ಪಿವಿ ವಿಶೇಷ

ಬಿಜೆಪಿ ಟಿಕೇಟ್ ನರೇಂದ್ರ ರಾಠೋಡ್‌ಗೆ ನೀಡಲು ಆಗ್ರಹ

ಗುರುಮಠಕಲ್ : ಮತಕ್ಷೇತ್ರದಲ್ಲಿ ಬಂಜಾರ ಸಮಾಜದ ಮತದಾರರು ಹೆಚ್ಚು ಜನರಿದ್ದು, ಈ ಸಲ ಬಿಜೆಪಿ ವಿಧಾನ ಸಭೆ ಟಿಕೇಟ್‌ನ್ನು ನಮ್ಮ ಸಮಾಜದ ಮುಖಂಡ ಹಾಗು ಉದ್ಯಮಿ ನರೇಂದ್ರ ರಾಠೋಡ್ ಅವರಿಗೆ ನೀಡಬೇಕು ಎಂದು ತಾಲೂಕ ಅಲ್ ಇಂಡಿಯಾ ಬಂಜಾರ ಸಮಿತಿ ಪ್ರಧಾನ ಕಾರ್ಯದರ್ಶಿ ಮೊಹನ ರಾಠೋಡ್ ಆಗ್ರಹಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಂಜಾರ ಸಮಾಜವು ಮತಕ್ಷೇತ್ರದಲ್ಲಿ ಅಂದಾಜು ೪೦ ಸಾವಿರ ಮತದಾರರಿದ್ದಾರೆ. ಈ ಸಮಾಜವು ಯಾವುದೇ ಪಕ್ಷವು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದಕ್ಕಾಗಿ ನಮ್ಮ ಸಮಾಜಕ್ಕೆ ಅಧ್ಯತೆ ನೀಡಬೇಕಾಗಿದೆ.ಕಳೆದ ಸಲ ಲೋಕಸಭೆಯಲ್ಲಿ ಬಂಜಾರ ಸಮಾಜದ ಮತದಾರರು ಬಿಜೆಪಿ ಪಕ್ಷ ಗೆಲ್ಲುವಲ್ಲಿ ನಿರ್ಣಾಯಕವಾಗಿತ್ತು. ನಮ್ಮ ಸಮಾಜದ ಮುಖಂಡ ನರೇಂದ್ರ ರಾಠೋಡ್ ಸ್ಥಳೀಯರಾಗಿದ್ದು, ಸಮಾಜಕ್ಕೆ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬರಿಗೆ ಸಹಾಯ ಮಾಡುವ ಗುಣುಳ್ಳವರಾಗಿದ್ದಾರೆ. ಬಂಜಾರ ಸಮಾಜದ ಪ್ರಭಾವಿ ನಾಯಕರಾಗಿದ್ದಾರೆ ಎಂದು ಅವರು ತಿಳಿಸಿದರು.ಇದೇ ವೇಳೆ ಸಮಾಜದ ಪ್ರಮುಖರಾದ ಬಸ್ಸು ನಾಯಕ್,ರೇಖೆ ನಾಯಕ,ಬುಗ್ಯ ನಾಯಕ, ತುಲಸಿ ನಾಯಕ್, ಬಿಕ್ಯಾ ನಾಯಕ್, ಕೃಷ್ಣ, ಪ್ರಕಾಶ, ಗೋಪಾಲ ಸೇರಿದಂತೆ ಇತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button