ಚಿಂಚನಸೂರ್ ದಿಂದ ಜೆಡಿಎಸ್ ಗೆ ಯಾವುದೇ ಪರಿಣಾಮ ಬೀರುವುದಿಲ್ಲ: ಕುಮಾರ ಸ್ವಾಮಿ
ಗುರುಮಠಕಲ್ : ಮತಕ್ಷೇತ್ರದಲ್ಲಿ ಬಿಜೆಪಿ ಎಂ ಎಲ್ ಸಿ ಬಾಬುರಾವ್ ಚಿಂಚನಸೂರ್ ಕಾಂಗ್ರೆಸ್ ಘರ್ ವಾಪಸ್ಸಿ ಆಗಿರುವುದರಿಂದ ಕ್ಷೇತ್ರದಲ್ಲಿ ಜೆಡಿಎಸ್ ಗೆ ಯಾವುದೇ ರೀತಿಯ ಪರಿಣಾಮ ಉಂಟಾಗುವುದಿಲ್ಲ ಎಂದು ಕುಮಾರ ಸ್ವಾಮಿ ಭರವಸೆ ನೀಡಿದರು.
ಪಟ್ಟಣದ ಶಾಸಕ ನಾಗನಗೌಡ ಕಂದಕೂರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ
ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಅಭಿವೃದ್ಧಿ ಕೆಲಸಗಳು ಹಾಗು ಶರಣು ಗೌಡ ಕಂದಕೂರ ಅವರ ಕ್ಷೇತ್ರದ ಮೇಲೆ ಇರುವ ಕಾಳಜಿ ಯಿಂದ ಜನರು ಮತ್ತು ಯುವಕರು ಜೆಡಿಎಸ್ ಪರ ವಾಗಿದ್ದರೆ ಎಂಬುದಕ್ಕೆ ಯರಗೋಳ ಗ್ರಾಮ ದಲ್ಲಿ ಜರುಗಿದ ಐತಿಹಾಸಿಕ ಪಂಚರತ್ನ ಯಾತ್ರೆ ಆಯೋಜನೆ ನಿದರ್ಶನವಾಗಿದೆ.
ಬಾಬುರಾವ್ ಚಿಂಚನಸೂರ್ ತೊಡೆ ತಟ್ಟಿ ಖರ್ಗೆ ಅವರನ್ನು ಸೋಲಿಸುತ್ತೇನೆ ಎಂದವರಿಗೆ ಕೆಂಪು ಹಾಸಿಗೆ ಹಾಕಿರುವುದು ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೊರತೆ ಇದೆ ಎಂಬುದು ಕಾಣುತ್ತಿದೆ.ನಮ್ಮ ಶರಣು ಗೌಡ ಕಂದಕೂರ ಹವಾ ಗೆ ಹೆಚ್ಚಿನ ಅಂತರದಲ್ಲಿ ಗೆಲುವು ದಾಖಲೆ ಮಾಡುತ್ತಾರೆ ಎಂಬ ಆತ್ಮ ವಿಶ್ವಾಸ ವ್ಯಕ್ತ ಪಡಿಸಿದರು.
ಬಾಬುರಾವ್ ತಮ್ಮ ಕೋಲಿ ಜಾತಿಯನ್ನು ಎಸ್.ಟಿ ಗೆ ಸೇರಿಸುತ್ತೇನೆ ಎಂದು ಬಿಜೆಪಿ ಗೆ ಸೇರ್ಪಡೆ ಆಗಿದ್ದರು ಎಲ್ಲ ಅಧಿಕಾರ ಅನುಭವಿಸಿದರು ಅದ್ರೆ ಅವರು ಏನು ಮಾಡಿದರು. ಮುಂದೆ ಅವರ ಜಾತಿ ಸಮಾಜಕ್ಕೆ ಏನು ಉತ್ತರಿಸುತ್ತಾರೆ ಅವರಿಗೆ ಯಾವ ರೀತಿ ತಕ್ಕ ಪಾಠ ಕಳಿಸುತ್ತಾರೆ ಎಂಬುದು ಕ್ಷೇತ್ರದ ಜನರು ಚುನಾವಣೆ ಯಲ್ಲಿ ತೋರಿಸುತ್ತಾರೆ ಎಂದರು.
ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳ ಕೊರತೆ ಎದ್ದು ಕಾಣುತ್ತಿದೆ.ಇದರಿಂದ ಕಾಂಗ್ರೆಸ್ ಚುನಾವಣೆ ಮುಂಚೆ ಆಪರೇಷನ್ ಹಸ್ತ ಮಾಡುತ್ತಿದೆ ಚುನಾವಣೆ ಫಲಿತಾಂಶ ಬಂದ ನಂತರ ಬಿಜೆಪಿ ಕಮಲ ಆಪರೇಷನ್ ಮಾಡುತ್ತಾ ಬಂದಿದೆ ಎಂದು ರಾಷ್ಟ್ರೀಯ ಪಕ್ಷಗಳ ಕುರಿತು ವ್ಯಂಗ್ಯವಾಗಿ ಮಾತನಾಡಿದರು.
