2023 ರ ಚುನಾವಣೆಯಲ್ಲಿ ಬೊಮ್ಮಾಯಿ ಪ್ರತಿಸ್ಪರ್ಧಿ ಯಾರು ?
ವರದಿ ದಾವಲ್ ಸಾಬ್ ಎಂ ಹುಬ್ಬಳ್ಳಿ
ಮುಖ್ಯಮಂತ್ರಿ ಬಸವರಾಜ.ಎಸ್.ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾವಿ – ಸವಣೂರು ವಿಧಾನಸಭಾ ಕ್ಷೇತ್ರ ರಾಜ್ಯದ ಗಮನ ಸೆಳೆದಿದೆ. ಈ ಶಿಗ್ಗಾವಿ ವಿಧಾನಸಭಾ ಕ್ಷೇತ್ರವು ಕನ್ನಡ ನಾಡಿಗೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದ ಹಿರಿಮೆ ಹೊಂದಿದೆ. ಈ ಕ್ಷೇತ್ರದಿಂದ ಎಸ್ ನಿಜಲಿಂಗಪ್ಪ ಅವರು 1967 ರಲ್ಲಿ ಅವಿರೋಧವಾಗಿ ಆಯ್ಕೆಯಾಗಿ ಮುಖ್ಯಮಂತ್ರಿಯಾಗಿದ್ದರು.
ಹಿಂದೂ, ಮುಸ್ಲಿಂ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಕಳೆದ 2008 ರಿಂದ ಸತತವಾಗಿ ಮೂರು ಚುನಾವಣೆಗಳಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಬೊಮ್ಮಾಯಿ ನಾಲ್ಕನೇ ಬಾರಿಯೂ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಆದರೆ, ಈ ಸಾರಿ ಬಸವರಾಜ ಬೊಮ್ಮಾಯಿ ಅವರನ್ನು ಸೋಲಿಸಲು ಕಾಂಗ್ರೆಸ್ ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದೆ.
ಹಿಂದಿನ ಮೂರು ವಿಧಾನಸಭಾ ಚುನಾವಣೆಗಳಲ್ಲಿ ಬೊಮ್ಮಾಯಿಯವರಿಗೆ ಪೈಪೋಟಿ ನೀಡಿದ್ದ ಸಯ್ಯದ್ ಅಜ್ಜಂಪಿರ್ ಖಾದ್ರಿ ಅವರು ಮತ್ತೊಮ್ಮೆ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ.65ಸಾವಿರ ಮತಗಳು ಅಲ್ಪಸಂಖ್ಯಾತರು.80ಸಾವಿರ ಮತಗಳು.ಲಿಂಗಾಯೆತಮತಗಳು 30ಸಾವಿರ ಕುರುಬರ ಮತಗಳು ಎಸ್ ಸಿ ಎಸ್ ಟಿ 40 ಸಾವಿರ ಮತಗಳು ಲಂಬಾಣಿ ಜನಾಂಗದ 9,000 ಮತಗಳು ಇತರರು32,000 ಮತಗಳು ಒಂದು ವೇಳೆ ವಿನಯ್ ಕುಲಕರ್ಣಿ ಅಭ್ಯರ್ಥಿಯಾದರೆ. ಅಜಂ ಪೀರ್ ಖಾದರಿ ಸಪೋರ್ಟ್ ಬೇಕೇ ಬೇಕು 2018ಚುನಾವಣೆ ಎಲ್ಲಿ ಅಜ್ಜಂಪೀರ್ ಖಾದರಿ ವೈಯಕ್ತಿಕ ವರ್ಚಸ್ಸಿನ 75 ಸಾವಿರ ಮತಗಳು ಪಡೆದು ಕೇವಲ 9ಸಾವಿರ ಮತಗಳಿಂದ ಸೋಲು ಅನುಭವಿಸಿದರು. ವಿನಯ್ ಕುಲಕರ್ಣಿ ಅಭ್ಯರ್ಥಿಯಾದರೆ ಪಂಚಮಸಾಲಿ ಲಿಂಗಾಯತರ ಮತಗಳನ್ನು 40ಸಾವಿರ ಮತಗಳ ಪಡೆದರೆ ಮಾಜಿ ಶಾಸಕ ಅಜಿಮ್ ಪೀರ್ ಖಾದ್ರಿ ಅವರ ಬೆಂಬಲ ಇದ್ದರೆ ಜಯದ ಮಾಲೆ ನೂರಕ್ಕೆ ನೂರು ಅಂತ ಕ್ಷೇತ್ರದಲ್ಲಿ ಮತದಾರು ಹೇಳುತ್ತಿದ್ದಾರೆ.
