ತೆನೆ ಇಳಿಸಿ ಕೈ ಸೇರಲು ಮುಂದಾದ ಜೆಡಿಎಸ್ ಹಿರಿಯ ಮುಖಂಡ ಬಿ ಎಲ್ ದೇವರಾಜು
ಜಾತ್ಯಾತೀತ ಜನತಾದಳ ಪಕ್ಷದ ಹಿರಿಯ ಮುಖಂಡ, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್ ದೇವರಾಜು ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷವನ್ನು ಇದೇ ಸೋಮವಾರ ಕಾಂಗ್ರೆಸ್ ರಾಜ್ಯ ನಾಯಕರ ಸಮ್ಮುಖದಲ್ಲಿ ಸೇರ್ಪಡೆಯಾಗುತ್ತಿದ್ದೇನೆ ಎಂದು ಹೇಳಿದರು.
ಕೆ ಆರ್ ಪೇಟೆ ಪಟ್ಟಣದಲ್ಲಿರುವ ಪ್ರವಾಸಿ ಮಂದಿರದಲ್ಲಿ ಬೆಂಬಲಿಗರು ಮತ್ತು ಅಭಿಮಾನಿಗಳು ಸಮ್ಮುಖದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜೆಡಿಎಸ್ ಪಕ್ಷದಲ್ಲಿ ಸತತವಾಗಿ 40 ವರ್ಷದಿಂದ ಪ್ರಾಮಾಣಿಕ ಕಾರ್ಯಕರ್ತರಂತೆ ಪಕ್ಷಕ್ಕೆ ದುಡಿದಿದ್ದೇನೆ ಜೆಡಿಎಸ್ ಪಕ್ಷಕ್ಕೆ ನನ್ನ ಸೇವೆ ಅಪಾರವಾಗಿದೆ ನನಗೆ ಎರಡು ಬಾರಿ ಸಂಕಷ್ಟ ಸಮಯದಲ್ಲೇ ಪಕ್ಷದ ಅಭ್ಯರ್ಥಿಯಾಗಿ ಘೋಷಿಸಿದರು ಆದರೆ ಈಗ ಗೆಲ್ಲುವ ಸಮಯದಲ್ಲಿ ನಮ್ಮನ್ನು ಪರಿಗಣಿಸುತ್ತಿಲ್ಲ,ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಮೇಲೆ ಆಪಾದನೆ ವಹಿಸಿದ ವ್ಯಕ್ತಿಗಳಿಗೆ ಸ್ಥಾನಮಾನ ದೊರಕುತ್ತಿದೆ ನಮ್ಮಂತ ಪ್ರಾಮಾಣಿಕರಿಗೆ ಜೆಡಿಎಸ್ ನಲ್ಲಿ ಸ್ಥಳವಿಲ್ಲ, ನಮ್ಮನ್ನು ಪರಿಗಣಿಸಿ ಎಂದು ಎರಡು ಬಾರಿ ಬೃಹತ್ ಕಾರ್ಯಕರ್ತ ಸಮಾವೇಶದ ಮೂಲಕ ಟಿಕೆಟ್ ಮರುಪರಿಶೀಲನೆ ಮಾಡಿ ಎಂದು ಬಹಿರಂಗ ಸಭೆ ಮಾಡಿದರು ಕೂಡ ನನ್ನ ಮತ್ತು ಬೆಂಬಲಿಗರು ಅಭಿಮಾನಿಗಳನ್ನ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕಿಡಿಗೇಡಿಗಳು ಎಂದು ಭಾವಿಸಿದರು. ಜೆಡಿಎಸ್ ಪಕ್ಷ ಹಿಂದಿನಿಂದಲೂ ಪಕ್ಷದ ನಿಷ್ಠಾವಂತರಿಗೆ ಗೌರವಿಸುವ ಕೆಲಸ ಮಾಡಿಲ್ಲ ಹಾಗಾಗಿ ಜೆಡಿಎಸ್ ಪಕ್ಷ ತೊರೆದು ಸೋಮವಾರ ಬೆಂಗಳೂರಿನಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ವಿರೋಧಪಕ್ಷ ನಾಯಕ ಸಿದ್ದರಾಮಯ್ಯ, ಕೇಂದ್ರ ಮಾಜಿ ಸಚಿವ ರೆಹಮಾನ್ ಖಾನ್, ಮಾಜಿ ಸಚಿವ ಚೆಲುವರಾಯಸ್ವಾಮಿ ರವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತೇನೆ ಎಂದು ಜೆಡಿಎಸ್ ಹಿರಿಯ ಮುಖಂಡ ಬಿ.