ಸರಕಾರ ಜಾಹೀರಾತುಗಳಲ್ಲಿ ರಾಜ್ಯದ ಅಭಿವೃದ್ಧಿ ಕುರಿತು ಬಿಂಬಿಸುತ್ತಿದೆ ಜಾಹೀರಾತು ಗಳಿಗೆ ನೀಡುವ ಆದ್ಯತೆ ಜನತೆ ಮೇಲೆ ಮತ್ತು ರಾಜ್ಯದ ಅಭಿವೃದ್ಧಿ ಪರ ತೋರಿಸ ಬೇಕಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಒಬ್ಬ ಇಲಾಖೆ ಅಧಿಕಾರಿ ಮತ್ತು ಶಾಸಕರು ಮಾಡಬೇಕಾದ ಶಂಕು ಸ್ಥಾಪನೆ ಗಳು ಚುನಾವಣೆ ಹಿನ್ನಲೆಯಲ್ಲಿ ಅಮಿತ ಷಾ ಮತ್ತು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಬಂದು ಉದ್ಘಾಟನೆ ಮಾಡುತ್ತಿರುವುದು ಚುನಾವಣೆ ಪ್ರಚಾರದ ಹೊಸ ದಾರಿಗೆ ನಾಂದಿ ಹಾಡಿದ್ದಾರೆ. ಬಿಜೆಪಿ ಡಬಲ್ ಇಂಜಿನ್ ಸರಕಾರ ಎಂದು ಜಂಭ ಕೊಚ್ಚಿ ಕೊಳ್ಳು ತ್ತಿದ್ದು ಅವರು ಅಭಿವೃದ್ಧಿ ಕಡೆಗಣಿಸಿರುವ ಕಾರಣಕ್ಕಾಗಿ ಸ್ಥಳೀಯ ನಾಯಕರ ಮೇಲೆ ಭರವಸೆ ಇಲ್ಲದ ಕಾರಣ ಪ್ರತಿಯೊಂದು ಕಾಮಗಾರಿ ಅಸಂಪೂರ್ಣ ವಾಗಿದ್ದರು ಕೇಂದ್ರ ದಿಂದ ಸಚಿವರು ಮತ್ತು ಪ್ರಧಾನಿ ಗಳು ಬರುತ್ತಿರುವುದು ಅವರ ಹತಾಶೆ ಗೆ ಒಳಗಾಗಿದ್ದಾರೆ ಅನ್ನಿಸುತ್ತದೆ ಮತ್ತು ಹಾಸ್ಯ ಸ್ಪದವಾಗಿದೆ ಎಂದು ಬಿಜೆಪಿ ಕುರಿತು ಲೇವಡಿ ಮಾಡಿದರು.
ಮೋದಿ ಎಲ್ಲ ಕಾರ್ಯಕ್ರಮಗಳು ಮತ್ತು ಶಂಕು ಸ್ಥಾಪನೆ ಗಳು ಮುಗಿದ ಮೇಲೆ ಅವರು ಹೇಳಿದ ದಿನಾಂಕಕ್ಕೆ ಚುನಾವಣೆ ಆಯೋಗ ಚುನಾವಣೆ ದಿನಾಂಕ ದ ಮುಹೂರ್ತ ಫಿಕ್ಸ್ ಮಾಡುತ್ತಾರೆ ಮೋದಿ ಹೇಳುವ ತನಕ ಚುನಾವಣೆ ಮುಹೂರ್ತ ಫಿಕ್ಸ್ ಮಾಡುವುದಿಲ್ಲ ಎಂದು ಅವರು ಆರೋಪಿಸಿದರು.
ಜೆಡಿಎಸ್ ಪಕ್ಷವು ಯುವಕರಿಗೆ ಹೆಚ್ಚಿನ ಟಿಕೆಟ್ ನೀಡಿ ಹೊಸ ರಾಜಕೀಯಕ್ಕೆ ಹೊಸ ಆದ್ಯತೆ ನೀಡುತ್ತಿದ್ದೇನೆ. ನಮ್ಮ ಸರಕಾರ ಅಧಿಕಾರಕ್ಕೆ ಬರುತ್ತದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರ್ ದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯಲು ಕಾರಣ ಏನು ಮತ್ತು ಇಂದು ಬಾದಾಮಿ ಯಲ್ಲಿ ಪ್ರಚಾರ ಮಾಡುತ್ತಿರುವ ಕುರಿತು ಅವರಿಗೆ ಸುದ್ದಿಗಾರರು ಪ್ರಶ್ನೆಸಿದಾಗ ರಾಜಕೀಯದಲ್ಲಿ ಸೋಲು ಗೆಲವು ಸಾಮಾನ್ಯ ವಾಗಿದೆ ಅದ್ರೆ ಸಿದ್ದರಾಮಯ್ಯ ಕೋಲಾರದಲ್ಲಿ ನಿಲ್ಲದಿಲ್ಲ ಎಂಬುದು ಗಿಮಿಕ್ ಮಾಡುತ್ತಿದ್ದಾರೆ ಎಂಬುದು ನನಗೆ ತಿಳಿಯುವುದಿಲ್ಲ.
ಬೀದರ್ ಶಾಸಕ ಬಂಡೆಪ್ಪ ಕಾಶಂಪೂರ್, ಶಾಸಕ ನಾಗನಗೌಡ ಕಂದಕೂರ, ಜೆಡಿಎಸ್ ನಿಯೋಜಿತ ಅಭ್ಯರ್ಥಿ ಶರಣು ಗೌಡ ಕಂದಕೂರ, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಪ್ರಕಾಶ್ ನಿರಿಟಿ, ಹಿರಿಯ ಮುಖಂಡರಾದ ಜಿ.ತಮ್ಮಣ್ಣ .
ವರದಿಗಾರರು : ಚೆನ್ನಕೇಶವಲು ಗೌಡ
ಗುರುಮಠಕಲ್: ತಾಲೂಕು