ಪಿವಿ ವಿಶೇಷ
ಸಿಂಗನಹಳ್ಳಿ ಚೆಕ್ಪೋಸ್ಟ್ನಲ್ಲಿ ದಾಖಲೆ ಇಲ್ಲದೆ ಸಾಗುಸುತ್ತಿದ್ದ 385500 ರೂ. ಹಣ ಜಪ್ತಿ ಮಾಡಿದ ಪೊಲೀಸರು
ಕೆ ಆರ್ ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಸಿಂಗನಹಳ್ಳಿ ಗ್ರಾಮದ ಬಳಿ 2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಚೆಕ್ ಪೋಸ್ಟ್ ನಲ್ಲಿ ತಡರಾತ್ರಿ 7.30ರಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಕೆ ಆರ್ ನಗರ ತಾಲೂಕಿನ ಭೇರ್ಯ ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಆಗಮಿಸುತ್ತಿದ್ದ ಕಿಕ್ಕೇರಿ ಹೋಬಳಿಯ ಬಸವಹಳ್ಳಿ ಗ್ರಾಮದ ಶಿವಣ್ಣ ಮತ್ತು ರಾಜು ಎಂಬವರು ದಾಖಲೆ ಇಲ್ಲದೆ 385500 ರೂ ಸಾಗಿಸುತ್ತಿದ್ದ ಹಣವನ್ನು ಕೆ ಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಜಗದೀಶ್ ನೇತೃತ್ವದಲ್ಲಿ ವಶಕ್ಕೆ ಪಡೆದ ಘಟನೆ ನಡೆದಿದೆ.ಈ ಸಂದರ್ಭದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಗದೀಶ್,ಅಕ್ಕಿಹೆಬ್ಬಾಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ್,ಪೊಲೀಸ್ ಸಿಬ್ಬಂದಿಗಳಾದ ಗೌಸ್ ಖಾನ್,ಪ್ರಕಾಶ್, ವಿರೂಪಾಕ್ಷ, ಅರೆಸೇನಾಪಡೆ ತಂಡ ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