ಎಲ್ ದೇವರಾಜು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಳಿಕ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ ಗಂಗಾಧರ್ ರಾಜ್ಯಾದ್ಯಂತ ಅಧಿಕಾರ ಚುಕ್ಕಾಣಿ ಹಿಡಿಯುವುದು ನಿಶ್ಚಯ ಎಂಬ ಕೂಗು ಹಬ್ಬರಿಸುತ್ತಿರುವ ಸಂದರ್ಭದಲ್ಲಿಯೇ ತಾಲೂಕಿನಲ್ಲಿ 40ವರ್ಷ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಂತೆ ದುಡಿದ ಬಿ.ಎಲ್ ದೇವರಾಜು ನಮ್ಮ ಪಕ್ಷದ ಸಿದ್ಧಾಂತಗಳನ್ನು ಒಪ್ಪಿ ಅವರ ಆತ್ಮೀಯರು ಹಾಗೂ ಪಕ್ಷದ ಮುಖಂಡರುಗಳನ್ನು ನಮ್ಮ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದು ನಮ್ಮಗೆ ಆನೆ ಬಲಬಂದಂತಾಗಿದೆ ಅವರನ್ನು ತುಂಬುಹೃದಯದಿಂದ ಸ್ವಾಗತಿಸಿ ಮುಂದಿನ ದಿನಗಳಲ್ಲಿ ಅವರನ್ನ ಗುರುತಿಸುವ ಕೆಲಸ ನಮ್ಮ ಪಕ್ಷ ಪ್ರಾಮಾಣಿಕವಾಗಿ ಮಾಡುತ್ತದೆ ಎಂದು ಹೇಳಿದರು.
ನಂತರ ತಾಲೂಕಿನ ಮಾಜಿ ಶಾಸಕ ಕೆ ಬಿ ಚಂದ್ರಶೇಖರ್, ಮಾಜಿ ಶಾಸಕ ಬಿ ಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್ ಐಪನಹಳ್ಳಿ ನಾಗೇಂದ್ರ ಕುಮಾರ್, ಹಿರಿಯ ಮುಖಂಡ ಎಂ ಡಿ ಕೃಷ್ಣಮೂರ್ತಿ ರವರು ಜೊತೆಗೂಡಿ ಬಿ.ಎಲ್ ದೇವರಾಜು ಕೈ ಮೇಲಕ್ಕೆತ್ತುವ ಮೂಲಕ ಒಗ್ಗಟ್ಟಿನ ಸಂಕೇತ ಸಾರಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಬಸ್ ಕೃಷ್ಣೆಗೌಡ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ರಾಮದಾಸ್, ವಿಠಲಪುರ ಸುಬ್ಬೆಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಶಶಿಧರ್ ಸಂಗಾಪುರ, ಕಂಠಿ ರಮೇಶ್, ಅಲಂಬಾಡಿ ರಾಜು,ನಟನಹಳ್ಳಿ ಪವನ್, ದೊಡ್ಡಗಾಡಿಗನಹಳ್ಳಿ ಲೋಕೇಶ್, ಕುಂದನಹಳ್ಳಿ ಜಿಲ್ಲಾ ಕಾಂಗ್ರೆಸ್ ವಕ್ತರ ಡಾ.ರಾಮಕೃಷ್ಣೇಗೌಡ ಮಾದಾಪುರ,ರಾಜಯ್ಯ, ರಾಜಣ್ಣ,ಯೂಥ್ ಕಾಂಗ್ರೆಸ್ ಅಧ್ಯಕ್ಷ ಚಿಕ್ಕೋನಹಳ್ಳಿ ಚೇತನ್, ಗಾಣದಹಳ್ಳಿ ಅಶೋಕ್,ದಿನೇಶ್,ಕೆರೆಕೊಡಿ ಆನಂದ, ಚಂದ್ರು,ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