರಾದರು.ರಥವು ಸುಮಾರು ೧ ಕಿ.ಮೀ ದೂರದಷ್ಟು ಹೊಲಗದ್ದೆಯ ಬಯಲಿನಲ್ಲಿ ಕ್ಲಿಷ್ಟಕರ ದಾರಿಯಲ್ಲಿ ಯಾವುದೇ ವಿಘ್ನವಿಲ್ಲದಂತೆ ಸಾಗುವುದು ದೇವಿಯ ಪವಾಡಕ್ಕೆ ಸಾಕ್ಷಿಯಾಗಿದೆ. ರಥೋತ್ಸವದ ಅಂಗವಾಗಿ ರಂಗಕುಣಿತ, ಸಿಡಿ, ಬಾಯಿಬೀಗ, ಕೋಲಾಟ, ಕೊಂಡೋತ್ಸವ, ಸಿಡಿಮದ್ದು, ಪ್ರದರ್ಶನ, ಸೋಮನ ಕುಣಿತ ಸೇರಿದಂತೆ ಹಲವು ಪ್ರಕಾರದ ಜನಪದ ಕುಣಿತ ನೋಡುಗರ ಗಮನ ಸೆಳೆಯಿತು.ರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತರಿಗೆ ರಥೋತ್ಸವ ಸಮಿತಿಯಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಗ್ರಾಮದಲ್ಲಿ ಸಡಗರ ಮನೆ ಮಾಡಿತ್ತು. ಗ್ರಾಮದೆಲ್ಲಡೆ ತಳಿರು ತೋರಣ ಹಾಗೂ ವಿದ್ಯುತ್ ದೀಪಾಲಂಕರಾರವನ್ನು ಮಾಡಲಾಗಿತ್ತು. ತಾಲ್ಲೂಕಿನ ಮಡುವಿನಕೋಡಿ, ಚಿಕ್ಕೋಸಹಳ್ಳಿ ಹರಿರಾಯನಹಳ್ಳಿ, ದಢಿಘಟ್ಟ, ಬೇಲದಕೆರೆ, ಚಿಲ್ಲದಹಳ್ಳಿ, ಬೊಮ್ಮನಾಯಕನಹಳ್ಳಿ, ವಳಗೆರೆಮೆಣಸ, ನಗರೂರು, ಮಾರ್ಗೋನಹಳ್ಳಿ, ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತಾಧಿಗಳು ರಥೋತ್ಸವದಲ್ಲಿ ಭಾಗವಹಿಸಿದ್ದರು.ಗೀತಗಾಯನ:ಕಿರುತೆರೆ ಕಲಾವಿದ ಅಬಾರಾಶೆ ಚಂದ್ರಶೇಖರ್, ಕಲಾವಿದ ಪ್ರಮೋದ್ ನೇತೃತ್ವದಲ್ಲಿ ಗೀತಗಾಯನ ಕಾರ್ಯಕ್ರಮ ನಡೆಯಿತುರಥೋತ್ವದಲ್ಲಿ ಜಿ.ಪಂ.ಮಾಜಿ ಸದಸ್ಯರಾದ ಹೆಚ್.ಟಿ.ಮಂಜು, ಮನ್‌ಮುಲ್ ನಿರ್ದೇಶಕ ಡಾಲು ರವಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ಸಮಾಜ ಸೇವಕರಾದ ಎ.ಜೆ.ಹರೀಶ್‌ಗೌಡ, ಎ.ಪಿ.ಕೇಶವಗೌಡ, ಗ್ರಾಮದ ಮುಖಂಡರಾದ ಲಾಳಿ ಬೋರೇಗೌಡ, ಕೆಎಸ್‌ಆರ್‌ಟಿಸಿ ಬೋರೇಗೌಡ, ನಿವೃತ್ತ ಬಿಇಓ ಎ.ಬಿ.ಪುಟ್ಟಸ್ವಾಮಿಗೌಡ, ಬ್ಯಾಟರಿ ಶಾಪ್ ಪುಟ್ಟಸ್ವಾಮೀಗೌಡ, ಬಿ.