ಜೊತೆಗೆ ಶಶಿಧರ ಯಲಿಗಾರ, ಷಣ್ಮುಖಪ್ಪ ಶಿವಳ್ಳಿ , ಸೋಮಣ್ಣ ಬೇವಿನಮರದ, ಯಾಸೀರಖಾನ್ ಪಠಾಣ, ಸಂಜೀವಕುಮಾರ ನೀರಲಗಿ, ರಾಜೇಶ್ವರಿ ಪಾಟೀಲ, ಶಾಕೀರ ಸನದಿ, ನೂರಮ್ಮದ್ ಮಳಗಿ, ಎಸ್.ಜಿ ಪಾಟೀಲ, ಎಸ್.ವಿ ಪಾಟೀಲ, ಸೇರಿದಂತೆ 13 ಅಭ್ಯರ್ಥಿಗಳು ಕೈ ಟಿಕೇಟ್ ಆಕಾಂಕ್ಷಿಗಳಾಗಿದ್ದಾರೆ.
ಈ ನಡುವೆ ಸದ್ಯದ ಮಟ್ಟಿಗೆ ಧಾರವಾಡ ಜಿಲ್ಲಾ ಪ್ರವೇಶ ನಿಷೇಧಿಸಲ್ಪಟ್ಟಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಹೆಸರು ಕಾಂಗ್ರೆಸ್ ಪಕ್ಷದಲ್ಲಿ ಓಡಾಡುತ್ತಿದೆ ಎಂದು ಮತದಾರರು ವ್ಯಕ್ತಪಡಿಸಿದ್ದಾರೆ.
ಇಲ್ಲಿ ವಿಶೇಷ ಏನೆಂದರೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದನೀಗೂಢ ನಡೆ ಕ್ಷೇತ್ರದಲ್ಲಿ ಸಂಚಲನಮೋಡಿಸಿದೆ. ಬಿಜೆಪಿ ಬಿ ಟೀಮ್ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆಂದು ಕ್ಷೇತ್ರದ ಜನರು ಹೇಳುತ್ತಿದ್ದಾರೆ ಯಾಕೆ ಅಂದರೆ ಶಿಗ್ಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಬೇಕು ನಾನೇ ಮುಂದಿನ ಸರಕಾರದಲ್ಲಿ ಮಂತ್ರಿ ಆಗಬೇಕು ಎಂಬ ದುರಾಸೆ ಇಟ್ಟುಕೊಂಡಿದ್ದಾರೆಂದು ಕ್ಷೇತ್ರದ ಜನರು ಮಾತನಾಡುತ್ತಿದ್ದಾರೆ.ಈ ಕ್ಷೇತ್ರದಲ್ಲಿ ಕಾರ್ಯಧ್ಯಕ್ಷ ಸಲೀಂ ಅಹಮ್ಮದ್ ಆಟ ಕುಂಟು ಲೆಕ್ಕಕ್ಕಿಲ್ಲ
ಈ ಕ್ಷೇತ್ರದಲ್ಲಿ ಒಟ್ಟಾರೆ ಗಮನಿಸಿದರೆ ಆಜಂಪೀರ್ ಖಾದ್ರಿ ಯಾರಿಗೆ ಬೆಂಬಲ ಸೂಚಿಸುತ್ತಾರೋ ಅವರೇ ಎಂಎಲ್ಎ ಆಗುತ್ತಾರೆಂದು ಕ್ಷೇತ್ರದ ಜನರು ಮಾತನಾಡುತ್ತಿದ್ದಾರೆ.
*ಶಿಗ್ಗಾವಿ – ಸವಣೂರು ವಿಧಾನಸಭಾ ಮತಕ್ಷೇತ್ರ*
ಒಟ್ಟು ಮತದಾರರು:- 2,20,984ಪುರುಷರು:- 1,14,155 ಮಹಿಳೆಯರು:- 1,06,829 *ಈ ಬಾರಿ ಶಿಗ್ಗಾoವಿಸವಣೂರು ಹೈ ವೋಲ್ಟೇಜ್ ಕ್ಷೇತ್ರವಾಗಿ ಚುನಾವಣೆ ನಡೆಯುವುದು ನೂರಕ್ಕೆ ನೂರು ಸತ್ಯ ಸಮೀಕ್ಷೆ ಪ್ರಕಾರ. ಬಸವರಾಜ್ ಬೊಮ್ಮಾಯಿಗೆ ಪ್ರಬಲ ಅಭ್ಯರ್ಥಿ ಅಜಂಪೀರ್ ಎಸ್ ಖಾದ್ರಿ ಅವರನ್ನು ಬಿಟ್ಟರೆ ವಿನಯ್ ಕುಲಕರ್ಣಿ ಪ್ರಬಲ ಅಭ್ಯರ್ಥಿಯೆಂದು ಕ್ಷೇತ್ರದ ಜನರ ಅಭಿಪ್ರಾಯವಾಗಿದೆ ಹಾಗಾದರೆ ಮತದಾರ ಪ್ರಭು ಯಾರೇ ಕಡೆಯ ಒಲಿಯುತ್ತಾರೆ ಮುಂದಿನ ದಿನದಲ್ಲಿ ಕಾದು ನೋಡೋಣ.