ವಿ.ನಾಗೇಶ್, ಡಿ.ರಾಜೇಗೌಡ, ಮಿಲ್ ಬೋರಲಿಂಗೇಗೌಡ, ತಾಲ್ಲೂಕು ದರಖಾಸ್ತು ಸಮಿತಿ ಸದಸ್ಯ ಆರ್.ಜಗದೀಶ್, ಪೋಸ್ಟ್ ಮಾಸ್ಟರ್ ಸುಬ್ರಹ್ಮಣ್ಯ, ಗ್ರಾ.ಪಂ. ಅಧ್ಯಕ್ಷೆ ಜಯಂತಿ ರವೀಂದ್ರ, ಉಪಾಧ್ಯಕ್ಷ ಕುಮಾರಗೌಡ, ಸದಸ್ಯರಾದ ಆರ್.ರಮೇಶ್, ಮೆಣಸ ರಮಾನಂದ್, ಚಿಲ್ಲದಹಳ್ಳಿ ಆರ್.ಶ್ರೀನಿವಾಸ್, ನೇತ್ರಾವತಿರಮೇಶ್, ರೇಣುಕಾ ಈಶ್ವರ್, ಪ್ರೇಮಾಶೇಖರ್, ಚನ್ನೇಗೌಡ, ಸಾವಿತ್ರಮ್ಮಗೋವಿಂದಶೆಟ್ಟಿ, ಪಿಡಿಓ ದೇವೇಗೌಡ, ಕಾರ್ಯದರ್ಶಿ ರವಿಕುಮಾರ್, ಬಿಲ್ ಕಲೆಕ್ಟರ್ ನರಸಿಂಹಯ್ಯ, ಗ್ರಾಮದ ಹಿರಿಯ ಮುಖಂಡರಾದ ಪಟೇಲ್ ಚಿಕ್ಕೇಗೌಡ, ಸುಬ್ಬೇಗೌಡ, ಹನುಮಂತೇಗೌಡ, ಮುಖ್ಯ ಶಿಕ್ಷಕ ಎ.ಹೆಚ್.ಯೋಗೇಶ್, ಡಿ.ಬೋರೇಗೌಡ, ಬಿ.ಎಚ್.ಮಂಜೇಗೌಡ, ಎ.ಜೆ.ಸೋಮಶೇಖರ್,ಸೆಕ್ರೆಟರಿ ಪುಟ್ಟಸ್ವಾಮೀಗೌಡ, ಮಾಜಿ ಛೇರ್ಮನ್ ನಾಗೇಗೌಡ, ಎ.ಎಸ್.ರಾಮಚಂದ್ರೇಗೌಡ, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಎ.ಎಂ ಮಂಜೇಗೌಡ , ವಿಶ್ವಕರ್ಮ ಸಮುದಾಯದ ಎಸ್.ಅಶೋಕ್, ಎ.ಸಿ.ರೂಪೇಶ್, ಪುಟ್ಟಸ್ವಾಮಾಚಾರ್, ರಾಮಕೃಷ್ಣಾಚಾರ್, ಶಿವಜ್ಯೋತಿಪಣದ ರಾಮಶೆಟ್ಟಿ, ನಾಯಕ ಸಮಾಜದ ಮುಖಂಡರಾದ ಆರ್.ಜಗದೀಶ್, ಎ.ಎನ್.ರಮೇಶ್, ಚೆಲುವರಾಜು, ಸ್ವಾಮಿ, ಸಣ್ಣಯ್ಯನ ನಾಗಯ್ಯ, ಪುಟ್ಟಸ್ವಾಮಿ, ಪೂಜಾರಿ ರವಿ, ನಾಗಣ್ಣ ಸೇರಿದಂತೆ ಹಲವು ಮುಖಂಡರು ಹಾಗೂ ಸಾವಿರಾರು ಭಕ್ತಾಧಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ

Related Articles

Leave a Reply

Your email address will not be published. Required fields are marked *

Back to top button